Yakshagana ಕಲಾವಿದರಿಗೆ ಸಾಮಾಜಿಕ ಭದ್ರತೆ ಅಗತ್ಯ
Team Udayavani, Dec 6, 2024, 1:28 AM IST
ಯಕ್ಷಗಾನವು ಪ್ರಪಂಚದ ಶ್ರೇಷ್ಠ ಸಾಂಸ್ಕೃತಿಕ ಆಭರಣವಾಗಿದೆ. ಕಥೆಯನ್ನು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ನೃತ್ಯ, ಹಾಡು ಮತ್ತು ಆಶು ಸಂಭಾಷಣೆಯ ಮೂಲಕ ಪ್ರೇಕ್ಷಕರ ಮುಂದೆ ಇಡುವ ಯಕ್ಷಗಾನವು ವಿಶೇಷ ಕಲೆಯಾಗಿ ಪ್ರಸಿದ್ಧವಾಗಿದೆ. ಇದನ್ನು ಬಹುಶಃ ತಲಾಂತರಗಳಿಂದ ಅನೇಕರು ಜೀವನೋಪಾಯವಾಗಿ ಬೆಳೆಸಿಕೊಂಡು ಬಂದಿದ್ದರೂ, ಈ ಕಲಾವಿದರು ಸಾಮಾಜಿಕ ಭದ್ರತೆ ಗಾಗಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಯಕ್ಷಗಾನ ಕಲಾವಿದರ ಜೀವನ ಶ್ರಮ ಮತ್ತುತ್ಯಾಗದಿಂದ ಕೂಡಿದೆ. ಅವರು ಪ್ರಸಂಗ, ತಾಳ ಮದ್ದಳೆ, ಬಯಲಾಟ, ಅಭ್ಯಾಸ, ಕಲಿಕೆಯಲ್ಲಿ ನಿರಂತರವಾಗಿ ನಿರತರಾಗಿರುತ್ತಾರೆ. ಆದಾಗ್ಯೂ ಕಲಾಭಿಮಾನಿಗಳೆಲ್ಲರನ್ನೂ ಅಂತರಂಗದಲ್ಲಿ ತಳಮಳಗೊಳಿಸುವ ವಿಷಯವೇನೆಂದರೆ, ಯಕ್ಷಗಾನ ಕಲಾವಿದರಲ್ಲಿ ಹೆಚ್ಚಿನವರು ತಮ್ಮ ಭವಿಷ್ಯ, ಆರೋಗ್ಯ ಮತ್ತು ಆರ್ಥಿಕ ಭದ್ರತೆಯನ್ನು ಹೊಂದಿಲ್ಲ. ಹಲವಾರು ಕಲಾವಿದರು ತಮ್ಮ ವೃತ್ತಿಯಲ್ಲಿ ಅನನ್ಯ ವಾಗಿದ್ದರೂ ಅವರಿಗೆ ನೀಡಲ್ಪಡುವ ಸಂಭಾವನೆ, ಆರೋಗ್ಯ ಸೇವೆಗಳು ಮತ್ತು ನಿವೃತ್ತಿ ಅನಂತರದ ಸೌಲಭ್ಯಗಳು ಕಡಿಮೆ.
ಯಕ್ಷಗಾನದಿಂದ ಆರ್ಥಿಕ ವಹಿವಾಟು
ದಕ್ಷಿಣೋತ್ತರ ಕರಾವಳಿಯಲ್ಲಿ ಯಕ್ಷಗಾನದ ಒಟ್ಟು 40ರಿಂದ 50 ಮೇಳಗಳಿರಬಹುದು. ಎಂಡೋಮೆಂಟ್ ದೇವಸ್ಥಾನಗಳ ವ್ಯವಸ್ಥೆಯಲ್ಲಿ 15ಕ್ಕಿಂತ ಹೆಚ್ಚು ಇವೆ ಮತ್ತು ಸಕ್ರಿಯ ಮೇಳಗಳ ಸಂಖ್ಯೆ 40 ಇರಬಹುದೆಂದು ಅಂದಾಜಿಸಬಹುದು. ಪ್ರತೀ ಮೇಳದಲ್ಲಿ ಸುಮಾರು 40 ಕಲಾವಿದರಂತೆ 50 ಮೇಳಗಳಲ್ಲಿ 2,000 ಜನ ಕಲಾವಿದರು ಸತತ 6 ತಿಂಗಳುಗಳ ಕಾಲ 180 ದಿನ ವೃತ್ತಿಯನ್ನು ಮಾಡುತ್ತಾರೆ. ಸಕ್ರಿಯ ಮೇಳಗಳೆಂದು 40 ಮೇಳಗಳನ್ನು ಪರಿಗಣಿಸಿದರೆ ಮೇಳಗಳಿಗೆ ಸರಿಸುಮಾರು ಸರಾಸರಿ ಪ್ರತೀ ಆಟಕ್ಕೆ ರೂ. 60,000ದಂತೆ ವೀಳ್ಯವೆಂದು ಅಂದಾಜಿಸಬಹುದು. ಈ ನಿಟ್ಟಿನಲ್ಲಿ ಕರಾವಳಿ ಜಿಲ್ಲೆಗಳ ಯಕ್ಷಗಾನದಿಂದಾ ಗುವ ಪ್ರದರ್ಶನಾವಧಿಯ ಆರ್ಥಿಕ ವ್ಯವಹಾರ ಸರಿಸುಮಾರು ರೂ. 43 .20 ಕೋಟಿಯಷ್ಟು.
ಇದರ ಜತೆಗೆ ಈ ಕಾರ್ಯಕ್ರಮದಿಂದಾಗಿ ನಡೆಯುವ ಇತರ ವ್ಯಾಪಾರ, ಅನ್ನಸಂತರ್ಪಣೆ ಯಂತಹ ಕಾರ್ಯಕ್ರಮ ಮತ್ತು ಸುಡುಮದ್ದು, ಇತರ ವಾದ್ಯ ವೈಭವಗಳು ಇತ್ಯಾದಿ ಸೇರಿದರೆ ಸರಿಸುಮಾರು ರೂ. 50 ಕೋಟಿಯಷ್ಟು ಆರ್ಥಿಕ ವ್ಯವಹಾರ ನಡೆಯುತ್ತದೆಯೆಂದು ಅಂದಾಜಿಸ ಬಹುದು. ಇಂದು ಜಿಲ್ಲೆಯ ಸಾಧಾರಣ ಉದ್ಯಮ
ಗಳಿಂದಲೂ ಹೆಚ್ಚಿನ ಆರ್ಥಿಕ ವ್ಯವಹಾರ ಯಕ್ಷಗಾನದಿಂದ ನಡೆಯುತ್ತಿದೆ. ಇದು ಕರಾವಳಿ ಜಿಲ್ಲೆಗಳ ಆರ್ಥಿಕತೆಗೆ ಯಕ್ಷಗಾನದ ಬಹುದೊಡ್ಡ ಕೊಡುಗೆ. ಇಂತಹ ದೊಡ್ಡ ಆರ್ಥಿಕ ವಹಿವಾಟಿಗೆ ಕಾರಣರಾಗುವ ಕಲಾವಿದರ ಬದುಕು ಅತಂತ್ರವೇ ಎನ್ನುವ ಪ್ರಶ್ನೆ ಕಾಡದಿರದು.
b
ಆರ್ಥಿಕ ಸ್ಥಿರತೆ: ಕಲಾವಿದರಿಗೆ ಖಾತರಿಯ ಆರ್ಥಿಕ ಸಶಕ್ತತತೆಯ ಅಗತ್ಯವಿದೆ. ಪ್ರತಿಯೊಬ್ಬರಿಗೂ ತಕ್ಕಮಟ್ಟಿನ ಸಂಭಾವನೆ ಸಿಗುತ್ತಿದ್ದರೂ ಹಲವು ಕಲಾವಿದರ ಜೀವನ ತೀರಾ ಕಷ್ಟಕರವಾಗಿದೆ. ಯಕ್ಷಗಾನ ಆಕಾಡೆಮಿ ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ. ಸರಕಾರ ಈ ಬಗ್ಗೆ ಚಿಂತನೆ ನಡೆಸಿ ಕಲಾವಿದರಿಗೆ ಸೂಕ್ತ ವೇತನ, ಫಲಾನುಭವಿ ಯೋಜನೆಗಳು ಮತ್ತು ಆರ್ಥಿಕ ನೆರವು ಯೋಜನೆಗಳನ್ನು ಒದಗಿಸಬೇಕು.
ಆರೋಗ್ಯ ವಿಮೆ: ಯಕ್ಷಗಾನ ಕಲಾವಿದರಿಗೆ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ನೃತ್ಯ ಮತ್ತು ರಂಗಭೂಮಿಯ ತೀವ್ರತೆಯಿಂದಾಗಿ ಅವರಿಗೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ತೊಂದರೆಗಳು ಉಂಟಾಗಬಹುದು. ಆರೋಗ್ಯ ವಿಮಾ ಯೋಜನೆಗಳು ಮತ್ತು ತುರ್ತು ಆಸ್ಪತ್ರೆಯ ವ್ಯವಸ್ಥೆ ಇವರಿಗೆ ಅತ್ಯಂತ ಮುಖ್ಯ.
3ನಿವೃತ್ತಿ ಯೋಜನೆಗಳು: ಯಕ್ಷಗಾನ ವೃತ್ತಿಯು ಶಾರೀರಿಕ ಶ್ರಮದ ಮೇಲಾಧಾರಿತವಿರುತ್ತದೆ. ವಯಸ್ಸಾದ ಅನಂತರ ಇವರಿಗೆ ಕೆಲಸ ನಿರ್ವಹಿಸಲು ಕಷ್ಟವಾಗಬಹುದು. ಹೀಗಾಗಿ ನಿವೃತ್ತಿ ಧನ ಮತ್ತು ಪಿಂಚಣಿ ಯೋಜನೆಗಳ ತಂತ್ರವನ್ನು ಸರಕಾರವು ಕಡ್ಡಾಯವಾಗಿ ರೂಪಿಸಬೇಕಾಗಿದೆ.
ಕಲೆಗೆ ಪ್ರೋತ್ಸಾಹ: ಸರಕಾರ ಮತ್ತು ಸಾಮಾಜಿಕ ಸಂಸ್ಥೆಗಳು ಈ ಕಲೆಯನ್ನು ಇನ್ನಷ್ಟು ತಲು ಪಿಸಬೇಕಾಗಿದ್ದು, ವಿಶೇಷವಾಗಿ ಯುವ ಪೀಳಿಗೆಗೆ ತಲುಪಿಸಲು ಆದ್ಯತೆ ನೀಡಬೇಕು. ಯಕ್ಷಗಾನದ ಸಂಸ್ಕೃತಿ ಮತ್ತು ಪರಂಪರೆಯು ಮುಂದುವರಿಯ ಬೇಕಾದರೆ ನೂತನ ಕಲಾವಿದರಿಗೆ ತರಬೇತಿ ಮತ್ತು ಪ್ರೋತ್ಸಾಹ ನೀಡುವುದು ಅಗತ್ಯ. ಇದಕ್ಕಾಗಿ ಮಾನ್ಯತೆ ಪಡೆದ ಕೋರ್ಸ್‌ಗಳನ್ನು ಮಾಡಿ ಅವಕಾಶಕ್ಕೊಂದು ಅರ್ಹತೆಯನ್ನು ಪರಿಗಣಿಸಬೇಕು.
ಕಲಾವಿದರ ಸಂಘಟನೆ: ಯಕ್ಷಗಾನ ಕಲಾವಿ ದರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಮತ್ತು ಅಭಿವೃದ್ಧಿಗಾಗಿ ಒಟ್ಟಾಗಿ ನಿಲ್ಲಬೇಕು. ಸರಕಾರ ಮತ್ತು ಭಾಗೀದಾರರೊಂದಿಗೆ ಮಾತುಕತೆ ನಡೆಸಲು ಒಬ್ಬರು, ಯಕ್ಷಗಾನ ಅಕಾಡೆಮಿಯು ಪ್ರತಿನಿಧಿಯಂತೆ ವ್ಯವಹರಿಸಬೇಕು.
ಸಮುದಾಯದ ಒಲವು ಮತ್ತು ಬೆಂಬಲ: ಕಲಾವಿದರ ಜೀವನ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಸಮುದಾಯದ ಬೆಂಬಲ ಅಗತ್ಯ ವಿದೆ. ಯಕ್ಷಗಾನದ ಪ್ರೇಮಿಗಳು, ಕಲಾ ಹಿತೈಷಿಗಳು ಮತ್ತು ಪೋಷಕರು ಇಂತಹ ಪ್ರಯತ್ನಗಳಲ್ಲಿ ಪಾಲ್ಗೊಂಡು ಸಹಕಾರ ನೀಡಬಹುದು. ಒಂದು ಸಮಷ್ಟಿ ನಿಧಿಯನ್ನು ಸ್ಥಾಪಿಸಬಹುದು.
ಅಭಿವೃದ್ಧಿಗೆ ಉಪಾಯಗಳು: ಸರಕಾರವು ಈ ನಿಟ್ಟಿನಲ್ಲಿ ಗಮನ ಹರಿಸಿ ಸರಕಾರದಿಂದ ನಿಯಮಿತವಾಗುವ ಆರ್ಥಿಕ ನೆರವು ಯೋಜನೆಗಳು, ವಿಮಾ ಯೋಜನೆಗಳು ಮತ್ತು ಪಿಂಚಣಿ, ಕಲಾವಿದರಿಗೆ ಸಹಾಯಕವಾಗಬಹುದು. ಈ ಪ್ರಯತ್ನವು ಕಲಾವಿದರ ಭದ್ರತೆಯೊಂದಿಗೆ ಯಕ್ಷಗಾನವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುತ್ತದೆ.
ಕಲಾವಿದರಿಗಿರಬೇಕಾದ ಸಾಮಾಜಿಕ ಪ್ರಜ್ಞೆ
ಯಕ್ಷಗಾನ ಕಲಾವಿದರು ನಮ್ಮ ಸಂಸ್ಕೃತಿಯ ಜೀವಂತ ಪ್ರತಿಬಿಂಬಗಳು. ಇವರಿಗೆ ಸಕಾಲದಲ್ಲಿ ನೀಡುವ ಸಾಮಾಜಿಕ ಭದ್ರತೆ ಅವರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಜತೆಗೆ, ಯಕ್ಷಗಾನದ ಪರಂಪರೆಯನ್ನೂ ಕಾಯುವಲ್ಲಿ ಸಹಕಾರಿಯಾಗ ಲಿದೆ. ಇದಕ್ಕೆ ಸ್ವತಃ ಕಲಾವಿದರು ಮುತುವರ್ಜಿ ವಹಿಸಿ ಸಂಘಟಿತರಾಗಿ ಮುನ್ನೆಲೆಗೆ ಬರಬೇಕು, ಬೇರೆ ಯಾರಾದರೂ ಇದರ ನೇತೃತ್ವ ವಹಿಸುತ್ತಾರೆ ಎಂದು ನಿರೀಕ್ಷಿಸ ಬಾರದು ಮತ್ತು ಇಂತಹ ವ್ಯವಸ್ಥೆಗೆ ತೊಡಗುವವರಲ್ಲಿ ಸಹಕರಿಸಬೇಕು, ಉಪೇಕ್ಷಿಸಬಾರದು. ಇಂತಹ ಧನಾತ್ಮಕ ಧೋರಣೆಯಿಂದ ಸಾಮಾಜಿಕ ಮಾಧ್ಯಮ ಗಳಲ್ಲಿ ಸಹಾಯ ಕೇಳುವ ದೈನ್ಯತೆ ತಪ್ಪುತ್ತದೆ ಮತ್ತು ಸ್ವಾಭಿಮಾನದ ಬದುಕು ಕಲಾವಿದರದ್ದಾಗುತ್ತದೆ.
ಹೀಗೆ ಕರಾವಳಿಯ ಆರ್ಥಿಕತೆಯ ಹರಿವಿನಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡುತ್ತಿರುವ ಯಕ್ಷಗಾನ ಕ್ಷೇತ್ರದ ಕಲಾವಿದರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಯಕ್ಷಗಾನ ಅಕಾಡೆಮಿ, ಸರಕಾರ ಧನಾತ್ಮಕ ಚಿಂತನೆಯೊಂದಿಗೆ ಯೋಜನೆಯೊಂದನ್ನು ಅಗತ್ಯ ರೂಪಿಸಬೇಕಿದೆ ಮತ್ತು ಈ ಕ್ಷೇತ್ರವನ್ನು ಇನ್ನಷ್ಟು ಸಧೃಢ ಗೊಳಿಸಬೇಕಿದೆ.
ಕುಮಾರ ಸುಬ್ರಹ್ಮಣ್ಯ, ಮುಳಿಯಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.