Shirva: ಪಾಂಬೂರು ಅಣೆಕಟ್ಟು ಅಪಾಯದಲ್ಲಿ

ಭಾರೀ ಮಳೆಯಿಂದ ಒಮ್ಮೆಗೇ ಧುಮ್ಮಿಕ್ಕಿದ ನೀರಿಗೆ ತಡೆಗೋಡೆ ಕುಸಿಯುವ ಸ್ಥಿತಿಗೆ

Team Udayavani, Dec 6, 2024, 3:14 PM IST

8(1

ಶಿರ್ವ: ಬೆಳ್ಳೆ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ಪಾಂಬೂರು ದಿಂಡೊಟ್ಟು ಬಳಿ 10 ವರ್ಷಗಳ ಹಿಂದೆ ಪಾಪನಾಶಿನಿ ನದಿಗೆ ಕಟ್ಟಿದ ಕಿಂಡಿ ಆಣೆಕಟ್ಟು ಸರಿಯಾದ ನಿರ್ವಹಣೆಯಿಲ್ಲದೆ ಅಪಾಯಕಾರಿ ಸ್ಥಿತಿ ತಲುಪಿದೆ. ಅಣೆಕಟ್ಟು ಮತ್ತು ಪಶ್ಚಿಮ ಬದಿಯ ತಡೆಗೋಡೆಯ ಮಣ್ಣು ಕುಸಿದು ತಳಪಾಯ ಶಿಥಿಲವಾಗಿದೆ. ಇದೀಗ ಸ್ಥಳೀಯರು ಈ ಕಿಂಡಿ ಅಣೆಕಟ್ಟಿನ ಮೇಲೆ ಎಚ್ಚರದಿಂದ ಓಡಾಡುವಂತೆ ತಡೆ ಬೇಲಿ ಹಾಕಿದ್ದಾರೆ. ಅಪಾಯದಲ್ಲಿರುವ ಕಿಂಡಿ ಅಣೆಕಟ್ಟಿನ ವೀಕ್ಷಣೆಗೆ ಅಧಿಕಾರಿಗಳೂ ಆಗಮಿಸಿದ್ದಾರೆ.

ನೀರಿನ ರಭಸಕ್ಕೆ ಒಡೆದ ತಡೆಗೋಡೆ
ಸಣ್ಣ ನೀರಾವರಿ ಇಲಾಖೆಯ ಉಸ್ತುವಾರಿ ಯಲ್ಲಿರುವ ಈ ಅಣೆಕಟ್ಟಿಗೆ ಸೋಮವಾರ ಅರ್ಧದವರೆಗೆ ಮರದ ಹಲಗೆ ಹಾಕಲಾಗಿತ್ತು. ಅಂದು ಸಂಜೆ ಸುರಿದ ಭಾರೀ ಮಳೆಗೆ ಪಶ್ಚಿಮ ಬದಿಯ ಹಲಗೆ ಕೊಚ್ಚಿ ಹೋಗಿ ನೀರು ರಭಸದಲ್ಲಿ ಹರಿದು ಪಶ್ಚಿಮ ಬದಿಯ ತಡೆಗೋಡೆಗೆ ಬಡಿಯುತ್ತಿತ್ತು.

ಸುಮಾರು 150 ಮೀಟರ್‌ಗಳಷ್ಟು ಉದ್ದದಲ್ಲಿ ತಡೆಗೋಡೆಯ ಮಣ್ಣು ಕುಸಿದು ಭಾರೀ ಗಾತ್ರದ ಹೊಂಡ ಬಿದ್ದಿದೆ. ನದಿ ತೀರದಲ್ಲಿರುವ ಕೃಷಿಕ ಅಂಬ್ರೋಸ್‌ ಕ್ಯಾಸ್ತಲಿನೋ ಅವರ ಪಂಪು ಶೆಡ್‌ ಕುಸಿಯುವ ಭೀತಿಯಲ್ಲಿದೆ. ನದಿಯಲ್ಲಿ ಅಳವಡಿಸಿದ ಸಬ್‌ಮರ್ಸಿಬಲ್‌ ಪಂಪು ಪೈಪ್‌ ಸಮೇತ ಕೊಚ್ಚಿ ಹೋಗಿದೆ.

ಕುಸಿಯುವ ಭೀತಿಯಲ್ಲಿರುವ ಕಿಂಡಿ ಅಣೆಕಟ್ಟಿನಿಂದಾಗಿ ದಾರಿಹೋಕರಿಗೆ, ವಾಹನ ಸವಾರರಿಗೆ ಸಂಕಷ್ಟ ಎದುರಾಗಿದ್ದು, ಸ್ಥಳೀಯ ಕೃಷಿಕ ಅಂಬ್ರೋಸ್‌ ಮೆನೇಜಸ್‌ ಮುನ್ನೆಚ್ಚರಿಕೆ ಕ್ರಮವಾಗಿ ಅಣೆಕಟ್ಟಿನ ಮೇಲಿನಿಂದ ಯಾರೂ ಸಂಚರಿಸದಂತೆ ತಡೆಬೇಲಿ ಹಾಕಿದ್ದಾರೆ. ಅಣೆಕಟ್ಟಿನ ಇಕ್ಕೆಲದಲ್ಲಿ ನಿರ್ಮಿಸಿದ ತಡೆ ಬೇಲಿಯ ಸಿಮೆಂಟ್‌ ಕಂಬಗಳು ಕೂಡಾ ಕುಸಿದಿದ್ದು, ದ್ವಿಚಕ್ರ ವಾಹನ ಸವಾರರಿಗೆ ದಾರಿಹೋಕರಿಗೆ ಅಪಾಯಕಾರಿಯಾಗಿದೆ.

ಉಡುಪಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಸುಧಾಕರ ಶೆಟ್ಟಿ ಕಿಂಡಿ ಅಣೆಕಟ್ಟು ಪ್ರದೇಶಕ್ಕೆ ಗುರುವಾರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಕ್ರಮ ಮರಳುಗಾರಿಕೆ ಕಾರಣ?
ಕಿಂಡಿ ಆಣೆಕಟ್ಟಿನ ಕೆಳಭಾಗದಲ್ಲಿ ನೀರಿನ ರಭಸಕ್ಕೆ ಭಾರೀ ಪ್ರಮಾಣದಲ್ಲಿ ಮರಳು ಸಂಗ್ರಹಗೊಳ್ಳುತ್ತಿದ್ದು, ಇದನ್ನು ದಂಧೆಕೋರರು ಯಾವುದೇ ಪರವಾನಿಗೆ ಇಲ್ಲದೆ ಮೇಲೆತ್ತುತ್ತಾರೆ. ಈ ವರ್ಷ ತಡೆಗೋಡೆಯ ತಳಪಾಯದವರೆಗೂ ಗುಂಡಿ ತೋಡಿ ಮರಳುಗಾರಿಕೆ ನಡೆಸಲಾಗಿತ್ತು ಎನ್ನಲಾಗಿದೆ. ಸೋಮವಾರ ಸುರಿದ ಭಾರೀ ಮಳೆಗೆ ನೀರು ಸಂಗ್ರಹಗೊಂಡು ಅಣೆಕಟ್ಟಿನ ಮೇಲಿನಿಂದ ರಭಸದಿಂದ ಸುರಿದ ಪರಿಣಾಮ ತಡೆಗೋಡೆಯ ತಳಭಾಗದ ಮಣ್ಣೂ ಕೊರೆದು ಹೋಗಿ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಕೆಲವರು ರಾತ್ರಿ ಹಲಗೆ ಎತ್ತರಿಸಿ ನಡುವೆ ಕಲ್ಲು ಇಟ್ಟು ನೀರು ಹರಿದುಹೋಗುವಂತೆ ಮಾಡಿ ಮರಳು ತೆಗೆಯುತ್ತಾರೆ ಎಂಬ ದೂರೂ ಇದೆ. ಈ ಕಾರಣದಿಂದ ಕಳೆದ ಫೆಬ್ರವರಿಯಲ್ಲೇ ನೀರು ಖಾಲಿಯಾಗಿ ಸಮಸ್ಯೆಯಾಗಿತ್ತು.

ಕೃಷಿ, ನೀರಾವರಿಗೆಅನುಕೂಲ ಕಿಂಡಿ
ಪಾಪನಾಶಿನಿ ನದಿಯ ಇಕ್ಕೆಲಗಳಲ್ಲಿ ನೂರಾರು ಎಕರೆ ಕೃಷಿ ಭೂಮಿ ಇದೆ. ಕಿಂಡಿ ಅಣೆಕಟ್ಟು ರೈತರ ಜೀವನಾಡಿಯಾಗಿದ್ದು , ಸುಮಾರು 6-7 ಕಿ.ಮೀ. ದೂರದ ಕಾರ್ಕಳ ತಾಲೂಕಿನ ಸೂಡ ಗ್ರಾಮದವರೆಗೆ ನೀರು ತುಂಬುತ್ತಿತ್ತು. ರೈತರು ಕಬ್ಬು , ತೆಂಗು,ಕಂಗು, ಬಾಳೆ ಕೃಷಿ ,ಭತ್ತದ ಬೇಸಾಯ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿಕೂಲಿ ಕಾರ್ಮಿಕರ ಅಭಾವ ಹಾಗೂ ದುಬಾರಿ ಕೂಲಿಯಿಂದಾಗಿ ಬಹುತೇಕ ಕೃಷಿ ಭೂಮಿ ಹಡಿಲು ಬಿದ್ದಿದೆ.

ಪ್ರತಿವರ್ಷ ಡಿಸೆಂಬರ್‌ ತಿಂಗಳಲ್ಲಿ ಆಣೆಕಟ್ಟಿಗೆ ಹಲಗೆ ಹಾಕುವುದರಿಂದ ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗಿ ಬಾವಿಗಳ ನೀರು 5-6 ಅಡಿ ಏರುತ್ತಿತ್ತು. ಹಲಗೆ ಹಾಕುವಲ್ಲಿ ವಿಳಂಬವಾದರೆ ಅಂತರ್ಜಲ ಕುಸಿದು ಬೇಸಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿತ್ತು.

ತುರ್ತು ಗಮನ ಹರಿಸಲಿ
ಅವೈಜ್ಞಾನಿಕ ರೀತಿಯಲ್ಲಿ ಕಿಂಡಿ ಆಣೆಕಟ್ಟು ನಿರ್ಮಾಣಗೊಂಡಿದ್ದು, ಆಣೆಕಟ್ಟಿನ ನಿರ್ವಹಣೆ ಕಷ್ಟಕರವಾಗಿದೆ. ಸ್ಥಳೀಯರಿಂದ ಮಾಹಿತಿ ಪಡೆಯದೆ ಸೈಡ್‌ವಾಲ್‌ ಕಟ್ಟಿದ್ದು,ಅಕ್ರಮ ಮರಳುಗಾರಿಕೆಯಿಂದ ಅದರ ತಳಪಾಯ ಕುಸಿದು ಹೋಗಿ ಕೃಷಿ ಜಮೀನು ಕೊರೆದುಕೊಂಡು ಹೋಗುವ ಭೀತಿಯಿದೆ. ಅಪಾಯ ಸಂಭವಿಸುವ ಮುನ್ನ ಸಂಬಂಧ ಪಟ್ಟ ಇಲಾಖೆ ತುರ್ತು ಗಮನ ಹರಿಸಲಿ.
-ಹರೀಶ್‌ ಶೆಟ್ಟಿ, ಬೆಳ್ಳೆ ಗ್ರಾ.ಪಂ.ಸದಸ್ಯರು.

ದುರಸ್ತಿಗಾಗಿ ಕ್ರಮ
ಪ್ರದೇಶಕ್ಕೆ ಭೇಟಿ ನೀಡಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಹೆಚ್ಚಿನ ಅನುದಾನಕ್ಕಾಗಿ ಮೇಲಧಿಕಾರಿಗಳಿಗೆ ವರದಿ ನೀಡಲಾಗುತ್ತದೆ. ಅನುದಾನ ಬಿಡುಗಡೆಯಾದ ಕೂಡಲೇ ಅಣೆಕಟ್ಟು ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
-ಸುಧಾಕರ ಶೆಟ್ಟಿ, ಸಹಾಯಕ ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ ಉಡುಪಿ.

-ಸತೀಶ್ಚಂದ್ರ ಶೆಟ್ಟಿ ಶಿರ್ವ

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನKaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.