CM, DCM, ಗೃಹಸಚಿವರ ವಿರೋಧ ಪೋಸ್ಟ್ ;10 ಜಿಲ್ಲೆಯ 15 ಠಾಣೆಗಳಲ್ಲಿ ಪ್ರಕರಣ ದಾಖಲು

ಉತ್ತರಕಾಂಡ ರಾಜ್ಯದಲ್ಲಿ ಆರೋಪಿ ಬಂಧನ

Team Udayavani, Dec 4, 2024, 7:51 PM IST

13-koratagere

ಕೊರಟಗೆರೆ: ಸಿಎಂ, ಡಿಸಿಎಂ, ಗೃಹಸಚಿವ, ಸಣ್ಣನೀರಾವರಿ ಸಚಿವ, ವಸತಿ ಸಚಿವ, ಇಂಧನ ಸಚಿವ ಸೇರಿ 15ಕ್ಕೂ ಅಧಿಕ ಸಚಿವರ ವಿರುದ್ದ ಅವಾಚ್ಯ ಶಬ್ದದಿಂದ ನಿಂದನೆ ಮತ್ತು ವೈಯಕ್ತಿಕ ತೇಜೋವಧೆಯ ವಿಡಿಯೋ ಮಾಡಿ ಫೇಸ್‍ಬುಕ್, ಇನ್‌ಸ್ಟಾಗ್ರಾಂ ಮತ್ತು ಎಕ್ಸ್ ಖಾತೆಗಳಲ್ಲಿ ಹರಿಯಬಿಟ್ಟು, ಉತ್ತರಕಾಂಡ ರಾಜ್ಯದ ಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಭಜರಂಗ ದಳದ ಕಾರ್ಯಕರ್ತನನ್ನು ಕೊರಟಗೆರೆ ಪಿ.ಎಸ್.ಐ. ಚೇತನಗೌಡ ನೇತೃತ್ವದ ತಂಡ ಇತ್ತೀಚಿಗೆ ಬಂಧಿಸಿರುವ ಘಟನೆ ನಡೆದಿದೆ.

ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ್, ವಸತಿ ಸಚಿವ ಜಮೀರ್‍ ಅಹಮ್ಮದ್, ಇಂಧನ ಸಚಿವ ಕೆ.ಜೆ.ಜಾರ್ಜ್ ಸೇರಿ ಹಲವರ ವಿರುದ್ದ ಬಿಜೆಪಿ ಕಾರ್ಯಕರ್ತ 1 ರಿಂದ 2 ನಿಮಿಷದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟು ಸರಕಾರದ ಘನತೆಗೆ ದಕ್ಕೆ ತಂದಿರುವ ಬಗ್ಗೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದೂರಿನ ಅನ್ವಯ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ಕಾರ್ಯಕರ್ತನಾಗಿ ಕೆಲಸ ಮಾಡಿರುವ ಮೋಹಿತ್ ನರಸಿಂಹಮೂರ್ತಿ ಪ್ರಸ್ತುತ ಉತ್ತರಕಾಂಡದ ಉಕ್ಕಿಮಠದಲ್ಲಿ ಬಿಜೆಪಿ ಸಂಘಟಕನಾಗಿ ಕೆಲಸ ಮಾಡುತ್ತಾ ಜೀವನಕ್ಕಾಗಿ ಟೀ ಅಂಗಡಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ರಾಜ್ಯಸರಕಾರ ಮತ್ತು ಸಚಿವರ ವಿರುದ್ದ ಮನಸ್ಸಿಗೆ ಬಂದಂತೆ ಮಾತನಾಡಿದ್ದ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಹಿತ್ ನರಸಿಂಹಮೂರ್ತಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಚಿಕ್ಕಬಳ್ಳಾಪುರ ಲೋಕಾಸಭೆಗೆ ಸ್ಪರ್ಧೆ..

ದಾಬಸ್‍ಪೇಟೆ ತಾಲೂಕು ನಲ್ಲೂರಿನ ಲೇ. ನರಸಿಂಹಮೂರ್ತಿಯ ಮಗ, ಆರೋಪಿ ಮೋಹಿತ್ ನರಸಿಂಹಮೂರ್ತಿ 2024-25ನೇ ಸಾಲಿನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕೊಳಲು ಚಿಹ್ನೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಟೇವಣಿ ಕಳೆದುಕೊಂಡಿದ್ದಾನೆ. ಪ್ರಸ್ತುತ ಉತ್ತರಕಾಂಡದಲ್ಲಿ ಖಾಸಗಿ ಪಕ್ಷವೊಂದರ ಸಂಘಟಕನಾಗಿ ಗುರುತಿಸಿಕೊಂಡು ಪ್ರಚಾರದಲ್ಲಿ ನಿರತನಾಗಿದ್ದ ಎಂದು ತಿಳಿದು ಬಂದಿದೆ.

10 ಜಿಲ್ಲೆಗಳಲ್ಲಿ 15 ಪ್ರಕರಣ ದಾಖಲು..

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೊರಟಗೆರೆ, ಮೈಸೂರು, ಕಲಬುರ್ಗಿ, ಶಿವಮೊಗ್ಗ, ಬೆಳಗಾವಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಆರೋಪಿ ಮೊಹಿತ್ ನರಸಿಂಹಮೂರ್ತಿ ಮೇಲೆ ಭಾರತೀಯ ನಾಗರೀಕ ಸುರಕ್ಷಾ ಕಾಯ್ದೆಯಡಿ ಒಟ್ಟು 12 ಪ್ರಕರಣ  ದಾಖಲಾಗಿವೆ. ಇದಲ್ಲದೇ ಉತ್ತರಕಾಂಡದ ಚಾರದಾಮ ಯಾತ್ರೆ ಮಾಡಿಸುವ ಆಮಿಷವೊಡ್ಡಿ ಕರ್ನಾಟಕದ 10 ಜನ ಭಕ್ತರಿಗೆ ಪಂಗನಾಮ ಹಾಕಿರುವ ಹಿನ್ನಲೆ 3 ಕಡೆ ಮೋಸದ ಪ್ರಕರಣಗಳು ದಾಖಲಾಗಿವೆ.

ಉತ್ತರಕಾಂಡ ರಾಜ್ಯದಲ್ಲಿ ಬಂಧನ..

ತುಮಕೂರು ಎಸ್ಪಿ ಅಶೋಕ್‌ ವೆಂಕಟ್ ಆದೇಶದ ಮೇಲೆ ತುಮಕೂರು ಸಿಬಿ ಬ್ರಾಂಚ್ ಸಿಪಿಐ ಅವಿನಾಶ್, ಸಿರಾ ಗ್ರಾಮಾಂತರ ಸಿಪಿಐ ರಾಘವೇಂದ್ರ, ಕೊರಟಗೆರೆ ಪಿಎಸೈ ಚೇತನಗೌಡ, ಕ್ರೈಂ ಸಿಬ್ಬಂಧಿಗಳಾದ ದೊಡ್ಡಲಿಂಗಪ್ಪ, ಸಿದ್ದರಾಮ ನೇತೃತ್ವದ 5 ಜನ ಪೊಲೀಸರ ತಂಡ 15 ಪ್ರಕರಣದ ಆರೋಪಿ ಮೋಹಿತ್ ನರಸಿಂಹಮೂರ್ತಿಯನ್ನು ಉತ್ತರಕಾಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆ ಚಮೋಲಿ ತಾಲೂಕಿನ ಉಕ್ಕಿಮಠದ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಯೇ ಬಂಧಿಸಿದ್ದಾರೆ.

ತುಮಕೂರು ಎಸ್ಪಿ ಅಶೋಕ್‌ ವೆಂಕಟ್, ಎಎಸ್ಪಿ ಮರೀಯಪ್ಪ, ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಕೊರಟಗೆರೆಗೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸಿದ್ದಾರೆ. ಕೊರಟಗೆರೆ ಸಿಪಿಐ ಅನಿಲ್, ಪಿಎಸೈ ಚೇತನ ಗೌಡ ನೇತೃತ್ವದ ತಂಡ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಆರೋಪಿ ಮೋಹಿತ್ ನರಸಿಂಹಮೂರ್ತಿ ವಿರುದ್ದ ಪ್ರಕರಣ ದಾಖಲಾಗಿದೆ.

ಸಿಎಂ, ಡಿಸಿಎಂ, ಗೃಹಸಚಿವರು ಸೇರಿ 15ಕ್ಕೂ ಅಧಿಕ ಸಚಿವರ ಬಗ್ಗೆ ಮೊಹಿತ್ ನರಸಿಂಹಮೂರ್ತಿ ಎಂಬಾತ ವೈಯಕ್ತಿಕ ತೇಜೋವಧೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಉತ್ತರಕಾಂಡಕ್ಕೆ ಪರಾರಿಯಾಗಿದ್ದಾನೆ. ಸರಕಾರದ ಘನತೆಗೆ ದಕ್ಕೆ ಮತ್ತು ಅವಾಚ್ಯ ಶಬ್ದ ಬಳಕೆ ಮಾಡಿದ್ದು ತಪ್ಪು. ನಾನು ದೂರು ನೀಡಿದ ತಕ್ಷಣವೇ ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.  -ಅರಕೆರೆ ಶಂಕರ್, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ, ಕೊರಟಗೆರೆ

ಟಾಪ್ ನ್ಯೂಸ್

Rewind 2024: What happened in the world of cricket this year? Here’s a look back

Rewind 2024: ಈ ವರ್ಷ ಕ್ರಿಕೆಟ್‌ ಲೋಕದಲ್ಲಿ ನಡೆದಿದ್ದೇನು? ಇಲ್ಲಿದೆ ಹಿನ್ನೋಟ

12

Year Ender: ಮಾಸಿದ ಬದುಕಿನ ಬಣ್ಣ.. ಈ ವರ್ಷ ಇಹಲೋಕ ತ್ಯಜಿಸಿದ ಕನ್ನಡದ ಕಲಾವಿದರಿವರು..

INDvsAUS: ಮೈದಾನದಲ್ಲಿ ಜಗಳವಾಡಿದ ಸಿರಾಜ್‌- ಹೆಡ್‌ ವಿರುದ್ದ ಐಸಿಸಿ ಕಠಿಣ ನಿರ್ಧಾರ

INDvsAUS: ಮೈದಾನದಲ್ಲಿ ಜಗಳವಾಡಿದ ಸಿರಾಜ್‌- ಹೆಡ್‌ ವಿರುದ್ದ ಐಸಿಸಿ ಕಠಿಣ ನಿರ್ಧಾರ

Delhi Polls: 2ನೇ ಪಟ್ಟಿ ಬಿಡುಗಡೆ ಮಾಡಿದ ಆಪ್… ಬೇರೆ ಕ್ಷೇತ್ರದಿಂದ ಸಿಸೋಡಿಯಾ ಸ್ಪರ್ಧೆ

Delhi Polls: AAP 2ನೇ ಪಟ್ಟಿ ಬಿಡುಗಡೆ… ಕ್ಷೇತ್ರ ಬದಲಾಯಿಸಿದ ಸಿಸೋಡಿಯಾ

Syria ಪದಚ್ಯುತ ಅಧ್ಯಕ್ಷ ಬಶರ್‌ ರಷ್ಯಾಕ್ಕೆ ಪಲಾಯನ; ಐಸಿಸ್‌ ಮೇಲೆ ಅಮೆರಿಕ ವೈಮಾನಿಕ ದಾಳಿ!

Syria ಪದಚ್ಯುತ ಅಧ್ಯಕ್ಷ ಬಶರ್‌ ರಷ್ಯಾಕ್ಕೆ ಪಲಾಯನ; ಐಸಿಸ್‌ ಮೇಲೆ ಅಮೆರಿಕ ವೈಮಾನಿಕ ದಾಳಿ!

laxmi-hebbalkar

Belagavi: ಬಾಣಂತಿ, ಹಸುಗೂಸು ಸಾವು ಪ್ರಕರಣ ಮುಚ್ಚಿಡುವ ಪ್ರಶ್ನೆಯೇ ಇಲ್ಲ: ಹೆಬ್ಬಾಳ್ಕರ್

Tollywood: ಪ್ರಭಾಸ್‌ ಸಿನಿಮಾಕ್ಕೆ ರಿಷಬ್‌ ಶೆಟ್ಟಿ ಸ್ಕ್ರಿಪ್ಟ್‌ ? – ವರದಿ

Tollywood: ಪ್ರಭಾಸ್‌ ಸಿನಿಮಾಕ್ಕೆ ರಿಷಬ್‌ ಶೆಟ್ಟಿ ಸ್ಕ್ರಿಪ್ಟ್‌ ? – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TMK-Cri-Stadium

Tumakuru: ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ 50ಎಕರೆ ಭೂಮಿ ಮಂಜೂರು: ಸಿಎಂ

2-tumkur

Tumkur: ಬಸ್ ಪಲ್ಟಿಯಾಗಿ ಮೂವರು ಸಾವು

5-koratagere

ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ

hejjenu

Koratagere: ಕಂದಾಯ ಇಲಾಖೆ ಸಿಬ್ಬಂದಿ ಸೇರಿ ನಾಲ್ವರ ಮೇಲೆ ಹೆಜ್ಜೇನು ದಾಳಿ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

MUST WATCH

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

ಹೊಸ ಸೇರ್ಪಡೆ

45

Sandalwood: ಅರ್ಜುನ್‌ ಜನ್ಯಾ ʼ45ʼ ಚಿತ್ರಕ್ಕೆ ಹಾಲಿವುಡ್‌ ತಂತ್ರಜ್ಞರ ಸಾಥ್

Rewind 2024: What happened in the world of cricket this year? Here’s a look back

Rewind 2024: ಈ ವರ್ಷ ಕ್ರಿಕೆಟ್‌ ಲೋಕದಲ್ಲಿ ನಡೆದಿದ್ದೇನು? ಇಲ್ಲಿದೆ ಹಿನ್ನೋಟ

12

Year Ender: ಮಾಸಿದ ಬದುಕಿನ ಬಣ್ಣ.. ಈ ವರ್ಷ ಇಹಲೋಕ ತ್ಯಜಿಸಿದ ಕನ್ನಡದ ಕಲಾವಿದರಿವರು..

10

Brahmavar: ನಿತ್ಯ ಒದ್ದಾಟ, ರಸ್ತೆಯ ವಿಸ್ತರಣೆ ಎಂದು..?

9

Udupi: ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಗಗನ ಕುಸುಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.