South korea ಕ್ಕೆ ವಯಸ್ಸಾಯ್ತು? : ಅತ್ಯಂತ ಕನಿಷ್ಠಕ್ಕೆ ಕುಸಿತದ ಫಲವತ್ತತೆಯ ದರ
2100ರ ವೇಳೆಗೆ ದೇಶದ ಜನಸಂಖ್ಯೆ ಕೇವಲ 2 ಕೋಟಿಗಿಳಿಕೆ
Team Udayavani, Dec 6, 2024, 6:55 AM IST
ದಕ್ಷಿಣ ಕೊರಿಯಾದಲ್ಲಿ ಯುವಕರ ಸಂಖ್ಯೆಗಿಂತ ವಯಸ್ಸಾದವರ ಸಂಖ್ಯೆ ಹೆಚ್ಚಾಗುತ್ತಿದೆ.ಈಗಾಗಲೇ ದೇಶದಲ್ಲಿ 60 ವರ್ಷ ಮೀರಿದವರ ಸಂಖ್ಯೆ 1 ಕೋಟಿಗೂ ಅಧಿಕವಾಗಿದೆ.ಇದು ಹೀಗೇ ಮುಂದುವರಿದರೆ ದಕ್ಷಿಣ ಕೊರಿಯಾಕ್ಕಾಗುವ ಸಮಸ್ಯೆ ಏನು? ವೇಗದ ಆರ್ಥಿಕ ಬೆಳವಣಿಗೆಯಿಂದ ಗಮನ ಸೆಳೆದಿದ್ದ ದೇಶ ಏನಾಗಬಹುದು? ಮತ್ಯಾವ ದೇಶಗಳು ಈ ಸಮಸ್ಯೆಗೆ ಸಿಲುಕಿಕೊಂಡಿವೆ ಎಂಬುದರ ಸ್ಥೂಲ ನೋಟ ಇಲ್ಲಿದೆ.
ಮನೆಯಲ್ಲಿ ವಯಸ್ಸಾದವರು ಇದ್ದಾರೆ ಎಂದ ಕೂಡಲೇ ಆ ಮನೆಯ ಖರ್ಚು ಏರಿಕೆಯ ಹಾದಿ ಹಿಡಿಯುತ್ತದೆ. ಪೋಷಣೆಯೂ ಅಷ್ಟೇ ಕಷ್ಟವಾಗುತ್ತದೆ. ಒಂದು ಔಷಧವನ್ನು ತರುವುದರಿಂದ ಹಿಡಿದು ಅಗತ್ಯಕ್ಕನುಸಾರವಾಗಿ ಅವರನ್ನು ಒಂದಡೆಯಿಂದ ಮತ್ತೂಂದೆಡೆ ಕರೆದೊಯ್ಯುವುದೂ ಸಾಮಾನ್ಯಕ್ಕಿಂತ ಹೆಚ್ಚು ವೆಚ್ಚದಾಯಕ ಹಾಗೂ ತ್ರಾಸದಾಯಕ. ಮನೆಯಲ್ಲಿ ದುಡಿಯುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ ಈ ಸಮಸ್ಯೆ ಗಮನಕ್ಕೆ ಬರದಿರಬಹುದು. ಆದರೆ ದುಡಿಯುವವರ ಸಂಖ್ಯೆ ಕುಸಿಯುತ್ತಾ, ವಯಸ್ಸಾದವರ ಸಂಖ್ಯೆ ಹೆಚ್ಚಾಗುತ್ತಾ ಸಾಗಿದರೆ ಸಮಸ್ಯೆ ಉಲ್ಬಣವಾಗುತ್ತದೆ. ಇದು ಒಂದು ಮನೆಯ ಸಮಸ್ಯೆಯಾಗದೇ ದೇಶದ ಸಮಸ್ಯೆಯಾಗಿ ಪರಿವರ್ತನೆಯಾಗುತ್ತದೆೆ! ಈಗ ದಕ್ಷಿಣ ಕೊರಿಯಾ ಇದೇ ಸಮಸ್ಯೆಯನ್ನು ಎದುರಿಸುತ್ತಿದೆ. ದೇಶದಲ್ಲಿ ಯುವಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದೆ. ಇದು ದೇಶದ ಆರ್ಥಿಕತೆಗೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ.
ವಿಶ್ವದಲ್ಲೇ ಕನಿಷ್ಠ ಫಲವತ್ತತೆ ದರ
ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಬಹುತೇಕ ದೇಶಗಳು ವಯಸ್ಸಾದವರ ಪ್ರಮಾಣದ ಹೆಚ್ಚಳವಾಗುತ್ತಿರುವ ಸಮಸ್ಯೆಯನ್ನು ಎದುರಿಸುತ್ತಿವೆ. ಆದರೆ ದಕ್ಷಿಣ ಕೊರಿಯಾ ಜಗತ್ತಿನಲ್ಲೇ ಅತ್ಯಂತ ಕನಿಷ್ಠ ಫಲವತ್ತತೆಯ ಪ್ರಮಾಣವನ್ನು ಹೊಂದಿದೆ. 2023ರಲ್ಲಿ ಇದರ ಪ್ರಮಾಣ ಶೇ.8ರಷ್ಟು ಕುಸಿತ ಕಂಡಿದೆ. ಪ್ರಸ್ತುತ ದಕ್ಷಿಣ ಕೊರಿಯಾದ ಜನಸಂಖ್ಯೆ 5 ಕೋಟಿಯಷ್ಟಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ 2100ರ ವೇಳೆಗೆ ದೇಶದ ಜನಸಂಖ್ಯೆ 2 ಕೋಟಿಗೆ ಕುಸಿಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ದಕ್ಷಿಣ ಕೊರಿಯಾದಲ್ಲಿ ಹುಟ್ಟುತ್ತಿರುವ ಮಕ್ಕಳ ಪ್ರಮಾಣ ಶೇ.0.6ಕ್ಕೆ ಕುಸಿತ ಕಂಡಿದೆ.
1980ರ ದಶಕದ ಬಳಿಕ ಕುಸಿತ ಆರಂಭ
ದಕ್ಷಿಣ ಕೊರಿಯಾದಲ್ಲಿ ಜೀವನ ನಿರ್ವಹಣೆ ವೆಚ್ಚ 1980ರ ದಶಕದಲ್ಲಿ ಏಕಾಏಕಿ ಹೆಚ್ಚಳವಾಗಿದ್ದೇ ಈಗ ದೇಶ ಎದುರಿಸುತ್ತಿರುವ ಸಮಸ್ಯೆಗೆ ಮೂಲ ಕಾರಣ ಎನ್ನಲಾಗುತ್ತಿದೆ. ಜೀವನ ದುಬಾರಿಯಾದ ಕಾರಣ ಮನೆಯಲ್ಲಿ ದಂಪತಿ ಇಬ್ಬರೂ ದುಡಿಯಲು ಆರಂಭಿಸಬೇಕಾಯಿತು. ಇಬ್ಬರು ದುಡಿಯುತ್ತಿರುವ ಮನೆಗಳು ಇತರರ ಮನೆಗಳಿಗಿಂತ ಹೆಚ್ಚು ಸುಖವಾಗಿ ಬದುಕು ನಡೆಸುತ್ತಿದ್ದ ಕಾರಣ ದುಡಿಮೆಯಲ್ಲಿ ಕೈಜೋಡಿಸಿದ ಮಹಿಳೆಗೆ ಸಮಾಜದಲ್ಲಿ ಗೌರವ ಹೆಚ್ಚಾಯಿತು. ಹೀಗಾಗಿ ವರ್ಷಗಳು ಕಳೆದಂತೆ ದುಡಿಮೆ ಅಲ್ಲಿನ ಎಲ್ಲ ಜನರಿಗೂ ಅಭ್ಯಾಸವಾಗಿ ಹೋಗಿತ್ತು. ಹೀಗಾಗಿ ಮಕ್ಕಳನ್ನು ಪಡೆಯುವುದನ್ನು ಜನ ಮುಂದೂಡಲು ಆರಂಭಿಸಿದರು. ಇದು ಹೀಗೆಯೇ ಮುಂದುವರಿದರೆ 2050ರ ವೇಳೆಗೆ ದೇಶದಲ್ಲಿ 80 ವರ್ಷ ಮೀರಿದವರ ಪ್ರಮಾಣ ಶೇ.20ಕ್ಕೇರಿಕೆಯಾಗಲಿದೆ.
ಬೆಂಬಲಕ್ಕೆ ನಿಲ್ಲದ ಸರಕಾರಗಳು
ಜನಸಂಖ್ಯೆ ಪ್ರಮಾಣ ನಿಧಾನವಾಗಿ ಕುಸಿತದ ಹಾದಿ ಹಿಡಿದಿದೆ ಎಂದು ಈ ಶತಮಾನದ ಆದಿಯಲ್ಲೇ ತಜ್ಞರು ಎಚ್ಚರಿಕೆ ನೀಡಿದ್ದರೂ ಅಲ್ಲಿನ ಯಾವುದೇ ಸರಕಾರಗಳು ಇದಕ್ಕೆ ಪರಿಹಾರ ಹುಡುಕಲಿಲ್ಲ. ವೇಗದ ಆರ್ಥಿಕತೆಯ ಮೂಲಕ ಇಡೀ ವಿಶ್ವದ ಗಮನವನ್ನು ಸೆಳೆದಿದ್ದ ಕೊರಿಯಾದ ಚರಿಷ್ಮಾವನ್ನು ಉಳಿಸಿಕೊಳ್ಳಲು ಸರಕಾರಗಳು ಮುಂದಾಗಿದ್ದವು. ದೇಶದಲ್ಲಿ ಕೆಲಸದ ಅವಧಿಯನ್ನು ಹೆಚ್ಚಿಸಿದವು, ದುಡಿಯುವವರಿಗೆ ಮಾತ್ರ ಗೌರವ ಸಿಗುವಂತಾಯಿತು. ದುಡಿಯದ ಜನರನ್ನು ಕೀಳಾಗಿ ಕಾಣುವ ಮನೋಭಾವ ಶುರುವಾಯಿತು. ಹೀಗಾಗಿ ಜನ ಎಲ್ಲವನ್ನೂ ತೊರೆದು ದುಡಿಮೆಯ ಹಿಂದಷ್ಟೇ ಬಿದ್ದರು. ದೇಶದಲ್ಲಿ ಕಾರ್ಖಾನೆಗಳನ್ನು ಸೃಷ್ಟಿಸಿದ್ದರಲ್ಲಿ ಅರ್ಧದಷ್ಟು ಶಿಶು ಕೇಂದ್ರಗಳನ್ನು ಸರಕಾರಗಳು ರಚನೆ ಮಾಡಲಿಲ್ಲ. ಹೀಗಾಗಿ ಮಕ್ಕಳನ್ನು ಸಾಕಲು ಕಷ್ಟ ಎಂದುಕೊಂಡ ಯುವಜನತೆ ಮಕ್ಕಳು ಮಾಡಿಕೊಳ್ಳುವ ನಿರ್ಧಾರಗಳಿಂದ ಹಿಂದೆ ಸರಿದರು.
ಕುಸಿತದತ್ತ ದೇಶದ ಆರ್ಥಿಕತೆ
ಜನಸಂಖ್ಯೆಯಲ್ಲಿ ಯುವಕರ ಪ್ರಮಾಣ ಕುಸಿತ ಕಾಣಲು ಆರಂಭಿಸುತ್ತಿದ್ದಂತೆ ಆರ್ಥಿಕತೆಯೂ ಕುಸಿತದ ಹಾದಿ ಹಿಡಿಯುತ್ತದೆ. ಕೊರಿಯಾದಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ದುಡಿಯುವವರು ಕಡಿಮೆಯಾಗುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ವೈದ್ಯಕೀಯ ವೆಚ್ಚ ಸಾಕಷ್ಟು ದುಬಾರಿಯಾಗಿದೆ. ದೇಶದಲ್ಲಿ ಕಾರ್ಮಿಕರ ಸಂಖ್ಯೆ ಕುಸಿತವಾಗು ತ್ತಿರುವುದರಿಂದ ಉತ್ಪಾದನೆ ಕುಸಿತ ಕಂಡಿದೆ. ಇದು ಲಭ್ಯವಿರುವ ವಸ್ತುಗಳನ್ನು ಮತ್ತಷ್ಟು ದುಬಾರಿ ಮಾಡಿದೆ. ಹೀಗಾಗಿ ವ್ಯಾಪಾರ ವಹಿವಾಟು ಕುಸಿತ ಕಂಡಿದ್ದು, ದೇಶ ದಿವಾಳಿಯಾಗುವತ್ತ ಹೆಜ್ಜೆ ಇಡಲು ಆರಂಭಿಸಿದೆ. ಇಷ್ಟೇ ಅಲ್ಲದೆ ಉತ್ತರ ಕೊರಿಯಾದಿಂದ ಯಾವಾಗಲೂ ದಾಳಿಯ ಭೀತಿ ಎದುರಿಸುತ್ತಿರುವ ದಕ್ಷಿಣ ಕೊರಿಯಾದಲ್ಲಿ ಸೈನಿಕರ ಸಂಖ್ಯೆಯೂ ಕುಸಿತ ಕಂಡಿದ್ದು, ರಾಷ್ಟ್ರೀಯ ಭದ್ರತೆಯೂ ಅಪಾಯಕ್ಕೆ ಸಿಲುಕಿಕೊಂಡಿದೆ.
ಜನಸಂಖ್ಯೆ ಕುಸಿತವನ್ನು ಪ್ರಸ್ತುತ ಅಧಿಕಾರದಲ್ಲಿರುವ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಮಕ್ಕಳ ಪ್ರಮಾಣವನ್ನು ಹೆಚ್ಚಿಸಲು ಮುಂದಾಗಿದೆ. ಇದಕ್ಕಾಗಿ ಸರಕಾರ ಹಲವು ಯೋಜನೆಗಳನ್ನು ಘೋಷಿಸಿದ್ದು, 10 ಕೋಟಿ ರೂ.ವರೆಗೂ ಬಹುಮಾನ ನೀಡಲು ಮುಂದಾಗಿದೆ. ದೇಶದಲ್ಲಿ ಶಾಲೆಗಳ ಗುಣಮಟ್ಟ, ಶಿಶುವಿಹಾರಗಳ ಸ್ಥಾಪನೆ, ಮನೆಗಳ ದರ ಇಳಿಕೆ ಕ್ರಮಗಳನ್ನು ಜಾರಿ ಮಾಡಿದೆ. ಮಕ್ಕಳನ್ನು ಪಡೆಯುವ ದಂಪತಿಗಳಿಗೆ ಬಹುಮಾನಗಳನ್ನು ನೀಡಲಾಗುತ್ತಿದೆ. ಇದರಲ್ಲಿ ತೆರಿಗೆ ಕಡಿತವನ್ನೂ ಸಹ ಸೇರಿಸಲಾಗಿದೆ. ಆದರೆ ದಕ್ಷಿಣ ಕೊರಿಯಾ ತುಂಬಾ ತಡವಾಗಿ ಈ ಯೋಜನೆಗಳನ್ನು ಕೈಗೊಂಡಿದ್ದು, ಜನಸಂಖ್ಯೆ ಹೆಚ್ಚಳ ಸಾಧ್ಯವಾಗುವುದಿಲ್ಲ ಎಂದು ಹಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಪಾನ್, ಚೀನಕ್ಕೂ ಕಾಡುತ್ತಿರುವ ವೃದ್ಧರ ಹೆಚ್ಚಳ ಸಮಸ್ಯೆ
ದಕ್ಷಿಣ ಕೊರಿಯಾವನ್ನಷ್ಟೇ ಅಲ್ಲದೆ ಅದರ ನೆರೆಯ ದೇಶಗಳಾದ ಚೀನ, ಜಪಾನ್‌ಗಳನ್ನೂ ಜನಸಂಖ್ಯಾ ಕುಸಿತ ಸಮಸ್ಯೆ ಕಾಡುತ್ತಿದೆ. ಜನಸಂಖ್ಯಾ ನಿಯಂತ್ರಣಕ್ಕೆ ಚೀನ ಕಠಿನ ಕಾನೂನುಗಳನ್ನು ಜಾರಿ ಮಾಡಿದ ಹಿನ್ನೆಲೆಯಲ್ಲಿ ದೇಶ ಸಮಸ್ಯೆಗೆ ಸಿಲುಕಿಕೊಂಡಿದೆ. ಇದೀಗ ಜನಸಂಖ್ಯೆಯಲ್ಲಿ ಭಾರತಕ್ಕಿಂತ ಚೀನ ಹಿಂದೆ ಬಿದ್ದಿದ್ದು, ಜನಸಂಖ್ಯೆ ಹೆಚ್ಚಳಕ್ಕೆ ಚೀನ ಸಹ ಈಗ ಮುಂದಾಗಿದೆ. ಜಪಾನ್‌ನಲ್ಲಿ ಕುಸಿತ ಆರಂಭವಾಗಿದ್ದರೂ ಅದು ಚೀನದಷ್ಟು ಹೆಚ್ಚಾಗಿಲ್ಲ. ಅಲ್ಲದೆ 2010ರಿಂದಲೇ ಕ್ರಮಗಳನ್ನು ಕೈಗೊಂಡ ಜಪಾನ್ ಮುಂದಿನ ಒಂದೆರಡು ದಶಕದಲ್ಲಿ ಈ ಸಮಸ್ಯೆಯಿಂದ ಪಾರಾಗಲಿದೆ.
ಭಾರತದಲ್ಲೂ ಈಗ ಫಲವತ್ತತೆ ಪ್ರಮಾಣದಲ್ಲಿ ಕುಸಿತ ಆರಂಭ
ಪ್ರಸ್ತುತ ಚೀನಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಭಾರತ ಹೊಂದಿದ್ದರೂ ಭಾರತದಲ್ಲಿ ಮಕ್ಕಳ ಜನನ ಪ್ರಮಾಣ ನಿಧಾನಕ್ಕೆ ಕುಸಿತದ ಹಾದಿ ಹಿಡಿದಿದೆ. 1990ರ ದಶಕದಲ್ಲಿ ಭಾರತದ ಫಲವತ್ತತೆ ದರ ಶೇ.3.4ರಷ್ಟಿತ್ತು. ಬಳಿಕ ಇದು ಕುಸಿತದಲ್ಲೇ ಮುಂದುವರಿದಿದೆ. 2020ರ ದಶಕದಲ್ಲಿ ಇದರ ಪ್ರಮಾಣ ಶೇ.2ಕ್ಕೆ ಕುಸಿದಿದೆ. ದಿನಕಳೆದಂತೆ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚಾಗುವುದರಿಂದ ಜನಸಂಖ್ಯೆ ಕುಸಿಯಲು ಆರಂಭಿಸುತ್ತದೆ. ದಕ್ಷಿಣ ಭಾರತದಲ್ಲಿ ಫಲವತ್ತತೆ ದರ ಉತ್ತರ ಭಾರತಕ್ಕಿಂತ ಕಡಿಮೆಯಾಗಿರುವುದು, ರಾಜಕೀಯವಾಗಿಯೂ ಸಾಕಷ್ಟು ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸುತ್ತಿದೆ.
ಗಣೇಶ್ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.