Madras IIT Campus: ಹೈಪರ್ಲೂಪ್ ಪರೀಕ್ಷಾ ಹಳಿ ನಿರ್ಮಾಣ ಪೂರ್ಣ: ಕೇಂದ್ರ ಸರಕಾರ
410 ಮೀ. ಟ್ರ್ಯಾಕ್ ನಿರ್ಮಿಸಿದ ಐಐಟಿ ಮದ್ರಾಸ್, ದೇಶದ ಮೊದಲ ಹೈಪರ್ ಲೂಪ್ ಟ್ರ್ಯಾಕ್
Team Udayavani, Dec 7, 2024, 7:27 AM IST
ಹೊಸದಿಲ್ಲಿ: ದೇಶದ ಮೊದಲ ಹೈಪರ್ಲೂಪ್ ಪರೀಕ್ಷಾ ಟ್ರ್ಯಾಕನ್ನು ಮದ್ರಾಸ್ ಐಐಟಿ ಕ್ಯಾಂಪಸ್ನಲ್ಲಿ ನಿರ್ಮಾಣ ಮಾಡಲಾಗಿದೆ. 410 ಮೀ. ಉದ್ದದ ಈ ಟ್ರ್ಯಾಕನ್ನು ಭಾರತೀಯ ರೈಲ್ವೇ, ಆವಿಷ್ಕಾರ್ ಹೈಪರ್ಲೂಪ್, ಐಐಟಿ ಮದ್ರಾಸ್, ಸ್ಟಾರ್ಟ್ಅಪ್ ಟುರ್ ಸಂಸ್ಥೆಗಳು ಸೇರಿ ನಿರ್ಮಾಣ ಮಾಡಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಹೈಪರ್ಲೂಪ್ ಪರೀಕ್ಷಾ ಟ್ರ್ಯಾಕನ್ನು ನಿರ್ಮಾಣ ಮಾಡಲಾಗಿದೆ. ಇದು 410 ಮೀ. ಉದ್ದವಿದೆ ಎಂದಿದ್ದಾರೆ. ಈ ರೈಲಿನ ಗರಿಷ್ಠ ವೇಗ ಗಂಟೆಗೆ 1,110 ಕಿ.ಮೀ. ಆಗಿದ್ದು, ಕಾರ್ಯಾಚರಣ ವೇಗ ಗಂಟೆಗೆ 360 ಕಿ.ಮೀ. ಇರಲಿದೆ.
ಏನಿದು ಹೈಪರ್ಲೂಪ್?:
ಹೈಪರ್ಲೂಪ್ ಅತ್ಯಂತ ವೇಗವಾಗಿ ಸಾರಿಗೆ ಒದಗಿಸುವ ವ್ಯವಸ್ಥೆಯಾಗಿದ್ದು, ಕಡಿಮೆ ಒತ್ತಡವಿರುವ ಪೈಪ್ನೊಳಗೆ ಮ್ಯಾಗ್ನೆಟಿಕ್ ತಂತ್ರಜ್ಞಾನ ಬಳಕೆ ಮಾಡಿಕೊಂಡು ಇದು ಚಲಿಸುತ್ತದೆ. ವಿಮಾನಕ್ಕಿಂತಲೂ ವೇಗವಾಗಿ ಇದು ಕಾರ್ಯನಿರ್ವಹಿಸಲಿದ್ದು, ಪೈಪ್ನೊಳಗೆ ಸಂಚರಿಸುವುದರಿಂದ ಅಡೆತಡೆಗಳಿಲ್ಲದೇ ಅತ್ಯಂತ ವೇಗವಾಗಿ ಇದು ಚಲಿಸುತ್ತದೆ. ಬೆಂಗಳೂರು ಮತ್ತು ಚೆನ್ನೈ ನಡುವೆ ಮೊದಲ ಹೈಪರ್ಲೂಪ್ ವ್ಯವಸ್ಥೆ ನಿರ್ಮಾಣ ಮಾಡಲು ಚಿಂತಿಸಲಾಗಿದೆ ಎಂದು ಕೇಂದ್ರ ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway; 2 ವರ್ಷದಲ್ಲಿ 50 ಅಮೃತ್ ಭಾರತ ರೈಲು ಉತ್ಪಾದನೆ: ಅಶ್ವಿನಿ ವೈಷ್ಣವ್
Cardiac arrest: ಗುಜರಾತ್ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಸಾ*ವು
Chhattisgarh: ನಕ್ಸಲರು ಇಟ್ಟಿದ್ದ ಐಇಡಿ ಸ್ಫೋ*ಟ, ವ್ಯಕ್ತಿ ಸಾ*ವು
Industrial production ಕಳೆದ ನವೆಂಬರ್ನಲ್ಲಿ ಹೆಚ್ಚು: ಕೇಂದ್ರ ಸರ್ಕಾರ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
MUST WATCH
ಹೊಸ ಸೇರ್ಪಡೆ
Elon Musk ಮಾನಸಿಕ ಸ್ಥಿತಿ ಸರಿಯಿಲ್ಲ: ಲೇಖಕ ಅಬ್ರಾಮ್ಸನ್
Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.