Belagavi: ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ ಶಿಕ್ಷೆ
Team Udayavani, Dec 4, 2024, 8:12 PM IST
ಬೆಳಗಾವಿ: ಎರಡೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಯುವಕನಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ ಜೀವ ಇರುವವರೆಗೂ ಕಠಿಣ ಶಿಕ್ಷೆ ಮತ್ತು 30 ಸಾವಿರ ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.
ಬೈಲಹೊಂಗಲ ತಾಲ್ಲೂಕಿನ ವಣ್ಣೂರಿನ ಸುಭಾಷ ಮಹಾದೇವ ನಾಯ್ಕ ಶಿಕ್ಷೆಗೆ ಒಳಗಾದ ಆರೋಪಿ.
2017ರಲ್ಲಿ ಶಾಲೆ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಶಾಲೆ ಕಂಪೌಂಡ್ ಹತ್ತಿರ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಬಳಿಕ ಕುತ್ತಿಗೆ ಹಿಚುಕಿ, ಮಣ್ಣಿನಲ್ಲಿ ಹೂತುಹಾಕಿ ಕೊಲೆ ಮಾಡಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದ.
ಈ ಸಂಬಂಧ ಬಾಲಕಿ ಪೋಷಕರು ನೇಸರಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖಾಧಿಕಾರಿ ಎಚ್.ಸಂಗನಗೌಡರ ಅವರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದ್ದಾರೆ. ಜಿಲ್ಲಾ ಕಾನೂನು ಪ್ರಾಧಿಕಾರದಿಂದ 1 ಲಕ್ಷ ಪರಿಹಾರ ಪಡೆಯುವಂತೆ ಸಂತ್ರಸ್ತೆಗೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.
ಇದನ್ನೂ ಓದಿ: Mahayuti Claim: ಮಹಾರಾಷ್ಟ್ರಕ್ಕಾಗಿ ನಾವು ಮೂವರು ಒಟ್ಟಾಗಿ ಕೆಲಸ ಮಾಡುತ್ತೇವೆ: ಫಡ್ನವೀಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಮೊದಲ ದಿನವೇ ಕದನ ಆರಂಭ; ಸರಕಾರ, ವಿಪಕ್ಷ ನಡುವೆ ಬಿಸಿ ಬಿಸಿ ವಾಗ್ವಾದ
Belagavi Session; ಪಂಚಮಸಾಲಿ ಹೋರಾಟಕ್ಕೆ ಸಿಎಂ ಕೋರ್ಟ್ ಆದೇಶ ಅಸ್ತ್ರ
ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆಯಿಲ್ಲ: ಸಚಿವ ದಿನೇಶ್ ಗುಂಡೂರಾವ್
2.30 ಲಕ್ಷ ಬಗರ್ಹುಕುಂ ಅರ್ಜಿ ತಿರಸ್ಕೃತ: ಕೃಷ್ಣ ಭೈರೇಗೌಡ ಮಾಹಿತಿ
Plantation ಮರುವಶಕ್ಕೆ ಆದ್ಯತೆ : ಅರಣ್ಯ ಸಚಿವ ಈಶ್ವರ್ಖಂಡ್ರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.