Dakshina Kannada: ನೇತ್ರಾವತಿಗೆ ಇನ್ನೊಂದು ಸೇತುವೆ: ಸಂಪುಟ ಅಸ್ತು
Team Udayavani, Dec 7, 2024, 7:30 AM IST
ಬೆಂಗಳೂರು: ಬಹುವರ್ಷಗಳ ಬೇಡಿಕೆಯಾದ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಮಂಗಳೂರು ತಾಲೂಕಿನ ಮಂಗಳೂರು- ಚೆರ್ವತ್ತೂರು- ಕರಾವಳಿ ಜಿಲ್ಲಾ ಮುಖ್ಯ ರಸ್ತೆ (ಕೋಟೆ ಪುರ- ಬೋಳಾರ)ಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ಸುಮಾರು 200 ಕೋ.ರೂ. ವೆಚ್ಚದ ಕಾಮಗಾರಿ ಇದಾಗಿದ್ದು, ಇದರಿಂದ ಆ ಭಾಗದ ಜನರಿಗೆ ಸಾಕಷ್ಟು ಅನುಕೂಲ ಆಗಲಿದೆ. ಇದು ದಶಕದ ಬೇಡಿಕೆಯೂ ಆಗಿತ್ತು.
ಎಲ್ಲಿ?
ಈಗಿರುವ ಜೆಪ್ಪಿನಮೊಗರು ಬಳಿಯ ರಾ.ಹೆ. 66ರ ಸೇತುವೆ, ಆ ಬಳಿಕ ಇರುವ ರೈಲ್ವೇ ಸೇತುವೆಯ ಆಚೆಗೆ ಪಶ್ಚಿಮ ಭಾಗದಲ್ಲಿ ಆಗಲಿರುವ ಸೇತುವೆ ಇದಾಗಿದ್ದು, 1,400 ಮೀ. ಉದ್ದಕ್ಕೆ ಕೋಟೆಪುರ ಹಾಗೂ ಬೋಳಾರ ಮಧ್ಯೆ ನಿರ್ಮಾಣಗೊಳ್ಳಲಿದೆ. ಇದರಿಂದ ಮೀನುಗಾರಿಕೆ ಉದ್ದೇಶದ ಸರಕು ಸಾಗಾಟ ವಾಹನಗಳು ತ್ವರಿತವಾಗಿ ಮಂಗಳೂರು-ಕೇರಳ ಮಧ್ಯೆ ಸಂಚರಿಸಬಹುದು; ನಗರದೊಳಗೆ ಬರುವುದು, ಹೆದ್ದಾರಿಯ ಓಡಾಟದಿಂದ ದಟ್ಟಣೆ ಹೆಚ್ಚುವುದು ಇತ್ಯಾದಿ ಕಿರಿಕಿರಿ ತಪ್ಪಲಿದೆ. ಅಲ್ಲದೆ ಕಾಸರಗೋಡು-ಮಂಗಳೂರು ಮಧ್ಯೆ ಪರ್ಯಾಯ ರಸ್ತೆಗೂ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.