Bagladesh Crisis: ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬೈರಕ್ತಾರ್ ಟಿಬಿ2 ಡ್ರೋನ್!
ನಿಖರ ದಾಳಿ ನಡೆಸಬಲ್ಲ ಡ್ರೋನ್ ನಿಯೋಜನೆ, ಭಾರತದಿಂದಲೂ ಗಡಿಯಲ್ಲಿ ಕಣ್ಗಾವಲು, ಭದ್ರತೆ ಹೆಚ್ಚಳ
Team Udayavani, Dec 7, 2024, 7:40 AM IST
ಢಾಕಾ: ಅಲ್ಪಸಂಖ್ಯಾಕ ಹಿಂದೂ ಸಮು ದಾಯದ ಮೇಲಿನ ದಾಳಿ ಸಂಬಂಧ ಭಾರತ-ಬಾಂಗ್ಲಾ ನಡುವೆ ವೈಮನಸ್ಸು ಉಂಟಾಗಿರುವಂತೆಯೇ ಬಾಂಗ್ಲಾ ಸೇನೆಯು ಟರ್ಕಿ ನಿರ್ಮಿತ “ಬೈರಕ್ತಾರ್ ಟಿಬಿ2′ ಡ್ರೋನ್‌ಗಳನ್ನು ಭಾರತ- ಬಾಂಗ್ಲಾ ಗಡಿಯಲ್ಲಿ ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ವ್ಯೂಹಾತ್ಮಕವಾಗಿ ಸೂಕ್ಷ್ಮ ಪ್ರದೇಶ ಗಳಲ್ಲಿ ಈ ನಿಯೋಜನೆ ಭಾರತದ ಆತಂಕ ಹೆಚ್ಚಿಸಿದೆ. ಬಾಂಗ್ಲಾ ರಾಜಕೀಯ ಅಸ್ಥಿರತೆಯ ಲಾಭ ಪಡೆದು ಭಯೋತ್ಪಾದಕರು ಮತ್ತು ಕಳ್ಳಸಾಗಣೆದಾರರ ಜಾಲವು ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ವರದಿ ನೀಡಿರುವ ಬೆನ್ನಲ್ಲೇ ಈ ಬೆಳವಣಿಗೆ ಮಹತ್ವ ಪಡೆದಿದೆ.
ಭಾರತ ಕೂಡ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಿದೆ. “ಬೈರಕ್ತಾರ್ ಟಿಬಿ2′ ಟರ್ಕಿ ನಿರ್ಮಿತ ಡ್ರೋನ್ ಆಗಿದ್ದು, ಕಣ್ಗಾವಲು, ಸಣ್ಣ ಪ್ರಮಾಣದ ದಾಳಿ ಗಳಿಗೆ ಇವುಗಳನ್ನು ಬಳಸಲಾಗುತ್ತದೆ. ಈ ಡ್ರೋನ್ ಒಂದೇ ಬಾರಿಗೆ 4 ಲೇಸರ್ ನಿರ್ದೇಶಿತ ಅಸ್ತ್ರಗಳು, 150ಕೆಜಿ ಪೇಲೋಡ್ ಹೊತ್ತೂಯ್ಯುವ ಸಾಮರ್ಥ್ಯ ಹೊಂದಿದೆ. ಏತನ್ಮಧ್ಯೆ, ಬಾಂಗ್ಲಾ ಹಿಂದೂಗಳ ಮೇಲಿನ ದಾಳಿ ಖಂಡಿಸಿ, ಆಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅಲ್ಲಿನ ಅಲ್ಪಸಂಖ್ಯಾಕ ವಕೀಲರ ಸಂಘ ಆಗ್ರಹಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.