Asia Cup Champion: ಏಷ್ಯಾ ಕಪ್ ಹಾಕಿ: ಪ್ರಶಸ್ತಿ ಗೆದ್ದ ಭಾರತ ತಂಡಕ್ಕೆ ಮೋದಿ ಶ್ಲಾಘನೆ
ಭಾರತೀಯ ಹಾಕಿ ಕ್ರೀಡೆಯ ಐತಿಹಾಸಿಕ ಕ್ಷಣವೆಂದ ಪ್ರಧಾನಿ
Team Udayavani, Dec 6, 2024, 2:06 AM IST
ಹೊಸದಿಲ್ಲಿ: ಅದ್ಭುತವಾಗಿ ಆಡಿ ಪುರುಷರ ಜೂನಿಯರ್ ಏಷ್ಯಾ ಕಪ್ ಹಾಕಿ ಕೂಟದ ಪ್ರಶಸ್ತಿ ಗೆದ್ದ ಭಾರತೀಯ ಜೂನಿಯರ್ ಹಾಕಿ ತಂಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಹೊಗಳಿದ್ದಾರೆ.
ಇದೊಂದು ಭಾರತೀಯ ಹಾಕಿ ಕ್ರೀಡೆಯ ಐತಿಹಾಸಿಕ ಕ್ಷಣ, ಸಾಟಿಯಿಲ್ಲದ ಕೌಶಲ, ಅಸಾಮಾನ್ಯ ತಂಡ ಪ್ರಯತ್ನ ಮತ್ತು ದೃಢ ನಿಲುವಿನ ಹೋರಾಟದಿಂದ ಈ ಗೆಲುವು ಸಾಧ್ಯವಾಯಿತು ಎಂದು ಮೋದಿ ಅವರು “ಎಕ್ಸ್’ನಲ್ಲಿ ಬರೆದಿದ್ದಾರೆ.
ಅರೈಜೀತ್ ಸಿಂಗ್ ಹುಂಡಲ್ ಅವರ ನಾಲ್ಕು ಗೋಲುಗಳ ಸಾಧನೆಯಿಂದ ಹಾಲಿ ಚಾಂಪಿಯನ್ ಭಾರತವು ಬದ್ಧ ಎದುರಾಳಿ ಪಾಕಿಸ್ಥಾನವನ್ನು 5-3 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನಲ್ಲಿ ಉಳಿಸಿಕೊಂಡ ಸಾಧನೆ ಮಾಡಿತು. ಭಾರತವು ಈ ಪ್ರಶಸ್ತಿಯನ್ನು ಐದನೆ ಬಾರಿ ಪಡೆದಿದೆ. ಈ ಹಿಂದೆ 2004, 2008, 2015 ಮತ್ತು 2023ರಲ್ಲಿ ಜಯಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.