Golden Age – Chandanavana: ಚಂದನವನದ ಸುವರ್ಣಯುಗ ಮರುಕಳಿಸಲಿ


Team Udayavani, Dec 5, 2024, 4:08 PM IST

13-uv-fusion

ಕರ್ನಾಟಕ ಏಕೀಕರಣಕ್ಕೂ ಮೊದಲೇ ಹುಟ್ಟಿದ ಕನ್ನಡ ಸಿನೆಮಾ ಅಥವಾ ಚಂದನವನಕ್ಕೀಗ 90ರ ಹರೆಯ. ಕನ್ನಡ ಸಿನೆಮಾಗಳ ತೇರು ಸಾಗಿ ಬಂದ ಹಾದಿ ಒಂದು ಥರದ ಘತವೈಭವವೇ ಸರಿ. ಚಂದನವನ ಮಾಡಿರುವ ಅಭೂತಪೂರ್ವ ದಾಖಲೆಗಳು ಒಂದೆರಡಲ್ಲ.

ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ನೀರೊಳಗಡೆ ಚಿತ್ರೀಕರಿಸಿದ “ಒಂದು ಮುತ್ತಿನ ಕಥೆ’ ಸಿನೆಮಾದ ದಾಖಲೆಯಿಂದ ಹಿಡಿದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗರಿಷ್ಠ ಸಂಖ್ಯೆಯ ಮರು-ಬಿಡುಗಡೆಯಾದ “ಓಂ’ ಸಿನೆಮಾದ ವರೆಗೆ; ಅಲ್ಲದೇ ಭಾರತದ ಮೊಟ್ಟ ಮೊದಲ ಸ್ಲೋ ಮೋಷನ್‌ ಹಾಡು ನಾಗರಹಾವು ಚಿತ್ರದ “ಬಾರೇ ಬಾರೇ’ ಮತ್ತು ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ದಕ್ಷಿಣ ಭಾರತದ ಸಿನೆಮಾ “ಸಿಂಗಾಪೂರ್‌ ನಲ್ಲಿ ರಾಜಕುಳ್ಳ’ದಿಂದ ಹಿಡಿದು ಮಲ್ಟಿಪ್ಲೆಕ್ಸ್‌ ನಲ್ಲಿ ಒಂದು ವರ್ಷ ಓಡಿದ ಭಾರತದ ಮೊಟ್ಟ ಮೊದಲ ಚಿತ್ರ “ಮುಂಗಾರು ಮಳೆಯ’ ವರೆಗೂ ಇಂಥ ಹತ್ತು ಹಲವು ದಾಖಲೆಗಳೊಂದಿಗೆ ಚಂದನವನ ತನ್ನದೇ ಆದಂಥ ಛಾಪನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಿದೆ.

ಚಂದನವನವೆಂಬ ತೇರನ್ನು ಜವಾಬ್ದಾರಿಯಿಂದ ಮುನ್ನಡೆಸಿದ ಮೇಧಾವಿಗಳ ಸಂಖ್ಯೆಯು ಬಹಳಷ್ಟಿದೆ. ಸಿದ್ಧಲಿಂಗಯ್ಯ, ಪುಟ್ಟಣ್ಣ ಕಣಗಾಲ್‌, ಶಂಕರ್‌ ನಾಗ್‌, ಗಿರೀಶ್‌ ಕಾಸರವಳ್ಳಿಯಂತಹ ದಿಗ್ಗಜ ನಿರ್ದೇಶಕರು. ಕನ್ನಡ, ಕರ್ನಾಟಕ, ಕನ್ನಡ ಸಿನೆಮಾವೆಂದರೆ ನೆನಪಾಗುವ ಡಾ| ರಾಜಕುಮಾರ್‌, ವಿಷ್ಣುವರ್ಧನ್‌ನಂಥ ಮೇರು ಕಲಾವಿದರು. ಚಿ. ಉದಯಶಂಕರ್‌, ಆರ್‌.ಎನ್‌. ಜಯ ಗೋಪಾಲ್, ಗೀತಪ್ರಿಯ ಮುಂತಾದವರ ಗಹನ ಭಾವ ಸಾಲುಗಳು ತೇರಿಗೆ ಭರ್ಜರಿ ಸ್ವಾಗತ ಮಾಡಿಕೊಟ್ಟರೆ. ಅನಂತರ ಬಂದಂಥ ವಿ. ರವಿಚಂದ್ರನ್‌, ಹಂಸಲೇಖ, ಕೆ.ಕಲ್ಯಾಣ್‌, ವಿ. ಮನೋಹರ್‌, ನಾಗಾಭರಣ, ಜಯಂತ ಕಾಯ್ಕಿಣಿ, ಕಾಶಿನಾಥ್‌, ಉಪೇಂದ್ರರಂಥ ಮಹಾಶಯರು ಆ ತೇರನ್ನು ಅಷ್ಟೇ ಜವಾಬ್ದಾರಿಯಿಂದ ಸಾಗಿಸಿ ಭೇಷ್‌ ಎನಿಸಿಕೊಂಡರು. ಅವರಾದ ಮೇಲೆ ಅವರ ಸಾಲಿಗೆ ಸೇರಿದ ದಂಡು ತೇರನ್ನು ಸ್ವಲ್ಪ ಮಟ್ಟಿಗೂ ಸಾಗಿಸಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ, ಆದರೇ ನಡುದಾರಿಯಲ್ಲಿಯೇ ಬಿಟ್ಟು ನಿಂತಿರುವುದು ವಿಷಾದದ ಸಂಗತಿ. ‌

ಹಿಂದಿಯ “ಚಯ್ಯ ಚಯ್ಯ’ ಹಾಡು ಬರುವುದಕ್ಕೂ ಮುಂಚೆಯೇ ಭಾರತದ ಸಿನೆಮಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಚಲಿಸುತ್ತಿರುವ ರೈಲಿನಲ್ಲಿ ಚಿತ್ರೀಕರಣಗೊಂಡ “ಕಾಲವನ್ನು ತಡೆಯೋರು ಯಾರು ಇಲ್ಲ’ ಹಾಡು ಬಂದಿತ್ತು ಎನ್ನುವುದು ಎಷ್ಟೋ ಕನ್ನಡಿಗರಿಗೇ ತಿಳಿದಿಲ್ಲ. ಒಂಬತ್ತು ದಶಕದಿಂದ ಇಷ್ಟೆಲ್ಲಾ ಸಾಧನೆ ತೋರುತ್ತಾ ಬಂದರೂ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಕನ್ನಡದ ಸಿನೆಮಾಗಳು “ಕೆ.ಜಿ.ಎಫ್’, “ಕಾಂತಾರ’ ಮಾತ್ರ ಎನ್ನುತ್ತಾ ಹೆಮ್ಮೆ ಪಡುವ ಇತ್ತೀಚಿನ ತರುಣರನ್ನು ಕಂಡರೆ ನಗುವುದೋ ಆಳುವುದೋ ತೋಚದು. ಅವರು ಹೇಳುವುದರಲ್ಲಿ ತಪ್ಪೇನಿಲ್ಲ.

ಕೆ.ಜಿ.ಎಫ್, ಕಾಂತಾರ ಸಿನೆಮಾಗಳು ಕಳೆದೊಂದು ದಶಕದಲ್ಲಿ ಸೈಡ್ಲೈನ್‌ ಆದ ಕನ್ನಡ ಚಿತ್ರೋದ್ಯಮವನ್ನು ಬಡಿದೆಬ್ಬಿಸಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಆ ಎರಡು ಚಿತ್ರಗಳು ಬಂದಿದ್ದು ಆಯಿತು, ಭರ್ಜರಿ ಯಶಸ್ಸು ಗಳಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದದ್ದು ಆಯಿತು. ಈಗ ಮುಂದೇನು? 2023-24ರಲ್ಲಿ ತೆರೆಕಂಡ ಎಷ್ಟು ಚಿತ್ರಗಳು ಶತದಿನ ಆಚರಿಸಿದವು? ಉದ್ಯಮ ದೃಷ್ಟಿಯಲ್ಲಿ ನೋಡುತ್ತಾ ಚಿತ್ರಗಳನ್ನು ಮಾಡಿ ಕೈ ಸುಟ್ಟುಕೊಂಡವರೇ ಹೆಚ್ಚು. ಶತದಿನ ಎಂಬುದೆಲ್ಲ ಈ ಜಮಾನಕ್ಕೆ ಅಲ್ಲ, ಚಿತ್ರಕ್ಕೆ ಹಾಕಿದ ದುಡ್ಡು ಬಂದರೆ ಸಾಕು ಎನ್ನುವ ಮಟ್ಟಿಗೆ ಇಳಿದಿದ್ದಾರೆ ಈಗಿನವರು.

ಕಲೆಗೆ- ಚಿತ್ರಕಥೆಗಳಿಗೆ ಗಮನ ಕೊಡದೇ ಹೊಡಿ ಬಡಿ ಸಿನೆಮಾಗಳನ್ನು ಮಾಡುತ್ತಾ, ಅಸಮಂಜಸ ಸಂಭಾಷಣೆಯೊಂದಿಗೆ, ಚಿತ್ರ ವಿಚಿತ್ರ ಸಾಹಿತ್ಯಕ್ಕೆ ಹುಚ್ಚರಂತೆ ಕುಣಿಯುವುದೇ ಇಂದಿನ ಕಾಲದ ಟ್ರೆಂಡ್‌. ಕಳೆದ ಐದಾರು ವರ್ಷಗಳಲ್ಲಿ ಎಷ್ಟು ಸಾಂಸಾರಿಕ ಚಿತ್ರಗಳು ತೆರೆ ಕಂಡಿವೆ? ಐತಿಹಾಸಿಕ ಸಿನೆಮಾಗಳಂತೂ ಸುದ್ದಿಯಲ್ಲಿಯೇ ಇಲ್ಲ! ಒಂದು ವೇಳೆ ಇದ್ದರೂ ಟೈಟಲ್‌ ವಿಚಾರದಲ್ಲೇ ಒಂದು ವರ್ಷ ಕಾಲಹರಣ ಮಾಡುತ್ತಾರೆ.

ಅದೆಲ್ಲಾ ಇರಲಿ ಕನ್ನಡದಲ್ಲಿಯೇ ಎಷ್ಟೋ ಸಾಧಕರಿದ್ದಾರೆ ಅವರ ಬಗ್ಗೆ ಒಂದಾದರೂ ಜೀವನಾಧಾರಿತ ಚಿತ್ರ ಬಂದೀತೆ? ಕನ್ನಡಿಗರಾದ ಡೆಕನ್‌ ಏರ್‌ ಸಂಸ್ಥೆಯ ಮುಖ್ಯಸ್ಥರಾದ “ಕ್ಯಾಪ್ಟನ್‌ ಗೋಪಿನಾಥ್‌’ ಅವರ ಜೀವನಾಧಾರಿತ ಕಥೆ ಕನ್ನಡದಲ್ಲಿ ಬರದೇ ಹೋದರೂ ತಮಿಳಿನಲ್ಲಿ ಅವರ ಬಗ್ಗೆ ಚಿತ್ರ ನಿರ್ಮಿಸಿದವರು ಸೈ ಏನಿಸಿಕೊಂಡರು, ಅದೇ ಚಿತ್ರತಂಡ ಹಿಂದಿಯಲ್ಲಿಯೂ ಚಿತ್ರ ನಿರ್ಮಿಸಿ ಕನ್ನಡಿಗನ ಶ್ರೇಯಸ್ಸನ್ನು ಶ್ಲಾಘಿಸಿದರು. ಆದರೆ ಚಂದನವನ ಏನೂ ಮಾಡುತ್ತಿದೆ? ಕೈಯ್ಯಲ್ಲಿ ಲಾಂಗೂ, ಬಾಯಲ್ಲಿ ಮಚ್ಚು ಹಿಡಿದು ಅಂಡರ್ವರ್ಲ್ಡ್ ಕಥೆಗಳನ್ನು ಹೇಳುವುದರಲ್ಲಿಯೇ ಸಾಕಾಗಿದೆ ಪಾಪ!

ಬೇರೆ ಭಾಷೆಗಳಲ್ಲಿ ರಜಪೂತ ದೊರೆಗಳ, ಚೋಳರಸರ, ಮರಾಠರ ಬಗ್ಗೆ ಸಿನೆಮಾಗಳನ್ನು ಮಾಡಿ ಅವರ ನೆಲದ ಇತಿಹಾಸವನ್ನು ಇಡೀ ಜಗತ್ತಿಗೆ ಹೇಳುತ್ತಾರೆ. ಕನ್ನಡದಲ್ಲಿ ಕದಂಬರು,ಚಾಲುಕ್ಯರು, ಪಲ್ಲವರು, ವಿಜಯನಗರದ ಅರಸರು, ಮೈಸೂರು ಒಡೆಯರು, ಕೆಳದಿ ಅರಸರ ಇತಿಹಾಸ ಯಾರಿಗೇನು ಕಮ್ಮಿ ಇಲ್ಲ, ಆದರೆ ಇವರ ಮೇಲೆ ಚಿತ್ರಗಳನ್ನು ನಿರ್ಮಿಸಲು ಯಾರು ಹೋಗುವುದಿಲ್ಲ. ಹೋದರೂ ಅಪರೂಪ, ಅಂತಹ ಸಿನೆಮಾಗಳನ್ನು ಮಾಡಲು ನಮಗೇನು ತೊಂದರೆ ಇಲ್ಲ, ಆದರೆ ಜನ ನೋಡೋದಿಲ್ಲ ಎಂಬ ಜಾಣ ಉತ್ತರವನ್ನು ನೀಡಿ ಸುಮ್ಮನಾಗುತ್ತಾರೆ.

ಅದು ಸರಿಯೇ, ಚಂದನವನದ ಇಂದಿನ ಪಾಡಿಗೆ ಕನ್ನಡದ ಪ್ರೇಕ್ಷಕರಾಗಿ ನಮ್ಮ ಪಾಲು ಬಹಳಷ್ಟಿದೆ. ಒಳ್ಳೆ ಸಿನೆಮಾಗಳು ತೆರೆಗೆ ಅಪ್ಪಳಿಸಿದಾಗ ನೋಡದೇ, ಅವುಗಳನ್ನು ಸೋಲಿಸಿ ಅವರನ್ನೇ ದೂಷಣೆ ಮಾಡುವುದು ನಮಗಿರುವ ಕೆಟ್ಟ ಚಾಳಿ. ಚಂದನವನ ಮುಂಚೆ ಹೀಗಿರಲಿಲ್ಲ ಕನ್ನಡ ಚಿತ್ರಮಂದಿರಗಳೇ ಕನ್ನಡ ಚಿತ್ರಗಳನ್ನು ಹೊರಗಿಡಲಿಲ್ಲ, ಆಡಿಯೋ ಕಂಪೆನಿಗಳು ಇಂದಿನಂತೆ ಬೀದಿಗಿಳಿಯಲಿಲ್ಲ, ಕನ್ನಡಪರ ಹೋರಾಟಗಳಿದ್ದರೇ ಇಂದಿನವರಂತೆ ಅದು ಇದು ಕಾರಣ ಹೇಳಿ ಜಾರುತ್ತಿರಲಿಲ್ಲ, ಎಲ್ಲದಕ್ಕೂ ಮಿಗಿಲಾಗಿ ತಮ್ಮ ಅದ್ಬುತ ಚಿತ್ರಗಳಿಂದ ಖ್ಯಾತರಾಗುತ್ತಿದ್ದರೇ ಹೊರತು, ಇಂದಿನವರಂತೆ ಬೇಡದ ವಿಚಾರ- ವಿವಾದಗಳಿಂದ ಚಂದನವನದ ಮಾನ ಮರ್ಯಾದೆಯನ್ನು ಬೀದಿಗೆ ತಂದು ಕುಖ್ಯಾತಿ ಪಡೆಯುತ್ತಿರಲಿಲ್ಲ.

ಆಗೆಲ್ಲಾ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಎಲ್ಲ ಹಿರಿತೆರೆ ಕಿರುತೆರೆ ಕಲಾವಿದರೆಲ್ಲಾ ಸಕ್ರಿಯವಾಗಿ ಭಾಗವಹಿಸಿ ಸಮ್ಮೇಳನದ ಯಶಸ್ಸಿನಲ್ಲಿ ಪಾಲು ಪಡೆಯುತ್ತಿದ್ದರು. ಚಿತ್ರರಂಗಕ್ಕೆ ಸಂಬಧಪಟ್ಟಂತೆ ವಿಚಾರಗೋಷ್ಠಿಗಳು, ಚಲನಚಿತ್ರ ಅಕಾಡೆಮಿ ಕಡೆಯಿಂದ ವಸ್ತು ಪ್ರದರ್ಶನ ಹಾಗೂ ಕನ್ನಡ ಚಲನಚಿತ್ರ ಸಾಧಕರಿಗೆ ಸಮ್ಮಾನ ಮಾಡುತ್ತಿದ್ದರು, ಕನ್ನಡದ ರಾಯಭಾರಿಗಳಾಗಿ ಮೆರೆಯುತ್ತಿದ್ದರು. ಆದರೇ ಈಗ ಆ ಅಭಿಮಾನ, ಸಂಭ್ರಮ- ಸಡಗರ ಎಲ್ಲವೂ ಮಾಯ. ಚಂದನವನ ಕಂಡ ಗತವೈಭವ ಮರುಕಳಿಸಬೇಕಿದೆ.

ಪ್ರೇಕ್ಷಕರಾಗಿ ನಮ್ಮ ಪಾತ್ರವೂ ಇದಕ್ಕೆ ಅಗತ್ಯ. ಕನ್ನಡ ಸಿನೆಮಾಗಳನ್ನು ಬೆಳೆಸಬೇಕಿದೆ, ಹೊಸಬರಿಗೆ- ಹೊಸತನದ ಪ್ರಯತ್ನಕ್ಕೆ ಚಪ್ಪಾಳೆ ಹೊಡೆಯುವ ಅಗತ್ಯವಿದೆ. ಕನ್ನಡದ ಜನಪದ ಕಥೆಯನ್ನು ಆಧರಿಸಿ, ಫಿಲ್ಮಂ ಆ್ಯಂಡ್‌ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ವಿದ್ಯಾರ್ಥಿಗಳು ಅಂತಿಮ ವರ್ಷದ ಅಧ್ಯಯನದ ಭಾಗವಾಗಿ ನಿರ್ಮಿಸಿರುವ ಕನ್ನಡದ ಕಿರುಚಿತ್ರ ಸೂರ್ಯಕಾಂತಿಗಳು ಮೊದಲು ತಿಳಿದುಕೊಂಡವು (Sunflowers Were the First Ones to Know) ಕಾನ್‌ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರು ಚಿತ್ರ (ಲಾ ಸಿನೆಫ್) ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದು 2025ರ ಆಸ್ಕರ್‌ಗೆ ಅರ್ಹತೆ ಪಡೆದಿದೆ. ಅಪ್ಪಟ ಉತ್ತರ ಕರ್ನಾಟಕ ಭಾಷೆಯಲ್ಲಿ ತಯಾರಾದ ಕನ್ನಡದ ಕಿರುಚಿತ್ರವೊಂದು ಆಸ್ಕರ್‌ಗೆ ಅರ್ಹತೆ ಪಡೆದಿರುವುದು ಇಡೀ ದೇಶವೇ ಹೆಮ್ಮೆ ಪಡುವ ಸಂಗತಿ. ಇಂಥ ವಿಚಾರಗಳೇ ಚಂದನವನದ ಸುವರ್ಣಯುಗ ಮತ್ತೆ ಮರುಕಳಿಸಲಿದೆ ಎಂಬ ಭರವಸೆಯನ್ನು ನೀಡುವುದು. ಇಂಥವರನ್ನು ಬೆಳೆಸಿ ಶ್ಲಾಘಿಸಿಬೇಕಿದೆ, ಕನ್ನಡ ಸಿನೆಮಾಗಳ ಘತವೈಭವವನ್ನು ಮರು ಕಾಣಬೇಕಾಗಿದೆ.

 ಸ್ವಾಮಿ ಶಶಾಂಕ್‌ ಟಿ.ಎಚ್‌.ಎಂ. ,

ದಾವಣಗೆರೆ

ಟಾಪ್ ನ್ಯೂಸ್

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

Renukaswamy Case: All accused including Darshan appear in court; hearing adjourned

RenukaswamyCase: ದರ್ಶನ್‌ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

Real estate businessman shot while traveling in car

Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಮೇಲೆ ಗುಂಡಿನ ದಾಳಿ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-frndshp

Friendship: ಸ್ನೇಹವೇ ಸಂಪತ್ತು

12-uv-fusion

UV Fusion: ತೆಪ್ಪ ದ್ವೀಪದೂರಿಗೊಂದು ಸಂಪರ್ಕಸೇತು

11-uv-fusion

Friendship: ವಿಶ್ವದ ಸುಂದರ ಸಂಬಂಧ ಗೆಳೆತನ

10-karata

Kota Shivarama Karanth: ಅನುಭವದ ಬುತ್ತಿ ಕೊಟ್ಟ ಕಾರಂತರು…

9-uv-fusion

Smile: ಚಿಂತೆಯನ್ನು ದೂರಮಾಡಿ ಒಮ್ಮೆ ನೀ ನಗು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

Renukaswamy Case: All accused including Darshan appear in court; hearing adjourned

RenukaswamyCase: ದರ್ಶನ್‌ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ

4-bng

Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.