Bijapur: ಪೊಲೀಸ್ ಮಾಹಿತಿದಾರೆ ಎಂದು ಅಂಗನವಾಡಿ ಸಹಾಯಕಿಯ ಹ*ತ್ಯೆಗೈದ ನಕ್ಸಲೀಯರು
ವರ್ಷದೊಳಗೆ 60 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ನಕ್ಸಲೀಯರು
Team Udayavani, Dec 7, 2024, 4:28 PM IST
ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಮಹಿಳಾ ಅಂಗನವಾಡಿ ಸಹಾಯಕಿಯನ್ನು ಪೊಲೀಸ್ ಮಾಹಿತಿದಾರಳೆಂಬ ಶಂಕೆಯ ಮೇಲೆ ನಕ್ಸಲೀಯರು ಹತ್ಯೆಗೈದಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ(ಡಿ7) ತಿಳಿಸಿದ್ದಾರೆ.
ಬಸಗೂಡ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು,ಪ್ರಾಥಮಿಕ ಮಾಹಿತಿಯಂತೆ ಗ್ರಾಮದ ಮನೆಗೆ ನುಗ್ಗಿದ ಅಪರಿಚಿತ ನಕ್ಸಲೀಯರು ಲಕ್ಷ್ಮೀ ಪದಂ (45) ಅವರನ್ನು ಮನೆಯವರ ಎದುರೇ ಕತ್ತು ಹಿಸುಕಿ ಹತ್ಯೆ ಮಾಡಿ ಶವವನ್ನು ಮನೆಯ ಅಂಗಳದಲ್ಲಿ ಎಸೆದು ಪರಾರಿಯಾಗಿದ್ದಾರೆ
ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಾವೋವಾದಿಗಳ ಮದ್ದೇಡ್ ಪ್ರದೇಶ ಸಮಿತಿಯು ನೀಡಿದ ಕರಪತ್ರವು ಸ್ಥಳದಲ್ಲಿ ಪತ್ತೆಯಾಗಿದೆ, ಅದರಲ್ಲಿ ಅವರು ಮಹಿಳೆಯನ್ನು ಪೊಲೀಸ್ ಮಾಹಿತಿದಾರಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಹೇಳಿದ್ದಾರೆ.
ದಾಳಿಕೋರ ನಕ್ಸಲರನ್ನು ಪತ್ತೆಹಚ್ಚಲು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಈ ಘಟನೆಯೊಂದಿಗೆ, ಬಿಜಾಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ವಿಭಾಗದ ಪ್ರತ್ಯೇಕ ಸ್ಥಳಗಳಲ್ಲಿ ಈ ವರ್ಷ ಇದುವರೆಗೆ 60 ಕ್ಕೂ ಹೆಚ್ಚು ಜನರನ್ನು ನಕ್ಸಲೀಯರು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.