BJP: ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಇನ್ನೂ ಹುಡುಗಾಟದ ಬುದ್ಧಿ ಇದೆ: ರಮೇಶ್ ಜಾರಕಿಹೊಳಿ
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವನು ಲಾಯಕಲ್ಲ: ಮಾಜಿ ಸಚಿವ ಮತ್ತೆ ವಾಗ್ದಾಳಿ
Team Udayavani, Dec 5, 2024, 10:27 PM IST
ಬೆಳಗಾವಿ: ಯಡಿಯೂರಪ್ಪ ಮಗ ಎನ್ನುವ ಕಾರಣಕ್ಕೆ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿದ್ದಾನೆ. ಅವನಿಗೆ ಇನ್ನೂ ಹುಡುಗಾಟದ ಬುದ್ಧಿ ಇದೆ. ಆ ಸ್ಥಾನಕ್ಕೆ ಅವನು ಲಾಯಕ್ ಅಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಪುನರುಚ್ಚರಿಸಿದರು.
ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಬಹಳ ಗಂಭೀರವಾಗಿ ಕೆಲಸ ಮಾಡಬೇಕು. ಆದರೆ ವಿಜಯೇಂದ್ರಗೆ ಇನ್ನೂ ಹುಡುಗಾಟದ ಬುದ್ಧಿ ಇದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಲ್ಲ. ಯಡಿಯೂರಪ್ಪ ಬಹಳಷ್ಟು ಹೋರಾಟ ಮಾಡಿದ ಬಳಿಕ ಮಹತ್ವದ ಹಾಗೂ ಬಹಳ ದೊಡ್ಡ ಸ್ಥಾನಕ್ಕೆ ತಲುಪಿದ್ದಾರೆ. ಈಗ ಅವರಿಂದ ಯಡಿಯೂರಪ್ಪ ಹೋರಾಟ ಮತ್ತು ತ್ಯಾಗ ಮಂಕಾಗುತ್ತಿದೆ ಎಂದರು.
ಸಿದ್ದರಾಮಯ್ಯ ಮಾತು ಬದಲು:
ಕಾಂಗ್ರೆಸ್ನಲ್ಲಿ ಅಧಿಕಾರ ಹಸ್ತಾಂತರ ವಿಚಾರ ಚರ್ಚೆಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾಗಿದ್ದಾರೆ. ಅವರ ಮಾತುಗಳು ಬದಲಾಗುತ್ತಿವೆ. ಒಂದು ವಾರದಿಂದ ಮೊದಲಿನ ಸಿದ್ದರಾಮಯ್ಯ ಆಗಿ ಮಾತನಾಡುತ್ತಿದ್ದಾರೆ. ಇದಕ್ಕೆ ಅವರಿಗೆ ಧನ್ಯವಾದಗಳು ಎಂದರು.
ಸಮುದ್ರದ ರಭಸದ ಅಲೆಯಂತೆ ಬಂದು ಫಡ್ನವೀಸ್ ಅಧಿಕಾರ ಸ್ವೀಕಾರ:
ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಅವರಿಗೂ ಹಾಗೂ ಮಹಾರಾಷ್ಟ್ರ ಜನತೆಗೆ ಧನ್ಯವಾದ ಹೇಳುತ್ತೇನೆ. ಈ ಹಿಂದೆ ಫಡ್ನವೀಸ್ ರನ್ನು ಅಪಮಾನ ಮಾಡಿ ಕೆಳಗೆ ಇಳಿಸಿದ್ದರು. ಆಗ ಫಡ್ನವೀಸ್ ಅವರು ನಾನು ಸಮುದ್ರ ಇದ್ದ ಹಾಗೆ, ವಾಪಸ್ ಹೋಗುವುದು ಗೊತ್ತು, ರಭಸದಿಂದ ಬರೋದು ಗೊತ್ತು. ಸಮುದ್ರದ ಬಳಿ ಮನೆ ಕಟ್ಟಬೇಡಿ ಎಂದು ಹೇಳಿದ್ದರು. ಈಗ ಅದೇ ರೀತಿಯಲ್ಲಿ ಬಂದು ಫಡ್ನವೀಸ್ ಅಧಿಕಾರ ಸ್ವೀಕಾರ ಮಾಡಿದ್ದಾರೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.