Udupi: ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ: ಡಿ. 14: ಶತಚಂಡಿಕಾ ಯಾಗ, ಬ್ರಹ್ಮಮಂಡಲ ಸೇವೆ
Team Udayavani, Dec 5, 2024, 6:55 AM IST
ಉಡುಪಿ: ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ ವತಿಯಿಂದ ಶತ ಚಂಡಿಕಾಯಾಗ ಹಾಗೂ ಬ್ರಹ್ಮಮಂಡಲ ಸೇವೆಯು ಡಿ. 9ರಿಂದ 14ರ ವರೆಗೆ ದೇವಸ್ಥಾನದ ತಂತ್ರಿಗಳಾದ ಕೆ.ಎಸ್. ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿ, ಕೆ.ಎ. ಶ್ರೀರಮಣ ತಂತ್ರಿ ಕೊರಂಗ್ರಪಾಡಿಯವರ ನೇತೃತ್ವದಲ್ಲಿ ದೇಗುಲದ ಪ್ರಧಾನ ಅರ್ಚಕ ವಾಸುದೇವ ಭಟ್ ಸಹಕಾರದೊಂದಿಗೆ ನೆರವೇರಲಿದೆ.
ಡಿ. 9ರ ಸಂಜೆ 4ಕ್ಕೆ ಜೋಡುಕಟ್ಟೆಯಿಂದ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವರೆಗೆ ಹಸುರುವಾಣಿ ಹೊರೆಕಾಣಿಕೆಯ ಶೋಭಾಯಾತ್ರೆ ನಡೆಯಲಿದೆ.
ಡಿ. 10ರ ಬೆಳಗ್ಗೆ 7.30ರಿಂದ ಶತಚಂಡಿಕಾಯಾಗದ ಚಂಡೀ ಪಾರಾಯಣ, ಅಥರ್ವಶೀರ್ಷ ಮಹಾಯಾಗ, ಐಕ್ಯಮತ್ಯ ಭಾಗ್ಯ ಸೂಕ್ತ ಹೋಮ, ಸಂಜೆ 5ರಿಂದ ಯಾಗದ ಮಂಟಪ ಸಂಸ್ಕಾರ, ಸುದರ್ಶನ ಹೋಮ, ದುರ್ಗಾ ನಮಸ್ಕಾರ, ಡಿ. 11ರ ಬೆಳಗ್ಗೆ 7.30ರಿಂದ ಚಂಡೀ ಪಾರಾಯಣ, ಸಂಜೆ 5ರಿಂದ ಗಣಪತಿ ಸಾನ್ನಿಧ್ಯದಲ್ಲಿ ಭದ್ರತೆ ಮಂಡಲ ಪೂಜೆ, ಮಹಿಷ ಮರ್ದಿನಿ ಸಾನ್ನಿಧ್ಯದಲ್ಲಿ ಶಕ್ತಿ ದಂಡಕ ಮಂಡಲ ಪೂಜೆ ನಡೆಯಲಿದೆ.
ಡಿ.12ರ ಬೆಳಗ್ಗೆ 7.30ರಿಂದ ಚಂಡೀ ಪಾರಾಯಣ, ಸರ್ವ ಪ್ರಾಯಶ್ಚಿತ್ತ ಹೋಮ, ಸ್ನಪನ ಕಲಶಾಭಿಷೇಕ, ಮೃತ್ಯುಂಜಯ ಯಾಗ, ಲಲಿತಾ ಸಹಸ್ರನಾಮ ಕದಳೀಯಾಗ, ಸಂಜೆ 5ರಿಂದ ನಾಗ ತನು, ಪ್ರಸನ್ನ ಪೂಜೆ, ಶ್ರೀ ಮಹಿಷಮರ್ದಿನಿ ದೇವಿ, ಗಣಪತಿ, ಭದ್ರಕಾಳಿ ದೇವರಿಗೆ ಕಲಶಾಧಿವಾಸ ಪ್ರಕ್ರಿಯೆ, ಡಿ. 13ರ ಬೆಳಗ್ಗೆ 7.30ರಿಂದ ಚಂಡೀ ಪಾರಾಯಣ, ಶ್ರೀ ಮಹಿಷಮರ್ದಿನಿ ದೇವಿ, ಗಣಪತಿ, ಭದ್ರಕಾಳಿ ದೇವರಿಗೆ ಕಲಶಾಭಿಷೇಕ, ನವಗ್ರಹಯಾಗ, ಕಾಳಿ ಸಹಸ್ರನಾಮ ಕದಳೀಯಾಗ, ಸಂಜೆ 6ರಿಂದ ಅರಣಿಮಥನ, ಅಗ್ನಿ ಜನನ, ಕುಂದ ಸಂಸ್ಕಾರ, ಏಕಕಾಲ ಶ್ರೀಚಕ್ರ ಪೂಜೆ ಜರಗಲಿದೆ.
ಡಿ. 14ರ ಬೆಳಗ್ಗೆ 6ರಿಂದ ಯಾಗದ ಸಂಕಲ್ಪ, 7ಕ್ಕೆ ಯಾಗ ಆರಂಭ, 10ಕ್ಕೆ ಯಾಗ ಪೂರ್ಣಾಹುತಿ, ಅನ್ನಸಂತರ್ಪಣೆ, ಸಂಜೆ 5.30ರಿಂದ ನಾಗದೇವರು, ಬ್ರಹ್ಮ ಸಾನ್ನಿಧ್ಯದಲ್ಲಿ ರಾಮಚಂದ್ರ ಕುಂಜಿತ್ತಾಯ ಕಲ್ಲಂಗಳ ಹಾಗೂ ಮುದ್ದೂರು ಕೃಷ್ಣಪ್ರಸಾದ ವೈದ್ಯ ಮತ್ತು ಬಳಗದವರಿಂದ ಹಾಲಿಟ್ಟು ಸೇವೆ, ಸಂಜೆ 6.30ರಿಂದ ಸಹಸ್ರ ಮಹಿಳೆಯರಿಂದ ಏಕಕಾಲದಲ್ಲಿ ಸಹಸ್ರ ದುರ್ಗಾರತಿ ಸೇವೆ, ರಾತ್ರಿ 7.30ರಿಂದ ಬ್ರಹ್ಮಮಂಡಲ ಸೇವೆ ನಡೆಯಲಿದೆ. ಪ್ರತಿದಿನ ಕನ್ನಿಕಾರಾಧನೆ, ಸುವಾಸಿನಿ ಆರಾಧನೆ ಜರಗಲಿದೆ.
ಸಂಜೆ 4ರಿಂದ ನಡೆಯಲಿರುವ ಧಾರ್ಮಿಕ ಸಭೆಯನ್ನು ಶ್ರೀ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ ಮುದ್ದಣ ಶೆಟ್ಟಿ ಅಧ್ಯಕ್ಷತೆ ವಹಿಸುವರು.
ಮುಂಬಯಿ ಅದಿತಿ ಇಂಟರ್‌ನ್ಯಾಶನಲ್‌ನ ಭರತ್ ಎಂ. ಶೆಟ್ಟಿ, ಬೆಂಗಳೂರು ಎಂಆರ್‌ಜೆ ಗ್ರೂಪ್‌ನ ಎಂಡಿ ಡಾ| ಕೆ. ಪ್ರಕಾಶ್ ಶೆಟ್ಟಿ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್, ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿ ಬಿ.ಆರ್. ಶೆಟ್ಟಿ ಮುಂಬಯಿ, ಉಜ್ವಲ್ ಡೆವಲಪರ್ನ ಎಂಡಿ ಪುರುಷೋತ್ತಮ ಪಿ. ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವಾ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಅರ್ಚಕ ವಾಸುದೇವ ಭಟ್, ನಗರಸಭೆ ಸದಸ್ಯರಾದ ವಿಜಯ ಪೂಜಾರಿ, ಶ್ರೀಕೃಷ್ಣರಾವ್ ಕೊಡಂಚ, ದೇವಸ್ಥಾನದ ಕಾರ್ಯದರ್ಶಿ ನಾರಾಯಣದಾಸ್ ಉಡುಪ ಭಾಗವಹಿಸಲಿದ್ದಾರೆ ಎಂದು ಆರ್ಥಿಕ ಸಮಿತಿ ಸಂಚಾಲಕ ಕಳತ್ತೂರು ರಮೇಶ್ ಶೆಟ್ಟಿ, ಆಡಳಿತ ಮಂಡಳಿ ಕೋಶಾಧಿಕಾರಿ ಸುದರ್ಶನ್ ಶೇರಿಗಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
Kollywood: ಸೂರ್ಯ – ಕಾರ್ತಿಕ್ ಸುಬ್ಬರಾಜ್ ʼರೆಟ್ರೋʼ ರಿಲೀಸ್‌ಗೆ ಡೇಟ್ ಫಿಕ್ಸ್
Naxal Movement End:1990 To 2025:ಕರ್ನಾಟಕ ನಕ್ಸಲೀಯರ ಶಸ್ತ್ರಾಸ್ತ್ರ ಹೋರಾಟದ ಯುಗಾಂತ್ಯ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.