Puttur: Praveen Nettaru Case; ಆರೋಪಿಗಳಿಗೆ ಸಹಕಾರ ನೀಡಿದ್ದಾತನ ಮನೆಗೆ ಎನ್‌ಐಎ ದಾಳಿ
ಹಲವು ಸ್ಥಳಗಳಲ್ಲಿ ಶೋಧ ಕಾರ್ಯ
Team Udayavani, Dec 5, 2024, 12:48 PM IST
ಪುತ್ತೂರು/ ಬಂಟ್ವಾಳ/ ಬೆಳ್ತಂಗಡಿ/ ಬೆಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಕರ್ನಾಟಕದ ದಕ್ಷಿಣ ಕನ್ನಡ, ಬೆಂಗಳೂರು ಮತ್ತು ತಮಿಳುನಾಡಿನ ಹಲವು ಸ್ಥಳಗಳಲ್ಲಿ ದಿಢೀರ್ ಶೋಧ ಕಾರ್ಯ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ, ಪುತ್ತೂರು, ಬೆಳ್ತಂಗಡಿ ಮತ್ತು ಬಂಟ್ವಾಳದ ಒಟ್ಟು 6 ಕಡೆ ದಾಳಿ ನಡೆಸಲಾಗಿದೆ.
ಪ್ರಕರಣದಲ್ಲಿ ತಲೆಮರೆಸಿ ಕೊಂಡಿರುವ ಆರೋಪಿಗಳು, ಶಂಕಿತರು ಮತ್ತು ಅವರ ಸಹಚರರಿಗೆ ಸೇರಿರುವ ಸ್ಥಳ ಗಳಲ್ಲಿ ಶೋಧ ನಡೆಸ ಲಾಗಿದ್ದು, ಡಿಜಿಟಲ್ ಸಾಧನ ಮತ್ತು ವಿವಿಧ ದಾಖಲೆಗಳನ್ನು ವಶಪಡಿಸಿಕೊಳ್ಳ
ಲಾಗಿದೆ ಎಂದು ಎನ್‌ಐಎ ಪ್ರಕಟನೆ ತಿಳಿಸಿದೆ.
ಬೆಳ್ತಂಗಡಿಯ ಪಡಂಗಡಿ ಪೊಯ್ಯಗುಡ್ಡೆ ನಿವಾಸಿ ನೌಷಾದ್, ಮಾಣಿ ಸಮೀಪದ ಕೊಡಾಜೆ ನಿವಾಸಿ ಶರೀಫ್, ಉಪ್ಪಿನಗಂಡಿ ಮಠ ನಿವಾಸಿ ಅಬ್ದಲ್ ಖಾದರ್ ಯಾನೆ ಮುಸ್ತಾಫ, ಕೆಯ್ಯೂರು ನಿವಾಸಿ ಉಮ್ಮರ್ (ಬೆಳ್ಳಾರೆ ಮೂಲದ ಅಬೂಬಕ್ಕರ್ ಸಿದ್ದಿಕ್‌ನ ಪತ್ನಿಯ ಸಹೋದರ) ಮನೆ ಸೇರಿ ಜಿಲ್ಲೆಯ ಆರು ಕಡೆಯಲ್ಲಿ ದಾಳಿ ನಡೆಸಲಾಗಿದೆ.
ಪ್ರವೀಣ್ ಕೊಲೆ ಪ್ರಕರಣದ ಆರೋಪಿಗಳಿಗೆ ಸಹಕಾರ ನೀಡಿದ್ದಾರೆ ಎನ್ನಲಾದ ಅಬೂಬಕ್ಕರ್ ಸಿದ್ದಿಕ್ ಎಂಬಾತನ ಪತ್ನಿ ವಾಸವಿರುವ ಪುತ್ತೂರು ತಾಲೂಕಿನ ಕೆಯ್ಯೂರಿನ ಮನೆಗೆ ಎನ್‌ಐಎ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಆಗಮಿಸಿ ತನಿಖೆ ನಡೆಸಿದರು. ಕೆಯ್ಯೂರು ಶಾಲಾ ಬಳಿಯ ಬಾಡಿಗೆ ಮನೆಯೊಂದರಲ್ಲಿ ಅಬೂಬಕ್ಕರ್ ಸಿದ್ದಿಕ್‌ನ ಪತ್ನಿ ವಾಸವಾಗಿದ್ದಾರೆ. ಸಿದ್ದಿಕ್ ಅವರ ಸಹೋದರ ಕೆಯ್ಯೂರಿನ ಅರಿಕ್ಕಿಲದಲ್ಲಿ ವಾಸ್ತವ್ಯವಿದ್ದು, ಈ ಎರಡೂ ಕಡೆಗಳಲ್ಲಿ ಎನ್‌ಐಎ ಅಧಿಕಾರಿಗಳು ಪರಿಶೀಲಿಸಿರುವ ಮಾಹಿತಿ ಲಭಿಸಿದೆ. ಕೊಲೆಯ ಸಂದರ್ಭ ಅಬೂಬಕ್ಕರ್ ಸಿದ್ದಿಕ್ ಸ್ಥಳದಲ್ಲೇ ಇದ್ದು ಆರೋಪಿಗಳಿಗೆ ಸಹಕಾರ ನೀಡಿದ ಆರೋಪ ಎದುರಿಸುತ್ತಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ. ಸರ್ಚ್ ವಾರಂಟ್ ಹೊಂದಿದ್ದ ಎನ್‌ಐಎ ಅಧಿಕಾರಿಗಳು ಕೆಯ್ಯೂರಿಗೆ ಆಗಮಿಸಿ ತನಿಖೆ ನಡೆಸಿದ್ದಾರೆ.
ಉಪ್ಪಿನಂಗಡಿಯ ಮಠದ ಹಿರ್ತಡ್ಕದ ಮನೆ ಯೊಂದಕ್ಕೂ ಎನ್‌ಐಎ ತಂಡ ಆಗಮಿಸಿದ್ದು, ಮಠ ನಿವಾಸಿ ಖಾದರ್ ಯಾನೆ ಮುಸ್ತಫಾ ಎಂಬಾತನ ಮನೆಗೆ ಈ ತಂಡ ಬಂದಿರುವ ಮಾಹಿತಿ ಲಭಿಸಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನೋಟಿಸ್ ನೀಡಲು ಬಂದಿದ್ದರೋ ಅಥವಾ ಮನೆಯವರನ್ನು ವಿಚಾರಣೆ ಮಾಡಿದ್ದಾರೆಯೋ ಎನ್ನುವುದು ಸ್ಪಷ್ಟವಾಗಿಲ್ಲ.
ಕೊಡಾಜೆಯ ಶರೀಫ್ ಎಂಬಾತನ ಮನೆಗೆ ಎನ್‌ಐಎ ಅಧಿಕಾರಿಗಳು ಭೇಟಿ ನೀಡಿದ್ದು, ಆದರೆ ಆತ ವಿದೇಶದಲ್ಲಿದ್ದಾನೆ. ಹೀಗಾಗಿ ಮನೆಗೆ ಭೇಟಿ ನೀಡಿರುವ ಅಧಿಕಾರಿಗಳು ಆತನಿಗೆ ಎಚ್ಚರಿಕೆ ನೋಟಿಸ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿದೆ. ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಆತನ ಪಾತ್ರವೇನು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಆತ ಮುಂದಿನ ದಿನಗಳಲ್ಲಿ ತನಿಖೆಗೆ ಹಾಜರಾಗದೆ ಇದ್ದಲ್ಲಿ ಆತನ ಆಸ್ತಿ ಮುಟ್ಟುಗೋಲು ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸೋಮವಾರಪೇಟೆಯಲ್ಲೂ ಶೋಧ
ಸೋಮವಾರಪೇಟೆ ತಾಲೂಕಿನ 3 ಕಡೆಗಳಲ್ಲೂ ಎನ್‌ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ.ಚೌಡ್ಲು ಗ್ರಾಮದ ತೌಶಿಕ್, ತಣ್ಣೀರುಹಳ್ಳ ಗ್ರಾಮದ ನೌಷದ್ ಮತ್ತು ಕಲ್ಲಂದೂರು ಗ್ರಾಮದ ಅಬ್ದುಲ್ ರೆಹಮಾನ್ ಮನೆಗೆ ದಾಳಿ ನಡೆಸಿದ ಅಧಿಕಾರಿಗಳು, ಮನೆಯವರ ಮೊಬೈಲ್ ಫೋನ್‌ಗಳನ್ನು ಪರಿಶೀಲಿ ಸಿದರು. ಸಿಮ್‌ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕಗಳನ್ನು ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ದಾಖಲೆಗಳನ್ನು ಶೋಧಿಸಿದ್ದಾರೆ. ಕಂದಾಯ ಅಧಿಕಾರಿಗಳ ಸಮಕ್ಷಮ ಮಹಜರು ನಡೆಸಿ, ಸಹಿ ಪಡೆದುಕೊಂಡಿದ್ದಾರೆ.
ಹೊಸತೋಟ ನಿವಾಸಿ, ಪ್ರಸ್ತುತ ಸೋಮವಾರಪೇಟೆ ಪಟ್ಟಣದಲ್ಲಿ ವಾಸವಿರುವ ಜುನೈದ್ ಅವರ ಮನೆಗೆ ಮೊದಲ ಬಾರಿಗೆ ತೆರಳಿದ ತಂಡವು ಮೊಬೈಲನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೊಲೆ ಪ್ರಕರಣದ ಮೂವರು ಆರೋಪಿಗಳು ಈ ಹಿಂದೆಯೇ ತಲೆಮರೆಸಿಕೊಂಡಿದ್ದಾರೆ. ಎರಡನೇ ಬಾರಿಗೆ ಎನ್‌ಐಎ ಅಧಿಕಾರಿಗಳು ಆರೋಪಿಗಳ ಮನೆಗೆ ಬಂದು ಮಾಹಿತಿ ಕಲೆ ಹಾಕಿದ್ದಾರೆ.
ಬೆಳ್ತಂಗಡಿ ನೌಷಾದ್ ನಿವಾಸದ ಮೇಲೆ ದಾಳಿ
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ನಾಪತ್ತೆ ಯಾಗಿರುವ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಕಾಲನಿಯಲ್ಲಿರುವ ನೌಷಾದ್ (27) ಮನೆಗೆ ಎರಡನೇ ಬಾರಿ ಗುರುವಾರ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿ ತಾಯಿ ಹಾಗೂ ತಂಗಿಯನ್ನು ವಿಚಾರಣೆ ಗೊಳಪಡಿಸಿ ಮನೆಯನ್ನು ಪರಿಶೀಲಿಸಿದ್ದಾರೆ.
ಗುರುವಾರ ಬೆಳಗ್ಗೆ 5.30 ಗಂಟೆಗೆ ಬೆಂಗಳೂರಿನಿಂದ ಬಂದ ಎನ್‌ಐಎ ತಂಡ ನೌಷಾದ್ ಮನೆಗೆ ದಾಳಿ ಮಾಡಿದ್ದು, ಈ ವೇಳೆ ನೌಷಾದ್‌ನ ತಂಗಿ ಮತ್ತು ತಾಯಿ ಮನೆಯಲ್ಲಿ ಇರಲಿಲ್ಲ. ಸುಮಾರು 12 ಗಂಟೆ ವೇಳೆಗೆ ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕದ ಮನೆಯೊಂದರಲ್ಲಿ ಅವರು ಇರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಅವರನ್ನು ಪೊಯ್ಯಗುಡ್ಡೆಯ ನೌಷಾದ್ ಮನೆಗೆ ಕರೆದುಕೊಂಡು ಬಂದು ಬೀಗ ತೆಗೆಸಿ ಅಪರಾಹ್ನ 3ರ ವರೆಗೆ ಪರಿಶೀಲನೆ ನಡೆಸಿದ್ದಾರೆ. ನೌಷಾದ್‌ನ ಪತ್ನಿ ಸೈನಾಝ್ ಪರಾರಿಯಾಗಿದ್ದು, ಶೋಧ ನಡೆಯುತ್ತಿದೆ.
ಸುಳ್ಯದಲ್ಲೂ ಪರಿಶೀಲನೆ
ಎನ್‌ಐಎ ತಂಡ ಸುಳ್ಯದಲ್ಲೂ ಹುಡುಕಾಟ ನಡೆಸಿದೆ. ತಲೆ ಮರೆಸಿಕೊಂಡಿರುವ ಸುಳ್ಯದ ಉಮ್ಮರ್ ಫಾರೂಕ್ ಎಂಬಾತನ ಕಲ್ಲುಮುಟ್ಲು ಮನೆಗೆ ಎನ್‌ಐಎ ತಂಡ ಸ್ಥಳೀಯ ಪೊಲೀಸರ ಸಹಕಾರದಲ್ಲಿ ದಾಳಿ ನಡೆಸಿ ಮನೆಯಲ್ಲಿ ಹುಡುಕಾಟ ನಡೆಸಿದೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?
Sullia: ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಪ್ರಕರಣ; ಚಾಲಕ-ನಿರ್ವಾಹಕರಿಗೆ ಶಿಕ್ಷೆ
Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.