Bajpe: ಏರ್‌ಪೋರ್ಟ್‌ ಪ್ರವೇಶ ದ್ವಾರದಲ್ಲಿ ಸೌಲಭ್ಯಗಳ ಕೊರತೆ


Team Udayavani, Dec 6, 2024, 1:01 PM IST

2(1

ನಿಲ್ದಾಣದಲ್ಲಿ ದುಬಾರಿ ಹಣ ವಸೂಲಿಯಿಂದಾಗಿ ದ್ವಾರದಲ್ಲೇ ಕಾಯುವ ಜನರು

ಬಜಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೇರೆ ದೇಶ ಹಾಗೂ ರಾಜ್ಯಗಳಿಗೆ ಪ್ರಯಾಣ ಮಾಡುವವರು ಮತ್ತು ವಿಮಾನದಲ್ಲಿ ಬರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ವ್ಯವಸ್ಥೆಗಳು, ಸೌಲಭ್ಯಗಳು ಮಾತ್ರರೂಪುಗೊಂಡಿಲ್ಲ. ಅದರಲ್ಲೂ ಮುಖ್ಯವಾಗಿ ನೂರಾರು ವಾಹನಗಳು ತಂಗುವ, ಕೆಂಜಾರಿನಲ್ಲಿರುವ ಆಗಮನ ಹಾಗೂ ನಿರ್ಗಮನ ದ್ವಾರದ ಬಳಿ ಸೌಲಭ್ಯಗಳು ಸಿಗದೆ ವಾಹನಿಗರು ಪರದಾಡುವಂತಾಗಿದೆ.

ಯಾರಿಗೆಲ್ಲ ಈ ಸಮಸ್ಯೆ?
ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರು ಸಮಯ ಮೀರಬಾರದು ಎಂಬ ಕಾರಣಕ್ಕಾಗಿ ಸ್ವಲ್ಪ ಬೇಗನೆ ಮನೆಯಿಂದ ಹೊರಟು ಕೆಂಜಾರಿಗೆ ಬರುತ್ತಾರೆ. ಕೆಲವೊಮ್ಮೆ ಒಂದು ಗಂಟೆ ಮೊದಲೇ ತಲುಪುತ್ತಾರೆ. ಹಾಗೆ ಕಾರಿನಲ್ಲಿ ಬಂದವರು ನೇರವಾಗಿ ವಿಮಾನ ನಿಲ್ದಾಣಕ್ಕೆ ಹೋದರೆ ಅಲ್ಲಿ ಕುಳಿತು ಮಾತನಾಡಲೂ ಅವಕಾಶ ಸಿಗುವುದಿಲ್ಲ. ಜತೆಗೆ ದುಬಾರಿ ಪಾರ್ಕಿಂಗ್‌ ಶುಲ್ಕವನ್ನೂ ಕೊಡಬೇಕು ಎಂಬ ಕಾರಣಕ್ಕಾಗಿ ಆಗಮನ-ನಿರ್ಗಮನ ದ್ವಾರದ ಬಳಿ ಕಾರು ನಿಲ್ಲಿಸಿ ವಿರಮಿಸುತ್ತಾರೆ. ಇದೇ ವೇಳೆ, ವಿಮಾನದಲ್ಲಿ ಬರುವ ಪ್ರಯಾಣಿಕರನ್ನು ಕರೆದೊಯ್ಯಲು ಬರುವ ವಾಹನಿಗರೂ ಇದೇ ಜಾಗದಲ್ಲಿ ಕಾದು ವಿಮಾನ ಬಂದಾಗ ನಿಲ್ದಾಣಕ್ಕೆ ಹೋಗಿ ಕರೆದುಕೊಂಡು ಬರುತ್ತಾರೆ. ಇಂಥ ನೂರಾರು ವಾಹನಗಳು ಇಲ್ಲಿ ಕಾಯುತ್ತಿರುತ್ತವೆ. ಅವರಿಗೆಲ್ಲ ಶೌಚಾಲಯ ಸೇರಿದಂತೆ ಮೂಲಭೂತ ಸಮಸ್ಯೆಗಳು ಕಾಡುತ್ತಿವೆ. ಕೆಲವೊಮ್ಮೆ ಮಹಿಳೆಯರೂ ಬಯಲು ಶೌಚಾಲಯ ಬಳಸುವ ಪ್ರಮೇಯ ಎದುರಾಗುತ್ತದೆ.

ಸಾರ್ವಜನಿಕ ಶೌಚಾಲಯ ಇತ್ತು ಈಗ ಕೆಡವಿ ನೆಲಸಮ
ಈ ಹಿಂದೆ ಕೆಂಜಾರಿನ ಅಟಲ್‌ಜೀ ರಿಕ್ಷಾ ಪಾರ್ಕ್‌ ಬಳಿ ಆಗಮನ ದ್ವಾರದ ಬಳಿ ಸಾರ್ವಜನಿಕ ಶೌಚಾಲಯವಿತ್ತು. ರಾಜ್ಯ ಹೆದ್ದಾರಿ ಕಾಮಗಾರಿಯ ವೇಳೆ ಅದನ್ನು ಕೆಡವಿ ನೆಲಸಮಗೊಳಿಸಲಾಗಿದೆ. ಈಗ ಅದರ ಕಾಂಕ್ರೀಟ್‌ ಛಾವಣಿ ಮಾತ್ರ ಉಳಿದಿದೆ.

ದ್ವಾರದ ಬಳಿ ಶೌಚಾಲಯ ಬೇಕು
ಇಲ್ಲಿನ ರಿಕ್ಷಾ ಪಾರ್ಕ್‌ ನಲ್ಲಿ ರಿಕ್ಷಾ ಇಟ್ಟು ಕಾಯುವವರು, ಕಾರಿನಲ್ಲಿ ಬಂದು ಕಾಯುವ ನೂರಾರು ಮಂದಿಯ ಪ್ರಮುಖ ಬೇಡಿಕೆಯೆಂದರೆ ಶೌಚಾಲಯ ಬೇಕು ಎನ್ನುವುದು.

ಅದರ ಜತೆಗೆ ವಾಹನಗಳ ನಿಲುಗಡೆಗೂ ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಿದಂತೆ ಪರಿಸರದ ಕೆಂಜಾರು, ಬಜಪೆ, ಅದ್ಯಪಾಡಿ, ಕೊಳಂಬೆ, ಮಳವೂರು ಗ್ರಾಮಗಳಲ್ಲೂ ಮೂಲ ಸೌಕರ್ಯ ಅಭಿವೃದ್ಧಿ ಮಾಡಬೇಕು.

ಈ ಹಿಂದೆ ಇದ್ದ ಶೌಚಾಲಯ ಕೆಡವಲಾಗಿದ್ದು, ಈಗ ಗೋಡೆ ಮಾತ್ರ ಉಳಿದಿದೆ.

ಕೆಂಜಾರು ಗೇಟಿನಲ್ಲಿ ಕಾಯುವುದೇಕೆ?
ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರನ್ನು ಕರೆದೊಯ್ಯಲು ಬರುವ ಖಾಸಗಿ ಮತ್ತು ಬಾಡಿಗೆ ಕಾರುಗಳು ಕೂಡಾ ವಿಮಾನ ನಿಲ್ದಾಣದ ಕೆಳಗಡೆ ಕೆಂಜಾರಿನಲ್ಲಿ ಸಾಲಾಗಿ ನಿಲ್ಲುತ್ತವೆ. ಇದಕ್ಕೆ ಮುಖ್ಯ ಕಾರಣ, ವಿಮಾನ ನಿಲ್ದಾಣದ ದುಬಾರಿ ಪಾರ್ಕಿಂಗ್‌ ಶುಲ್ಕ.

ವಿಮಾನ ನಿಲ್ದಾಣಕ್ಕೆ ದ್ವಿಚಕ್ರ ವಾಹನದಲ್ಲಿ ಹೋದರೆ ಮೊದಲ 30 ನಿಮಿಷಕ್ಕೆ 20 ರೂ. ಕೊಡಬೇಕು, ಬಳಿಕ ಎರಡು ಗಂಟೆವರೆಗೆ 40 ರೂ. ಶುಲ್ಕ ವಿಧಿಸಲಾಗುತ್ತದೆ. ಕಾರುಗಳಿಗೆ 30 ನಿಮಿಷಕ್ಕೇ 100 ರೂ. ವಸೂಲಿ ಮಾಡಲಾಗುತ್ತದೆ, ಬಳಿಕ ಅದು 150 ರೂ.ಗೆ ಜಿಗಿಯುತ್ತದೆ. ಈಗೀಗ ವಿಮಾನಗಳ ಆಗಮನ ಸಮಯ ವ್ಯತ್ಯಯವಾಗುತ್ತಿದೆ. ಹೀಗಾಗಿ ಮೊದಲೇ ಹೋಗಿ ವಿಮಾನ ನಿಲ್ದಾಣದಲ್ಲಿ ಕಾಯುವುದು ವಾಹನ ಚಾಲಕರಿಗೆ ದುಬಾರಿಯಾಗುತ್ತಿದೆ. ಹೀಗಾಗಿ ಅವರು ನಿಲ್ದಾಣದಲ್ಲಿ ಕಾಯುವ ಬದಲು ಕೆಂಜಾರು ಗೇಟಿನಲ್ಲೇ ಕಾಯುತ್ತಾರೆ. ವಿಮಾನ ಬಂದು ಪ್ರಯಾಣಿಕರು ಹೊರಬಂದು ಫೋನ್‌ ಮಾಡಿದ ಮೇಲೆಯೇ ನಿಲ್ದಾಣಕ್ಕೆ ಹೋಗಿ ಕರೆದುಕೊಂಡು ಬರುತ್ತಾರೆ. ಹೀಗೆ ಕಾಯುವ ವೇಳೆ ಅವರಿಗೆ ಶೌಚಾಲಯವೂ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಕಾಡುತ್ತದೆ. ಸಂಜೆಯ ಹೊತ್ತಿಗೆ ಸುಮಾರು 50ರಿಂದ 100 ಕಾರುಗಳು ಇಲ್ಲಿ ನಿಲ್ಲುತ್ತದೆ.

ರಿಕ್ಷಾ ಚಾಲಕರಿಗೆ ಭಾರೀ ಸಮಸ್ಯೆ
ಎಲ್ಲೆಡೆ ರಿಕ್ಷಾ ಪಾರ್ಕ್‌ ಇದೆ. ಅದರೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಿಕ್ಷಾ ಪಾರ್ಕ್‌ ಇಲ್ಲ! ಈಗೀಗ ವಿಮಾನ ಸಂಚಾರ ಹೆಚ್ಚಾಗಿರುವುದರಿಂದ ಪ್ರತಿ ಬಾರಿಯೂ ದುಬಾರಿ ಕಾರುಗಳಿಗೆ ಹೋಗುವ ಬದಲು ಹೆಚ್ಚಿನವರು ರಿಕ್ಷಾವನ್ನು ಬಯಸುತ್ತಿದ್ದಾರೆ. ಆದರೆ, ಅಲ್ಲಿ ಅವರಿಗೆ ರಿಕ್ಷಾ ಸಿಗುವುದಿಲ್ಲ. ಅವರು ಯಾವುದಾದರೂ ರಿಕ್ಷಾಕ್ಕೆ ಕರೆ ಮಾಡಿದರೆ ಅವರು ಕೆಂಜಾರಿನ ಆಗಮನ ನಿರ್ಗಮನ ದ್ವಾರದಿಂದಲೇ ಹೋಗಿ ಕರೆದುಕೊಂಡು ಬರಬೇಕು.

ಇಲ್ಲಿ ಒಂದು ನಿಯಮವಿದೆ. ಒಮ್ಮೆ ನಿಲ್ದಾಣ ಪ್ರವೇಶಿಸಿದ ಅಟೋ ರಿಕ್ಷಾ ಹತ್ತೇ ನಿಮಿಷದಲ್ಲಿ ಗೇಟ್‌ನಿಂದ ಹೊರಗೆ ಬರಬೇಕು. ಇಲ್ಲದಿದ್ದಲ್ಲಿ 100 ರೂ. ಶುಲ್ಕ ಪಾವತಿಸಬೇಕು. ನಿಜವೆಂದರೆ, ಕೆಂಜಾರಿನಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರನ್ನು ಕರೆದೊಯ್ಯುವ ರಿಕ್ಷಾದವರು 50 ರೂ. ಚಾರ್ಜ್‌ ಮಾಡುತ್ತಾರೆ. ಎಲ್ಲವೂ ಸರಿಯಾಗಿದ್ದರೆ ಸಮಸ್ಯೆ ಇಲ್ಲ. ಒಂದು ವೇಳೆ ವಾಹನಗಳ ಒತ್ತಡದಿಂದ ವಿಮಾನ ನಿಲ್ದಾಣದ ಕ್ಯೂನಲ್ಲಿ ಸಿಕ್ಕಿ ಹಾಕಿಕೊಂಡರೆ ಅವರೇ 100 ರೂ. ಪಾವತಿ ಮಾಡಬೇಕಾಗುತ್ತದೆ. ಅಂದರೆ ಬಾಡಿಗೆಗಿಂತಲೂ ಹೆಚ್ಚು ಹಣ ನೀಡಬೇಕು ಎನ್ನುತ್ತಾರೆ ಇಲ್ಲಿನ ರಿಕ್ಷಾ ಚಾಲಕರು.

-ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆMangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.