Krishnapura: ತುಕ್ಕು ಹಿಡಿದು ಅಪಾಯಕಾರಿಯಾಗಿವೆ ಆಟದ ಸಲಕರಣೆ
ಕೃಷ್ಣಾಪುರ ಲಂಡನ್ ಪಾರ್ಕ್: ತುಂಡಾದ ಜಾರು ಬಂಡಿ, ಮುರಿದ ಬೆಂಚು
Team Udayavani, Dec 5, 2024, 3:34 PM IST
ಕೃಷ್ಣಾಪುರ: ಇಲ್ಲಿನ ಲಂಡನ್ ಪಾರ್ಕ್ ಒಳ ಭಾಗದಲ್ಲಿರುವ ಮಕ್ಕಳ ಉದ್ಯಾನವನದಲ್ಲಿ ಅಳವಡಿಸಲಾದ ಜಾರು ಬಂಡಿ, ಸಹಿತ ಮಕ್ಕಳು ಆಟದ ಸಲಕರಣೆಗಳು ತುಕ್ಕು ಹಿಡಿದಿವೆ.
ಮಕ್ಕಳು ಆಟವಾಡುವುದನ್ನು ನಿಯಂತ್ರಿ ಸಲು ಸಾಧ್ಯವಿಲ್ಲದ ಕಾರಣ, ನಿತ್ಯ ಜಾರು ಬಂಡಿಯಲ್ಲಿ ಆಡುವಾಗ ತುಂಡಾದ ಕಬ್ಬಿಣದ ಭಾಗ ತಾಗಿ ಗಾಯಗೊಂಡ ಘಟನೆ ನಡೆಯುತ್ತಿದೆ.
ಮಕ್ಕಳಿಗಾಗಿ ಹಾಕಲಾದ ಜಾರು ಬಂಡಿಯ ಹಿಡಿ, ಕಬ್ಬಿಣದ ವಸ್ತುಗಳು ತುಂಡಾಗಿ ಹೋಗಿದ್ದರೆ, ಅದರ ಒಂದು ಭಾಗ ಚೂಪಾಗಿ ಉಳಿದುಕೊಂಡಿದೆ. ಆಟದ ವ್ಯವಸ್ಥೆಯು ನಿರಂತರ ಮಳೆ, ಬಿಸಿಲು ಗಾಳಿಗೆ ಕರಗಿ ಹೋಗುತ್ತಿದ್ದು, ಹೊಸದಾಗಿ ಅಳವಡಿಸಲು ಕ್ರಮ ಕೈಗೊಳ್ಳ ಬೇಕಿದೆ. ವಿಶ್ರಾಂತಿಗಾಗಿ ಹಾಕಿದ್ದ ಬೆಂಚು ಮುರಿದ್ದು ಬಿದ್ದಿದೆ.
ಉದ್ಯಾನವನದ ಒಳಭಾಗದಲ್ಲಿ ಉತ್ತಮ ಜಾತಿಯ ಸಸಿ ನೆಟ್ಟು ಪೋಷಿಸುವ ಕೆಲಸವೂ ಸ್ಥಳೀಯರು ಉತ್ಸುಕತೆ ತೋರಿದರೂ ನೀರಿನ ವ್ಯವಸ್ಥೆ ಮಾಡಬೇಕಿದೆ.
ವ್ಯವಸ್ಥೆಯ ನವೀಕರಣ ಅಗತ್ಯ
ಮಕ್ಕಳಿಗೆ ಪ್ರತ್ಯೇಕ ಉದ್ಯಾನವನದ ವ್ಯವಸ್ಥೆ ಇಲ್ಲಿ ಇಲ್ಲದಿದ್ದರೂ ಪಾರ್ಕ್ ಒಳಭಾಗದಲ್ಲಿ ಯಾರಿಗೂ ಅಡಚಣೆಯಾಗದಂತೆ ಮಕ್ಕಳ ಆಟದ ಸ್ಥಳ ನಿರ್ಮಿಸಲಾಗಿದೆ.
ರಜಾ ದಿನಗಳಲ್ಲಿ ಹೆಚ್ಚಿನ ಮಕ್ಕಳು ಆಡಲು ಬರುವ ಕಾರಣ ಸ್ಥಳಾವಕಾಶ, ಆಟದ ಸಲಕರಣೆ ಸಾಕಾಗುತ್ತಿಲ್ಲ. ಇರುವ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆ ಹೊಸದಾಗಿ ಅಳವಡಿಸುವ ಬಗ್ಗೆ ಕ್ರಮ ಜರಗಿಸಬೇಕು ಎಂಬುದು ಹೆತ್ತವರ ಅಭಿಪ್ರಾಯ.
ಪರಿಶೀಲಿಸಿ ಕ್ರಮಕ್ಕೆ ಸೂಚನೆ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸಣ್ಣ ಮಕ್ಕಳ ಆಟದ ಉದ್ಯಾನವನ್ನು ಪರಿಶೀಲನೆ ನಡೆಸಿ ಅದನ್ನು ಮಕ್ಕಳ ಆಟಕ್ಕೆ ಸುರಕ್ಷಿತವಾಗಿ ಬಳಕೆಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದ್ದೇನೆ .
-ಮನೋಜ್ ಕುಮಾರ್, ಮೇಯರ್ ಮನಪಾ
ನವೀಕರಣಕ್ಕೆ ಪ್ರಯತ್ನ
ಇಲ್ಲಿನ ಮಕ್ಕಳ ಪಾರ್ಕ್‌ನ ಆಟದ ಸಲಕರಣೆ ತುಕ್ಕು ಹಿಡಿದ ಬಗ್ಗೆ ಹೆತ್ತವರು ಗಮನಕ್ಕೆ ತಂದಿದ್ದಾರೆ. ಇದನ್ನು ನವೀಕರಣ ಕುರಿತಂತೆ ಶಾಸಕರು ಹಾಗೂ ಮೇಯರ್ ಅವರಲ್ಲಿ ಚರ್ಚಿಸಿ ಅನುದಾನ ಪಡೆದುಕೊಳ್ಳುವ ಬಗ್ಗೆ ಪ್ರಯತ್ನ ನಡೆಸಲಾಗುವುದು.
-ಲಕ್ಷ್ಮೀ ಶೇಖರ್ ದೇವಾಡಿಗ, ಮನಪಾ ಸದಸ್ಯರು
-ಲಕ್ಷ್ಮೀನಾರಾಯಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.