Bengaluru: ಆರೋಪಿಗೆ ನೆರವು, ಲಂಚ: 6 ಪೊಲೀಸರು ಸಸ್ಪೆಂಡ್
ಠಾಣೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಂದ ಹಣ ಸ್ವೀಕಾರ; ಪೊಲೀಸರ ಮೂಲಕ ಆರೋಪಿಗಳಿಂದ ವಸೂಲಿ ಮಾಡಿದ್ದ ಪಿಐ
Team Udayavani, Dec 6, 2024, 12:06 PM IST
ಬೆಂಗಳೂರು: ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಆರೋಪಪಟ್ಟಿಯಿಂದ ಕೈ ಬಿಟ್ಟ ಆರೋಪ ಹಾಗೂ ಠಾಣೆಯಲ್ಲಿ ಭಾರೀ ಭ್ರಷ್ಟಾಚಾರ ಮಾಡಿದ ಆರೋ ಪದ ಮೇರೆಗೆ ಪೂರ್ವವಿಭಾಗದ ರಾಮ ಮೂರ್ತಿನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್ ಸೇರಿ ಆರು ಅಧಿ ಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಿ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎನ್. ಸತೀಶ್ ಕುಮಾರ್ ಆದೇಶಿಸಿದ್ದಾರೆ.
ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಮುತ್ತುರಾಜ್, ಪಿಎಸ್‌ಐ ಉಮೇಶ್, ಸಹಾಯಕ ಸಬ್ ಇನ್ ಸ್ಪೆಕ್ಟರ್ ಫೈರೋಜ್ ಖಾನ್ ಮತ್ತು ಮಹೇಶ್ ಮತ್ತು ಹೆಡ್ ಕಾನ್‌ಸ್ಟೆಬಲ್ ಮಂಜುನಾಥ್, ಕಾನ್‌ಸ್ಟೆàಬಲ್ ಬಸವರಾಜ ಅಳ್ಳೊಳ್ಳಿ ಅಮಾನತುಗೊಂಡವರು.
ಕೊಲೆ ಪ್ರಕರಣವೊಂದರಲ್ಲಿ ಆರೋಪಿ ಗೌರವ್ ಎಂಬಾತನನ್ನು ಬಂಧಿಸದೆ, ಆರೋಪಪಟ್ಟಿಯಲ್ಲೂ ಆತ ನನ್ನು ಕೈ ಬಿಟ್ಟಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಂದ ಹಣ ಪಡೆದು ಬಿಟ್ಟಿರುವುದೂ ಅಲ್ಲದೆ, ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯಿಂದ ಹಣ ಪಡೆದು ಠಾಣೆಯಿಂದ ವಾಪಸ್ ಕಳುಹಿಸಿರುವ ಪ್ರಮುಖ ಆರೋಪಗಳು ಕೇಳಿ ಬಂದಿದ್ದವು.
ಈ ಸಂಬಂಧ ಮೇಲಧಿಕಾರಿಗಳು ವರದಿ ತಯಾರಿಸಿ ಪೊಲೀಸ್ ಆಯುಕ್ತರಿಗೆ ನೀಡಿದ್ದರು. ಪರಿ ಶೀಲನೆಯಲ್ಲಿ ಠಾಣಾಧಿಕಾರಿ ಸೇರಿ ಆರು ಮಂದಿ ಠಾಣೆ ಯಲ್ಲೇ ಭಾರೀ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.
ಸಾಕ್ಷ್ಯ ನಾಶಪಡಿಸುವ ಸಾಧ್ಯತೆ: ಪೊಲೀಸ್ ಇನ್ ಸ್ಪೆಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಕೇಳಿ ಬಂದಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತರುವಂತಾದ್ದಾಗಿದೆ. ಈ ಹಿನ್ನೆಲೆಯಲ್ಲಿ ಆರು ಮಂದಿಯನ್ನು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಮುಂದುವರಿಸಿದಲ್ಲಿ ಸಾಕ್ಷಿದಾರರಿಗೆ ಬೆದರಿಕೆ ಒಡ್ಡುವ ಮತ್ತು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇರುತ್ತದೆ. ರಾಜ್ಯ ಪೊಲೀಸ್ (ಶಿಸ್ತು ನಡವಳಿಗಳು) ನಿಯಮಗಳ ಪ್ರಕಾರ ಇವರನ್ನು ಸೇವೆಯಿಂದ ಅಮಾನತ್ತಿನಲ್ಲಿಡುವುದು ಸೂಕ್ತವೆಂದು ತೀರ್ಮಾನಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖೀಸಲಾಗಿದೆ.
3 ತಿಂಗಳ ಹಿಂದೆಯೇ ದೂರು: ಠಾಣಾಧಿಕಾರಿ ಮುತ್ತುರಾಜ್ ಮತ್ತು ಟೀಮ್ ವಿರುದ್ಧ ಸೆಪ್ಟೆಂಬರ್ ನಲ್ಲೇ ರಾಮಮೂರ್ತಿನಗರ ಠಾಣೆಯ ಕೆಲ ಅಧಿ ಕಾರಿ-ಸಿಬ್ಬಂದಿ ಹಿರಿಯ ಅಧಿಕಾರಿಗಳು ಅನಾಮ ಧೇಯ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಠಾಣಾಧಿಕಾರಿ ಮುತ್ತುರಾಜ್ ಹಾಗೂ ಆತನ ತಂಡ ಎಸಗುತ್ತಿದ್ದ ದೌರ್ಜನ್ಯ, ಭ್ರಷ್ಟಾಚಾರ, ಮಹಿಳಾ ಸಿಬ್ಬಂದಿ ಜತೆ ಅಸಭ್ಯ ವರ್ತನೆ ಬಗ್ಗೆ ಉಲ್ಲೇಖೀಸಿ ದೂರು ನೀಡಿದ್ದರು.
ಪೊಲೀಸರ ವಿರುದ್ಧ ಆರೋಪಗಳೇನು?
ಪ್ರಕರಣ 1:
ಇದೇ ವರ್ಷ ಜೂ.30 ರ ಮಧ್ಯರಾತ್ರಿ ರಾಮಮೂರ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಭಗಿನಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ಕಾನ್‌ಸ್ಟೇಬಲ್‌ಗಳಾದ ಹುಸೇನ್ ಸಾಬ ಗುಳೇದಗುಡ್ಡ ಮತ್ತು ಅನಿಲ್ ಕುಮಾರ್ ಮೇಲೆ ಹಲ್ಲೆ ಮಾಡಿದ ಆರೋಪಿಗಳಾದ ವಿಷ್ಣು, ದೀಪು, ಕಿಶೋರಕುಮಾರ್ ಮತ್ತು ಸಂದೀಪ ಕುಮಾರ ವಿರುದ್ಧ ಪ್ರಕರಣ ದಾಖಲಿಸದೇ, ತಮ್ಮ ಅಧೀನ ಸಿಬ್ಬಂದಿ ಮೂಲಕ ಹಣ ಪಡೆದು ಬಿಡುಗಡೆ ಮಾಡಿದ ಆರೋಪ ಮುತ್ತರಾಜ್ ಮತ್ತು ಪಿಎಸ್‌ಐ ಮಹೇಶ್ ಮೇಲಿದೆ. ಅಲ್ಲದೇ ಕಾನ್‌ಸ್ಟೆàಬಲ್ ಬಸವರಾಜ ಆಳ್ಳೊಳ್ಳಿ ಆರೋಪಿಗಳಿಂದ 2.2 ಲಕ್ಷ ರೂ. ಪಡೆದಿದ್ದರು.
ಪ್ರಕರಣ 2: ಕೊಲೆ ಆರೋಪಿ ಗೌರವ್ ಎಂಬಾತನನ್ನು ಠಾಣಾಧಿಕಾರಿ ಮುತ್ತರಾಜ್ ಬಂಧಿಸದೇ ಆತನ ವಿರುದ್ಧ ಯಾವುದೇ ತನಿಖೆ ಕೈಗೊಳ್ಳದೆ ಮೇಲಧಿಕಾರಿಗಳಿಂದ ನಿಯಮಾನುಸಾರ ಪೂರ್ವಾನುಮತಿಯನ್ನು ಪಡೆಯದೆ, ದೋಷಾರೋಪಣಾ ಪಟ್ಟಿಯಲ್ಲಿ ಆರೋಪಿ ಗೌರವ್ ಹೆಸರನ್ನು ಕೈಬಿಟ್ಟಿದ್ದರು. ಈತನಿಂದಲೂ ಮುತ್ತುರಾಜ್ ಲಕ್ಷಾಂತರ ರೂ. ಪಡೆದುಕೊಡಿದ್ದಾರೆ.
ಪ್ರಕರಣ 3: ಇದೇ ವರ್ಷ ಜುಲೈ 28 ರ ರಾತ್ರಿ ಹೆಡ್ ಕಾನ್‌ಸ್ಟೇಬಲ್ ಈರಯ್ಯ ಹಿರೇಮಠ ಡ್ರಗ್ ಪೆಡ್ಲರ್ ಟೋನಿ ಅಲಿಯಾಸ್ ಆಂಟೋನಿ ಎಂಬಾತನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ 4 ಮಾದಕ ಮಾತ್ರೆ, ಒಂದು ಚಾಕು, 22 ಸಾವಿರ ರೂ.ನಗದು ಮತ್ತು ಮೊಬೈಲ್ ಇತ್ಯಾದಿ ಸಾಕ್ಷ್ಯಾಧಾರಗಳ ಸಮೇತ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದರೂ, ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಬಿಡಗಡೆ ಮಾಡಿದ್ದರು. ಇದೇ ಪ್ರಕರಣದಲ್ಲಿ ಆರೋಪಿಯನ್ನು ಸರಿಯಾಗಿ ವಿಚಾರಣೆ ಮಾಡದೆ ಆತ ಮುಗ್ಧನಾಗಿದ್ದಾನೆ ಎಂದು ಇನ್‌ಸ್ಪೆಕ್ಟರ್‌ಗೆ ಹೇಳಿ ಆರೋಪಿ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸದೇ ಆತನನ್ನು ಬಿಡುಗಡೆ ಮಾಡಿಸುವಲ್ಲಿ ಎಎಸ್‌ಐ ಫೈರೋಜ್ ಖಾನ್, ಮಹೇಶ್, ಮಂಜುನಾಥ್ ಸಫಲರಾಗಿದ್ದರು. ಜತೆಗೆ ಆರೋಪಿಯನ್ನು ಬಿಡುಗಡೆ ಮಾಡಿದ್ದ ಬಗ್ಗೆ ಠಾಣೆಯ ದಾಖಲಾತಿಗಳಲ್ಲಿ ನಮೂದಿಸಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.