Azerbaijan: ಅಜರ್ಬೈಜಾನ್‌ನ ಪ್ರವಾಸಿ ಸ್ಥಳಗಳು- ಪುರಾತನ, ಪ್ರಾಕೃತಿಕ ತಾಣಗಳ ರಾಷ್ಟ್ರ

ಶಿಲಾಯುಗದ ಕಲ್ಲಿನ ಕೆತ್ತನೆಗಳು ಮತ್ತು ಮಣ್ಣಿನ ಜ್ವಾಲಾಮುಖಿಗಳಿಗೆ ಹೆಸರುವಾಸಿಯಾಗಿದೆ.

Team Udayavani, Dec 7, 2024, 3:19 PM IST

Azerbaijan: ಅಜರ್ಬೈಜಾನ್‌ನ ಪ್ರವಾಸಿ ಸ್ಥಳಗಳು- ಪುರಾತನ, ಪ್ರಾಕೃತಿಕ ತಾಣಗಳ ರಾಷ್ಟ್ರ

ಅಜರ್ಬೈಜಾನ್‌ನಲ್ಲಿ ಬಹಳಷ್ಟು ಪ್ರವಾಸಿ ತಾಣಗಳಿವೆ. ಮಧ್ಯಪ್ರಾಚ್ಯದ ರಾಷ್ಟ್ರಗಳಿಗೆ ಅತೀ ಹತ್ತಿರವಾಗಿರುವುದರಿಂದ, ಬಹುತೇಕ ಜನರು ಸಾರ್ವಜನಿಕ ರಜಾದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಡಿಸೆಂಬರ್‌ನಿಂದ ಮಾರ್ಚ್‌ ತಿಂಗಳಿನವರೆಗೆ ಅಜರ್ಬೈಜಾನ್‌ ದೇಶದ ಶಹದಾಗ್‌ ಮತ್ತು ಗಬಾಲಾದಂತಹ ಸ್ಥಳಗಳು ಹಿಮಾವೃತ್ತವಾಗಿರುತ್ತವೆ. ಅತೀ ಹೆಚ್ಚು ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಕೆಲವು ಪ್ರಸಿದ್ಧ ಪ್ರವಾಸಿ ತಾಣಗಳ ಬಗ್ಗೆ ತಿಳಿಯೋಣ…

ಬಾಕು:
ಅಜರ್ಬೈಜಾನ್‌ ದೇಶದ ರಾಜಧಾನಿ ಬಾಕು. ಅಜರ್ಬೈಜಾನ್‌ನಲ್ಲಿ ನೋಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಈ ನಗರವು ಕ್ಯಾಸ್ಪಿಯನ್‌ ಸಮುದ್ರ(Icherishehe) ಹಾಗೂ ಕಾಕಸಸ್‌ ಪರ್ವತ ಪ್ರದೇಶದ ಅತ್ಯಂತ ದೊಡ್ಡ ನಗರವೂ ಹೌದು. ಇಲ್ಲಿಯ ಜನಸಂಖ್ಯೆ ಅಂದಾಜು 20 ಲಕ್ಷ. ಈ ನಗರವು ದೇಶದ ಅತೀದೊಡ್ಡ ನಗರವಾಗಿದ್ದು ವಾಣಿಜ್ಯ ಮತ್ತು ವಿದ್ಯಾಕೇಂದ್ರವಾಗಿದೆ, ಆಧುನಿಕತೆಯನ್ನು ಒಪ್ಪಿಕೊಂಡಿರುವ ಈ ನಗರ, ಯುರೋಪಿನ ನಗರಗಳನ್ನ ಹೋಲುತ್ತದೆ.

ಇಲ್ಲಿನ ವಿಶೇಷವೇನೆಂದರೆ ಆಧುನಿಕ ಗಗನಚುಂಬಿ ಕಟ್ಟಡಗಳ ಜತೆಗೆ ಶತಶತಮಾನಗಳ ಹಳೆಯ ಕಟ್ಟಡಗಳನ್ನ ಹಳೆಯ ನಗರ (Caspian Sea) ನೋಡಬಹುದು. ಬೆಂಕಿಯನ್ನು ಹೋಲುವಂತೆ ನಿರ್ಮಿಸಿರುವ ಪ್ರಸಿದ್ಧ ಫ್ಲೇಮ್‌ ಟವರ್‌ ಗಳು ಇಲ್ಲಿನ ಪ್ರವಾಸಿಗರ ಪ್ರೇಕ್ಷಣೀಯ ತಾಣವಾಗಿದೆ. 900ಕ್ಕೂ ಹೆಚ್ಚು ಕಲಾಕೃತಿಗಳನ್ನು ಒಳಗೊಂಡಿರುವ ಮ್ಯೂಸಿಯಂ ಆಫ್‌ ಕಾಂಟೆಂಪರರಿ ಇದರ ಜತೆಯಲ್ಲಿ, ನಗರದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಾದ, ಮೇಡನ್‌ ಟವರ್‌, ಶಿರ್ವಾನ್‌ ಶಾಸ್‌ ಅರಮನೆ, ಕಾರವಾನ್‌ಸೆರೈ, ಮೆಮೊರಿ ಅಲ್ಲೆ ಶೆಹಿಡ್ಲರ್‌ ಖಿಯಾಬಾನಿ, ನಿಜಾಮಿ ಸ್ಟ್ರೀಟ್‌, ಫೌಂಟೇನ್‌ ಸ್ಕ್ವೇರ್‌, ನಿಜಾಮಿ ಗಂಜಾವಿ ಸ್ಮಾರಕ, ರಸುಲ್‌-ಝಾಡೆ ಸ್ಟ್ರೀಟ್‌, ನ್ಯಾಶನಲ್‌ ಕಾರ್ಪೆಟ್ಸ್‌ ಮ್ಯೂಸಿಯಂ, ಬಾಕು ಹೈಲ್ಯಾಂಡ್‌ ಪಾರ್ಕ್‌, ಫ್ಲೇಮ್‌ ಟವರ್ಸ್‌ ಮತ್ತು ಹೇದರ್‌ ಅಲಿಯೆವ್‌ ಸೆಂಟರ್‌ ಹೀಗೆ ಹಲವಾರು ಸ್ಥಳಗಳಿವೆ.

ಗೋಬಸ್ಥಾನ್‌ ರಾಷ್ಟ್ರೀಯ ಉದ್ಯಾನ (Gobustan National Park):
ಬಾಕುವಿನ ನೈಋತ್ಯಕ್ಕೆ ಸುಮಾರು 64 ಕಿ.ಮೀ. ದೂರದಲ್ಲಿರುವ ಈ ರಾಷ್ಟ್ರೀಯ ಉದ್ಯಾನವನವು ತನ್ನ ಶಿಲಾಯುಗದ ಕಲ್ಲಿನ ಕೆತ್ತನೆಗಳು ಮತ್ತು ಮಣ್ಣಿನ ಜ್ವಾಲಾಮುಖಿಗಳಿಗೆ ಹೆಸರುವಾಸಿಯಾಗಿದೆ.

*ಪೆಟ್ರೋಗ್ಲಿಫ್ಸ್: 10,000 B.C ವರೆಗಿನ 6,000ಕ್ಕೂ ಹೆಚ್ಚು ಕಲ್ಲಿನ ಕೆತ್ತನೆಗಳು ಪ್ರಾಚೀನ ಮಾನವ ಜೀವನ ಮತ್ತು ವನ್ಯಜೀವಿಗಳ ಚಿತ್ರಣಗಳನ್ನು ಒಳಗೊಂಡಿವೆ.

*ಮಡ್‌ ಜ್ವಾಲಾಮುಖಿಗಳು: ಅಜರ್ಬೈಜಾನ್‌ ಪ್ರಪಂಚದಲ್ಲೇ ಅತೀ ಹೆಚ್ಚು ಮಣ್ಣಿನ ಜ್ವಾಲಾಮುಖಿಗಳನ್ನು ಹೊಂದಿದೆ, ಇದು ಅನನ್ಯ ಭೌಗೋಳಿಕ ಅನುಭವವನ್ನು ನೀಡುತ್ತದೆ.

ಶೆಕಿ (Sheki):
ಗ್ರೇಟರ್‌ಕಾಕಸಸ್‌ ಪರ್ವತಗಳ ತಪ್ಪಲಿನಲ್ಲಿ ನೆಲೆಗೊಂಡಿರುವ ಒಂದು ಆಕರ್ಷಕ ಪಟ್ಟಣ, ಶ್ರೀಮಂತ ಇತಿಹಾಸ ಮತ್ತು ಸುಂದರವಾದ ವಾಸ್ತುಶಿಲ್ಪಕ್ಕೆ ಈ ಪ್ರಾಂತ ಹೆಸರುವಾಸಿಯಾಗಿದೆ. ಇಲ್ಲಿರುವ ಶೆಕಿಖಾನ್‌ ಅರಮನೆ ಸಂಕೀರ್ಣವಾದ ಬಣ್ಣದ ಗಾಜು ಮತ್ತು ಟೈಲ್‌ ಕೆಲಸದಿಂದ ಅಲಂಕರಿಸಲ್ಪಟ್ಟ 18ನೇ ಶತಮಾನದ ಅದ್ಭುತ ಅರಮನೆ. ಸಾಮಾನ್ಯವಾಗಿ ಪುರಾತನ ನಗರಗಳಲ್ಲಿ, ಸ್ಥಳೀಯ ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಸಾಮಾನ್ಯವಾಗಿರುತ್ತದೆ. ಇಲ್ಲಿ ಸಾಂಪ್ರದಾಯಿಕ ಜವಳಿ, ಕುಂಬಾರಿಕೆ ಮತ್ತು ತಾಮ್ರದ ಸಾಮಾನುಗಳನ್ನು ಉತ್ಪಾದಿಸುವುದನ್ನ ಕಾಣಬಹುದು.

ಗಾಂಜಾ (Ganja):
ಅಜರ್ಬೈಜಾನ್‌ನ ಎರಡನೇ ಅತೀ ದೊಡ್ಡ ನಗರ, ಪುರಾತನ ಇತಿಹಾಸ ಮತ್ತು ಸಂಸ್ಕೃತಿಯನ್ನು ಇಲ್ಲಿ ನೋಡಬಹುದು. ಪ್ರಸಿದ್ಧ ಪರ್ಷಿಯನ್‌ ಕವಿ ನಿಜಾಮಿ ಗಂಜಾವಿಗೆ ಸಮರ್ಪಿತವಾಗಿರುವ ನಿಜಾಮಿ ಸಮಾಧಿ (Nizami Mausoleum) ಇಲ್ಲಿದೆ. ಈ ಸಮಾಧಿಯು ಸುಂದರ ವಾಸ್ತುಶಿಲ್ಪವನ್ನು ಹೊಂದಿದೆ. ಈ ನಗರದಲ್ಲಿರುವ ಜಾವದ್‌ ಖಾನ್‌ ಸ್ಟ್ರೀಟ್‌ (Javad Khan Street) ನಲ್ಲಿ ಕೆಫೆಗಳು, ಅಂಗಡಿಗಳು ಮತ್ತು ಐತಿಹಾಸಿಕ ತಾಣಗಳಿವೆ. ಸ್ಥಳೀಯ ಸಂಸ್ಕೃತಿಯಲ್ಲಿ ಅಡ್ಡಾಡಲು ಮತ್ತು ಅರಿತುಕೊಳ್ಳಲು ಈ ಜಾಗ ಸೂಕ್ತವಾಗಿದೆ.

ಕುಬಾ (Quba):
ಅಜರ್ಬೈಜಾನ್‌ನ ಉತ್ತರ ಭಾಗದಲ್ಲಿರುವ ಒಂದು ಸುಂದರವಾದ ಪಟ್ಟಣ. ಇಲ್ಲಿ ಸುಂದರವಾದ ನಯನ ಮನೋಹರವಾದ ಪ್ರಕೃತಿ ಮತ್ತು ಸಾಂಸ್ಕೃತಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ. ಇಸ್ಲಾಮಿಕ್‌ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ ಸುಂದರವಾದ ಕುಬಾ ಮಸೀದಿ, ಪಟ್ಟಣದ ಕೇಂದ್ರ ಭಾಗದಲ್ಲಿದೆ. 1918ರ ನರಮೇಧದ ಬಲಿಯಾದವರ ನೆನಪಿಗಾಗಿ ನಿರ್ಮಿಸಲಾಗಿರುವ ಕುಬಾ ಜಿನೊಸೈಡ್‌ ಮೆಮೋರಿಯಲ್‌ ಸ್ಮಾರಕ ಸಂಕೀರ್ಣ (Quba Genocide Memorial Complex) ವನ್ನು ಕಾಣಬಹುದು. ಐತಿಹಾಸಿಕ ಮಹತ್ವದ ವಿಷಯಗಳ ಕುರಿತು ಆಸಕ್ತಿಯಿರುವವರು ಈ ಸ್ಮಾರಕಕ್ಕೆ ಭೇಟಿ ನೀಡುತ್ತಾರೆ.

ಗಬಾಲಾ (Gabala):
ನೈಸರ್ಗಿಕ ಸೌಂದರ್ಯ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಹೆಸರುವಾಸಿಯಾದ ಜನಪ್ರಿಯ ರೆಸಾರ್ಟ್‌ ಪ್ರದೇಶ, ಬಾಕುದಿಂದ ಸುಮಾರು 225 ಕಿ.ಮೀ. ವಾಯುವ್ಯದಲ್ಲಿದೆ. ಟುಫಾಂಡಗ್‌ ಮೌಂಟೇನ್‌ ರೆಸಾರ್ಟ್‌ Tufandag Mountain Resor) ನಲ್ಲಿ ಚಳಿಗಾಲದ ಸಮಯದಲ್ಲಿ ಸ್ಕೀಯಿಂಗ್‌ ಕ್ರೀಡೆಯನ್ನಾಡಬಹುದು ಮತ್ತು ಬೇಸಗೆಯಲ್ಲಿ ಹೈಕಿಂಗ್‌ ಮಾಡುವುದಕ್ಕೆ ಸೂಕ್ತ ಪ್ರದೇಶ, ಇಲ್ಲಿರುವ ಪರ್ವತಗಳ ಅದ್ಭುತ ನೋಟವನ್ನು ಸವಿಯುವುದೇ ಒಂದು ಖುಷಿ. ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೀಯ ಸ್ಥಳ ಗಬಾಲಾ ಶೂಟಿಂಗ್‌ ಕ್ಲಬ್‌, ಇಲ್ಲಿ ಶೂಟಿಂಗ್‌ ಕ್ರೀಡೆಗಳನ್ನಾಡಲು ಆಧುನಿಕ ಸೌಲಭ್ಯಗಳನ್ನ ರೂಪಿಸಲಾಗಿದೆ.

ನಫ್ತಾಲನ್‌(Naftalan):
ಬಾಕುವಿನ ಪಶ್ಚಿಮಕ್ಕೆ ಸುಮಾರು 300 ಕಿ.ಮೀ. ದೂರದಲ್ಲಿರುವ ಚಿಕಿತ್ಸಕ ತೈಲ ಸ್ನಾನಗಳಿಗೆ ಪ್ರಸಿದ್ಧವಾದ ವಿಶಿಷ್ಟ ಸ್ಪಾ ಪಟ್ಟಣ. ನಮ್ಮ ಕೇರಳದ ಆಯುರ್ವೇದ ತೈಲ ಮಸಾಜ್‌ನಂತೆ ಇಲ್ಲಿನ ಅನೇಕ ರೆಸಾರ್ಟ್‌ಗಳಲ್ಲಿ ವಿಶೇಷವಾಗಿ ಚರ್ಮ ಮತ್ತು ಕೀಲು ಸಮಸ್ಯೆಗಳಿಗೆ ನಫ್ತಾಲನ್‌ ಆಯಿಲ್‌ ಟ್ರೀಟ್‌ಮೆಂಟ್‌ ನೀಡಲಾಗುತ್ತದೆ.

ಖಿನಾಲುಗ್‌ (Khinalug):
2,300 ಮೀಟರ್‌ ಎತ್ತರದಲ್ಲಿರುವ ಅಜರ್ಬೈಜಾನ್‌ನ ಅತೀ ಎತ್ತರದ ಮತ್ತು ಅತ್ಯಂತ ದೂರದ ಪರ್ವತ ಹಳ್ಳಿಗಳಲ್ಲಿ ಒಂದಾಗಿದೆ. ಹಳ್ಳಿಯು ಸುತ್ತಮುತ್ತಲಿನ ಪರ್ವತಗಳು ಮತ್ತು ಕಣಿವೆಗಳ ರಮಣೀಯ ದೃಶ್ಯಗಳು ಕಣ್ಮನ ಸೆಳೆಯುತ್ತವೆ. ಪ್ರವಾಸಿಗರು ಸ್ಥಳೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಆತಿಥ್ಯದ ಅನುಭವವನ್ನು ಪಡೆಯಬಹುದು.

ಲಾಹಿಜ್‌ (Lahi):
ಕುಶಲಕರ್ಮಿಗಳ ಕರಕುಶಲತೆಗೆ ಹೆಸರುವಾಸಿಯಾದ ಐತಿಹಾಸಿಕ ಪರ್ವತ ಗ್ರಾಮ, ವಿಶೇಷವಾಗಿ ಕರಕುಶಲತೆ ರೂಪಿಸುವ ತಾಮ್ರದ ಸಾಮಾನುಗಳನ್ನು ಇಲ್ಲಿ ನೋಡಬಹುದು. ಸ್ಥಳೀಯ ಕುಶಲಕರ್ಮಿಗಳು ತಮ್ಮ ಕೈಯಾರೆ ಸುಂದರವಾಗಿ ವಸ್ತುಗಳನ್ನು ಉತ್ಪಾದಿಸುವುದನ್ನ ಇಲ್ಲಿ ವೀಕ್ಷಿಸಬಹುದು. ಗ್ರಾಮವು ಸಾಂಪ್ರದಾಯಿಕ ವಾಸ್ತುಶೈಲಿ ಮತ್ತು ಸ್ಥಳೀಯ ಕಲ್ಲಿನಿಂದ ನಿರ್ಮಿಸಲಾದ ಅನನ್ಯ ಮನೆಗಳನ್ನು ಒಳಗೊಂಡಿದೆ. ಗ್ರಾಮದ ಬೀದಿಗಳು ಸಹ ಅಷ್ಟೇ ಸುಂದರವಾಗಿವೆ.

ಕ್ಯಾಸ್ಪಿಯನ್‌ ಸಮುದ್ರ (The Caspian Sea):
ಈ ಸಮುದ್ರ ಮಿಕ್ಕ ಸಮುದ್ರಗಳಂತಲ್ಲ. ಇದು ಒಳನಾಡಿನ ಜಲರಾಶಿ ಅಥವಾ ಒಳನಾಡಿನ ಜಲದ್ವೀಪ ಎನ್ನಬಹುದು. ಈ ಸಮುದ್ರದ ಸುತ್ತಲೂ ಭೂ ಪ್ರದೇಶವಿದೆ. ಈ ಸಮುದ್ರ ಮಿಕ್ಕ ಸಮುದ್ರಗಳಂತೆ ಒಂದನ್ನೊಂದು ಸೇರುವುದಿಲ್ಲ. ಸುಂದರವಾದ ಕಡಲತೀರಗಳು, ಕರಾವಳಿಯುದ್ದಕ್ಕೂ ವಿವಿಧ ರೆಸಾರ್ಟ್‌ಗಳು ಬೀಚ್‌ ಪ್ರೇಮಿಗಳು ಮತ್ತು ಜಲ ಕ್ರೀಡೆಗಳ ಉತ್ಸಾಹಿಗಳಿಗೆ ಕೈಬೀಸಿ ಕರೆಯುತ್ತವೆ.

ಅಜರ್ಬೈಜಾನ್‌ನ ಸಂಸ್ಕೃತಿ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದ ಕುರಿತು ಈ ಮೇಲೆ ತಿಳಿಸಿದ ಪ್ರವಾಸಿ ಆಕರ್ಷಣೆಗಳು ಇಲ್ಲಿರುವ ವೈವಿಧ್ಯಮಯ ಪರಿಸರ, ವಾತಾವರಣದಿಂದ ಪ್ರವಾಸಿಗರನ್ನ ಸೆಳೆಯುತ್ತವೆ.

*ಪಿ.ಎಸ್‌.ರಂಗನಾಥ್‌

ಟಾಪ್ ನ್ಯೂಸ್

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

3(2

Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.