Bengaluru: ನಗರದಲ್ಲಿ ಅಪಾಯಕಾರಿ ನೈಟ್ರೋಜನ್‌ ಡೈಆಕ್ಸೈಡ್‌!

ಅಪಾಯಕಾರಿ ರಾಸಾಯನಿಕದಿಂದ ಅಸ್ತಮಾ, ಶ್ವಾಸಕೋಶ ಉರಿಯೂತ, ಅಲರ್ಜಿ ಸಾಧ್ಯತೆ :ಗ್ರೀನ್‌ ಪೀಸ್‌ ಇಂಡಿಯಾ ವರದಿ ; ನೈಟ್ರೋಜನ್‌ ಡೈ ಆಕ್ಸೈಡ್‌ ಸೇವನೆಯಿಂದ ಅನಾರೋಗ್ಯ

Team Udayavani, Dec 6, 2024, 2:50 PM IST

9-bng

ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ಗಾಳಿಯಲ್ಲಿ ಅಪಾಯಕಾರಿ ಮಟ್ಟ ಮೀರಿ ನೈಟ್ರೋಜನ್‌ ಡೈ ಆಕ್ಸೈಡ್‌ ತುಂಬಿಕೊಂಡಿದೆ. ಈ ವಾಯು ಮಾಲಿನ್ಯವು ಮಾರಣಾಂತಿಕ ಕಾಯಿಲೆಗೆ ಕಾರಣವಾಗುತ್ತವೆ ಎಂಬ ಆತಂಕಕಾರಿ ಅಂಶವು ಗ್ರೀನ್‌ ಪೀಸ್‌ ಇಂಡಿಯಾದ ಇತ್ತೀಚಿನ ವರದಿಯಲ್ಲಿ ಬಹಿರಂಗಗೊಂಡಿದೆ.

ಗ್ರೀನ್‌ ಪೀಸ್‌ ಇಂಡಿಯಾ ಇತ್ತೀಚೆಗೆ ಬೆಂಗಳೂರಿನ ವಿವಿಧೆಡೆ ವಾಯು ಗುಣಮಟ್ಟದ ಕುರಿತು ಅಧ್ಯಯನ ನಡೆಸಿ ವರದಿಯೊಂದನ್ನು ಬಹಿರಂಗಪಡಿಸಿದೆ. ಬೆಂಗಳೂರಿನಲ್ಲಿ ವಾಹನಗಳ ಹೊಗೆಯಿಂದ ಉತ್ಪತ್ತಿ ಯಾಗುವ ವಿಷ ಅನಿಲ ನೈಟ್ರೋಜನ್‌ ಡೈ ಆಕ್ಸೈಡ್‌ ಮಿತಿ ಮೀರಿರುವ ಅಂಶವನ್ನು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಇದು ವಾಹನಗಳ ಹೊಗೆಯಿಂದ ವಾತಾವರಣಕ್ಕೆ ಸೇರುವ ಬರಿಗಣ್ಣಿಗೆ ಕಾಣದೇ ಇರುವ ವಿಷಕಾರಿ ವಸ್ತುಗಳಾಗಿವೆ. ಬೆಂಗಳೂರಿನ 13 ಆಂಬಿ ಯೆಂಟ್‌ ಏರ್‌ ಕ್ವಾಲಿಟಿ ಮಾನಿ ಟರಿಂಗ್‌ ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ವಿವಿಧ ಫ‌ಲಿತಾಂಶ ನೀಡಿವೆ. ನಗರದ ಸಿಟಿ ರೈಲ್ವೆ ನಿಲ್ದಾಣದಲ್ಲಿ ಅತ್ಯಧಿಕ ನೈಟ್ರೋ ಜನ್‌ ಡೈ ಆಕ್ಸೈಡ್‌ ಗಾಳಿಯಲ್ಲಿರುವುದು ಪತ್ತೆಯಾಗಿತ್ತು. ಇದು ವರ್ಷದ ಶೇ.80ಕ್ಕಿಂತ ಹೆಚ್ಚು ದಿನ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳನ್ನು ಮೀರಿದೆ. ಇದಲ್ಲದೆ, ಬಿಟಿಎಂ ಲೇಔಟ್‌ ಮತ್ತು ಸಿಲ್ಕ್‌ ಬೋರ್ಡ್‌ ರಸ್ತೆಯ ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರ ದಲ್ಲೂ ಕಳಪೆ ವಾಯು ಗುಣಮಟ್ಟ ವರದಿಯಾಗಿದೆ. ಉತ್ತರ ಭಾರತ ಹೊರತುಪಡಿಸಿ ಬೆಂಗಳೂರು ಸೇರಿದಂತೆ ಭಾರತದ 7 ನಗರಗಳಲ್ಲಿ ಅತ್ಯಂತ ಕಲುಷಿತ ವಾತಾವರಣವಿರುವುದು ಪತ್ತೆಯಾಗಿದೆ.

ದುಷ್ಪರಿಣಾಮ: ನೈಟ್ರೋಜನ್‌ ಡೈಆಕ್ಸೈಡ್‌ ನಿರಂತರ ವಾಗಿ ದೇಹ ಸೇರುವುದರಿಂದ ಅಪಾಯಕಾರಿ ಅನಾ ರೋಗ್ಯ ಉಂಟಾಗುತ್ತದೆ. ವೈಜ್ಞಾನಿಕ ಅಧ್ಯಯನಗಳು ಹೇಳುವಂತೆ ಸತತವಾಗಿ ನೈಟ್ರೋಜನ್‌ ಡೈ ಆಕ್ಸೈಡ್‌ ದೇಹ ಸೇರುವುದರಿಂದ ಅಸ್ತಮಾದ ಅಪಾಯ, ಶ್ವಾಸ ಮಾರ್ಗದ ಉರಿಯೂತ, ಉಸಿರಾಟದ ಕಿರಿಕಿರಿ ಕಾಣಿಸು ತ್ತದೆ. ಈಗಾಗಲೇ ಉಸಿರಾಟದ ತೊಂದರೆಗಳು ಇದ್ದರೆ ಮತ್ತಷ್ಟು ಹದಗೆಡಬಹುದು. ಶ್ವಾಸಕೋಶದ ಬೆಳವಣಿಗೆ ದುರ್ಬಲಗೊಳಿಸುತ್ತದೆ. ಅಲರ್ಜಿ, ಉಸಿರಾಟದ ತೊಂದರೆ ಜತೆಗೆ ಹೃದ್ರೋಗ ಮತ್ತು ಶ್ವಾಸಕೋಶದ ಕ್ಯಾನ್ಸರ್‌ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ. 2019ರ ವರದಿ ಪ್ರಕಾರ, ಬೆಂಗಳೂರಿನಲ್ಲಿ 2,730 ಮಕ್ಕಳಲ್ಲಿ ಕಂಡು ಬಂದಿರುವ ಅಸ್ತಮಾಕ್ಕೆ ವಾತಾವರಣದಲ್ಲಿರುವ ನೈಟ್ರೋ ಜನ್‌ ಡೈಆಕ್ಸೆçಡ್‌ ಮೂಲ ಕಾರಣ ಎಂಬುದು ಕಂಡು ಬಂದಿದೆ.

ವಾಯು ಮಾಲಿನ್ಯವು ಆರೋಗ್ಯಕ್ಕೆ ದೊಡ್ಡ ಮಟ್ಟದಲ್ಲಿ ಹಾನಿ ಮಾಡುತ್ತದೆ. ಇದಕ್ಕೆ ಹೊಸ ಮಾದರಿಯ ಪರಿಹಾರ ಅಗತ್ಯವಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಸುಸ್ಥಿರ ಸಾರ್ವಜನಿಕ ಸಾರಿಗೆ ಅಗತ್ಯವಾಗಿದೆ. ●ಆಕಿಜ್‌ ಫಾರೂಕ್‌, ಗ್ರೀನ್‌ ಪೀಸ್‌ ಇಂಡಿಯಾದ ಮೊಬಿಲಿಟಿ ಕ್ಯಾಂಪೇನರ್‌.

ಟಾಪ್ ನ್ಯೂಸ್

1-bel

Nagaland; ವಾಹನ ಕಂದಕಕ್ಕೆ ಬಿದ್ದು ಬೆಳಗಾವಿ ಯೋಧ ಹುತಾತ್ಮ

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Naxals-Meet-Cm

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-bel

Nagaland; ವಾಹನ ಕಂದಕಕ್ಕೆ ಬಿದ್ದು ಬೆಳಗಾವಿ ಯೋಧ ಹುತಾತ್ಮ

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.