Mugila Mallige: ನವತಂಡದ ಮುಡಿಗೆ ಮುಗಿಲ ಮಲ್ಲಿಗೆ
Team Udayavani, Dec 4, 2024, 8:14 PM IST
ಹಳೆಯ ಟೈಟಲ್‌ಗಳನ್ನಿಟ್ಟುಕೊಂಡು ಹೊಸಬರು ಪ್ರಯತ್ನಿಸುತ್ತಲೇ ಇರುತ್ತಾರೆ. ಈಗ ಇದೇ ರೀತಿ ನಾಲ್ಕು ದಶಕಗಳ ಹಿಂದೆ ತೆರೆಕಂಡ ಹಿಟ್‌ಲಿಸ್ಟ್ ಸೇರಿರುವ “ಮುಗಿಲ ಮಲ್ಲಿಗೆ’ ಟೈಟಲ್‌ನಡಿ ಹೊಸಬರ ಚಿತ್ರವೊಂದು ಆರಂಭವಾಗಿದೆ. ಈಗಾಗಲೇ ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ನಾಗರಾಜ್ ರೆಡ್ಡಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಆರ್. ಕೆ. ಗಾಂಧಿ ಅವರು ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ತನ್ನ ತಮ್ಮನ ಸಾವಿಗೆ ಕಾರಣಳಾದ ನಾಯಕಿಯ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟ ಖಳ ನಾಯಕನೊಂದಿಗೆ ನಾಯಕ ಹೇಗೆ ಹೋರಾಟ ನಡೆಸಿ, ತನ್ನ ಹುಡುಗಿಯನ್ನು ಹೇಗೆ ಕಾಪಾಡುತ್ತಾನೆ ಎನ್ನುವುದೇ ಮುಗಿಲ ಮಲ್ಲಿಗೆ ಚಿತ್ರದ ಕಥಾವಸ್ತು. ನಟ ಸನತ್ ಹಾಗೂ ಸಹನಾ ಗೌಡ ಚಿತ್ರದ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ.
ಮುಗಿಲ ಮಲ್ಲಿಗೆ ಸಿನಿಮಾಗೆ ಹೊಸಕೋಟೆ ಸುತ್ತ ಮುತ್ತಲಿನ ಗಟ್ಟಿಗನಬ್ಬೆ, ಪೂಜೇನ ಅಗ್ರಹಾರ, ಕಂಬ್ಳಿಪುರ ಕಾಟೇರಮ್ಮ, ಭಕ್ತರಹಳ್ಳಿ ಮುಂತಾದ ಲೊಕೇಶನ್‌ಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದೆ.
ಈ ಚಿತ್ರಕ್ಕೆ ಅಭಿನಂದನ್ ಶೆಟ್ಟಿ ಅವರ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರೀ ಅವರ ಸಂಗೀತ, ರಾಜೀವ್ ಕೃಷ್ಣ ಅವರ ಸಾಹಿತ್ಯ, ವಿನಯ್ ಜಿ. ಆಲೂರು ಅವರ ಸಂಕಲನ, ಥ್ರಿಲ್ಲರ್ ಮಂಜು ಅವರ ಸಾಹಸ, ಮೋಹನ್ ಕುಮಾರ್ ಅವರ ಪ್ರಸಾದನ, ಮಲ್ಲಿಕಾ ರ್ಜುನ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ʼಈ ಪಾದ ಪುಣ್ಯಪಾದʼ ಪೋಸ್ಟರ್ ಬಂತು
Sandalwood; ಗೀತಾ ಪಿಕ್ಚರ್ಸ್ ನಲ್ಲಿ ಧೀರೆನ್ ಹೊಸ ಸಿನಿಮಾ: ಸಂದೀಪ್ ಸುಂಕದ್ ನಿರ್ದೇಶನ
Pramod Maravanthe: ‘ಕೆಜಿಎಫ್-2ʼ ಗಾಯಕಿ ಜತೆ ದಾಂಪತ್ಯಕ್ಕೆ ಕಾಲಿಟ್ಟ ಪ್ರಮೋದ್ ಮರವಂತೆ
Nodidavaru Enantare Movie; ಬಿಡುಗಡೆಯತ್ತ ʼನೋಡಿದವರು ಏನಂತಾರೆʼ ಚಿತ್ರ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಡಿ.9ಕ್ಕೆ ಮುಂದೂಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Dakshina Kannada: ಪ್ರಾಚೀನ ಕಾಯಿಲೆಯಾದ ಕ್ಷಯರೋಗ ಈಗಲೂ ಅಪಾಯಕಾರಿಯೇ: ಡಾ.ತಿಮ್ಮಯ್ಯ
Udupi: ಕ್ಷಯಮುಕ್ತ ಉಡುಪಿಗಾಗಿ ಕೈಜೋಡಿಸಿ: ಕೋಟ ಶ್ರೀನಿವಾಸ ಪೂಜಾರಿ
Kalladka: ವಿದ್ಯೆಯಿಂದ ಪಡೆದ ಜ್ಞಾನ ದೇಶದ ಏಳಿಗೆಗೆ ಬಳಕೆಯಾಗಲಿ: ಆರೆಸ್ಸೆಸ್ ಮುಖ್ಯಸ್ಥ
Temple Visit: ಡೊನಾಲ್ಡ್ ಟ್ರಂಪ್ ಆಪ್ತ ಶಶಿಭೂಷಣ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ
Coastal Karnataka: ವಿವಿಧ ಸುಬ್ರಹ್ಮಣ್ಯ ಸ್ವಾಮಿ ದೇಗುಲಗಳಲ್ಲಿ ಷಷ್ಠಿ ಮಹೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.