Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ

ತ್ವರಿತ ಸೇವೆಗಾಗಿ ಮಂಗಳೂರು ಪಾಸ್‌ಪೋರ್ಟ್‌ ಸೇವಾ ಕೇಂದ್ರ ಮೇಲ್ದರ್ಜೆಗೇರಲಿ

Team Udayavani, Dec 5, 2024, 7:15 AM IST

Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ

ಮಂಗಳೂರು: ಪ್ರತಿದಿನ ಕನಿಷ್ಠ 400-500 ಪಾಸ್‌ಪೋರ್ಟ್‌ ಸಂಬಂಧಿತ ಅರ್ಜಿ ಬರುವ ಪ್ರದೇಶ ಮಂಗಳೂರಿನ ಪಾಸ್‌ಪೋರ್ಟ್‌ ಸೇವಾ ಕೇಂದ್ರ.

ಗರಿಷ್ಠ ಬೇಡಿಕೆ ಇರುವ ಕೇಂದ್ರವಾಗಿದ್ದರಿಂದ ಇದನ್ನು ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯಾಗಿ ಮೇಲ್ದರ್ಜೆ ಗೇರಿಸಬೇಕು ಎನ್ನುವ ಆಗ್ರಹ ಹಳೆಯದ್ದು. ಆದರೆ ಇನ್ನೂ ಈಡೇರಿಲ್ಲ ಎಂಬುದು ಸ್ಥಳೀಯರ ಬೇಸರ.

ಮಂಗಳೂರಿನಿಂದ ಹೊರದೇಶಗಳಿಗೆ ಉದ್ಯೋಗಕ್ಕಾಗಿ ಹೋಗುವವರ ಸಂಖ್ಯೆ ಹೆಚ್ಚು, ಹಾಗಾಗಿ ತ್ವರಿತ ಪಾಸ್‌ಪೋರ್ಟ್‌
ಸೇವೆ ಇವರಿಗೆ ಅಗತ್ಯವಿದೆ. ಹಾಗಾಗಿ ಪ್ರಾದೇಶಿಕ ಕೇಂದ್ರ ತೀರಾ ಅಗತ್ಯವಿದೆ.

ಖಾಸಗಿ ಸಂಸ್ಥೆಯಿಂದ ನಿರ್ವಹಿಸಲ್ಪ ಡುವ ಈಗಿನ ಕೇಂದ್ರಕ್ಕೆ ದಕ್ಷಿಣ ಕನ್ನಡ ಮಾತ್ರವಲ್ಲದೆ ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ ಕಡೆಯಿಂದ ಜನ ಬರುತ್ತಾರೆ. ಇದು ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರದ ಅಧೀನದಲ್ಲಿದೆ.

ವರ್ಷದಿಂದ ವರ್ಷಕ್ಕೆ ಮಂಗಳೂರು ಸೇವಾ ಕೇಂದ್ರಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. 2014ರಲ್ಲಿ ಬೆಂಗಳೂರು ಪಾಸ್‌ಪೋರ್ಟ್‌ ಕೇಂದ್ರ ದಿಂದ(ರಾಜ್ಯ ಮಟ್ಟದಲ್ಲಿ) 5 ಲಕ್ಷ ಪಾಸ್‌ಪೋರ್ಟ್‌ ವಿತರಿಸಲಾಗಿತ್ತು. 2023 ರಲ್ಲಿ ಸಂಖ್ಯೆ 8.6 ಲಕ್ಷಕ್ಕೆ ಏರಿಕೆಯಾಗಿದೆ.

ಕರ್ನಾಟಕಕ್ಕಿಂತಲೂ ಸಣ್ಣ ರಾಜ್ಯವಾದ ಕೇರಳದಲ್ಲಿ ಮೂರು ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರಗಳಿವೆ (ಕೊಚ್ಚಿ, ತಿರುವನಂತಪುರ, ಕೋಯಿಕ್ಕೋಡ್‌). ಮಹಾರಾಷ್ಟ್ರ, ತಮಿಳುನಾಡಿನಲ್ಲಿ ತಲಾ ಮೂರು ಪ್ರಾದೇಶಿಕ ಕಚೇರಿಗಳಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಒಂದೇ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ಕಾರ್ಯಾಚರಿಸುತ್ತಿದ್ದು, ಇದರ ವ್ಯಾಪ್ತಿ ಯಲ್ಲಿ ಒಟ್ಟು 5 ಸೇವಾ ಕೇಂದ್ರಗಳಿವೆ.

ಇಬ್ಬರೇ ಸರಕಾರಿ ಅಧಿಕಾರಿಗಳು
ಮಂಗಳೂರಿನ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಖಾಸಗಿ ಸಂಸ್ಥೆಯಿಂದ ನಿರ್ವ ಹಿಸಲ್ಪಡುತ್ತದೆ. ಇದರಲ್ಲಿ ಪಾಸ್‌ ಪೋರ್ಟ್‌ ಕೇಂದ್ರದಿಂದ ನಿಯೋಜಿತ ರಾದ ಇಬ್ಬರು ಸರಕಾರಿ ಅಧಿಕಾರಿಗಳು ಮಾತ್ರ ಇರುತ್ತಾರೆ. ಒಬ್ಬರು ದಾಖಲೆ ಪರಿಶೀಲಿಸಿದರೆ ಇನ್ನೊಬ್ಬರು ಪಾಸ್‌ಪೋರ್ಟ್‌ ಅನುಮೋದನೆ ಮಾಡುತ್ತಾರೆ.

ಉಳಿದವರೆಲ್ಲ ಖಾಸಗಿ ಸಂಸ್ಥೆಯವರು. ಅರ್ಜಿ ಸ್ವೀಕಾರ, ಪ್ರಾಥಮಿಕ ಪರಿಶೀಲನೆ, ಡಾಟಾ ಎಂಟ್ರಿ ಮತ್ತು ಸಂಸ್ಕರಣೆ ಮಾತ್ರ ನಡೆಸಲಾಗುತ್ತದೆ. ಹೊಸ ಪಾಸ್‌ಪೋರ್ಟ್‌, ತತ್ಕಾಲ್‌ ಪಾಸ್‌ಪೋರ್ಟ್‌, ಪಾಸ್‌ಪೋರ್ಟ್‌ ನವೀಕರಣದ ಕೆಲಸ ಮಾತ್ರ ಪಾಸ್‌ಪೋರ್ಟ್‌ ಸೇವಾ ಕೇಂದ್ರದಲ್ಲಿ ನಡೆಯುತ್ತದೆ.

ಮುದ್ರಣವೂ ಇಲ್ಲಿಲ್ಲ
ಪಾಸ್‌ಪೋರ್ಟ್‌ ಅರ್ಜಿ ಪರಿಶೀಲಿಸಿ, ಅನುಮೋದನೆ ಪಡೆದು ಬಳಿಕ ಬೆಂಗಳೂರಿನ ಪ್ರಾದೇಶಿಕ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಪಾಸ್‌ಪೋರ್ಟ್‌ ಮುದ್ರಣಗೊಂಡು ಅರ್ಜಿದಾರರಿಗೆ ರವಾನೆಯಾಗುತ್ತದೆ. ಪೊಲೀಸ್‌ ದೃಢೀಕರಣ ಸಮಯಕ್ಕೆ ಸರಿಯಾಗಿ ಆದರೆ ಮಾತ್ರ 10 ದಿನದೊಳಗೆ ಪಾಸ್‌ಪೋರ್ಟ್‌ ಪಡೆಯಬಹುದು.

ಒಂದು ವೇಳೆ ಪಾಸ್‌ಪೋರ್ಟ್‌ ಪ್ರಾದೇಶಿಕ ಕಚೇರಿಯಾಗಿ ಮೇಲ್ದರ್ಜೆ ಗೇರಿದರೆ ಒಂದೆರಡು ದಿನದಲ್ಲೇ ಪಾಸ್‌ಪೋರ್ಟ್‌ ಸಿಗುವ ಅವಕಾಶಗಳಿವೆ ಎನ್ನುತ್ತವೆ ಮೂಲಗಳು.

ಇದುವರೆಗೆ ವಿದೇಶಾಂಗ ವ್ಯವಹಾರಗಳ ಸಚಿವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಮಂಗಳೂರು ಪಾಸ್‌ಪೋರ್ಟ್‌ ಸೇವಾ ಕೇಂದ್ರವನ್ನು ಪ್ರಾದೇಶಿಕ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸುವ ಕುರಿತಾಗಿ ಅದರ ಮಾಹಿತಿಗಳನ್ನು ಸಂಗ್ರಹಿಸಿ ಈ ಅಧಿವೇಶನದಲ್ಲೇ ಪ್ರಸ್ತಾವಿಸುತ್ತೇನೆ.
-ಕ್ಯಾ| ಬ್ರಿಜೇಶ್‌ ಚೌಟ, ಸಂಸದರು, ದ.ಕ

ಮಂಗಳೂರು ಪಿಎಸ್‌ಕೆಗೆ ಬರುವ ಅರ್ಜಿಗಳಲ್ಲಿ ಶೇ.50ರಷ್ಟು ಅರ್ಜಿಗಳು ಮಾತ್ರ ಅನುಮೋದನೆಗೊಳ್ಳುತ್ತವೆ. ಉಳಿದಂತೆ ಹೆಸರು, ದಿನಾಂಕದಲ್ಲಿ ವ್ಯತ್ಯಾಸ, ಡೂಪ್ಲಿಕೇಟ್‌ ಪಾಸ್‌ಪೋರ್ಟ್‌, ಡಬಲ್‌ ಪಾಸ್‌ಪೋರ್ಟ್‌ ಇತ್ಯಾದಿಗಳನ್ನು ಬೆಂಗಳೂರಿನ ಪ್ರಾದೇಶಿಕ ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ. ಇದರಿಂದಾಗಿ ಬಹಳಷ್ಟು ವಿಳಂಬವಾಗುತ್ತದೆ. ಒಂದು ವೇಳೆ ಇಲ್ಲೇ ಪಾಸ್‌ಪೋರ್ಟ್‌ ಪ್ರಾದೇಶಿಕ ಕಚೇರಿ ಇದ್ದರೆ ಎಲ್ಲ ಸೇವೆಗಳೂ ತ್ವರಿತಗೊಳ್ಳಲಿವೆ. ಮಂಗಳೂರು ಪ್ರಾದೇಶಿಕ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಇದು ಸಕಾಲ.
– ಐವನ್‌ ಡಿ’ಸೋಜಾ, ವಿಧಾನ ಪರಿಷತ್‌ ಸದಸ್ಯರು.

-ವೇಣು ವಿನೋದ್‌ ಕೆ.ಎಸ್‌

ಟಾಪ್ ನ್ಯೂಸ್

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.