ಮಹಾರಾಷ್ಟ್ರ ವಿಧಾನಸಭೆ ಸದಸ್ಯರಾಗಿ ಸಿಎಂ, ಡಿಸಿಎಂ ಪ್ರಮಾಣ ವಚನ, ಪ್ರತಿಪಕ್ಷಗಳಿಂದ ಬಹಿಷ್ಕಾರ
Team Udayavani, Dec 7, 2024, 2:08 PM IST
ಮಹಾರಾಷ್ಟ್ರ: ಮಹಾರಾಷ್ಟ್ರ ವಿಧಾನಸಭೆಯ ಮೂರು ದಿನದ ವಿಶೇಷ ಅಧಿವೇಶನ ಇಂದಿನಿಂದ (ಶನಿವಾರ) ಆರಂಭವಾಗಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅದರಂತೆ ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಕೂಡ ವಿಧಾನಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಗೆ ಕಲಾಪ ಆರಂಭಗೊಂಡ ಕೆಲವೇ ಕ್ಷಣದಲ್ಲಿ ಹಂಗಾಮಿ ಸ್ಪೀಕರ್ ಆಗಿರುವ ಕಾಳಿದಾಸ್ ಕೊಲಂಬ್ಕರ್ ಅವರು ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು. ಬಳಿಕ ಸದನದ ಕಲಾಪವನ್ನು ಆರಂಭಿಸಿದರು.
#InPics 📸 | Maharashtra CM Devendra Fadnavis, along with Deputy CMs Eknath Shinde and Ajit Pawar, take the oath of MLA at a special session of the Maharashtra Legislative Assembly. 🏛️🗣️#Maharashtra #CM #DevendraFadnavis #EknathShinde #AjitPawar #Oath | @Dev_Fadnavis… pic.twitter.com/1UTUgi93Iq
— Moneycontrol (@moneycontrolcom) December 7, 2024
ಪ್ರಮಾಣವಚನ ಬಹಿಷ್ಕರಿಸಿದ ವಿಪಕ್ಷದ ಸದಸ್ಯರು:
ಚುನಾವಣೆಯಲ್ಲಿ ಇವಿಎಂ ಅನ್ನು ಆಡಳಿತ ಪಕ್ಷ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಇಂದು ನಡೆಯುವ ಪ್ರಮಾಣವಚನದಲ್ಲಿ ಭಾಗಿಯಾಗದಿರಲು ಮಹಾ ವಿಕಾಸ್ ಅಘಾಡಿ ಸದಸ್ಯರು ನಿರ್ಧರಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಮೊದಲ ದಿನವೇ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸದಿರಲು ಮಹಾ ವಿಕಾಸ್ ಅಘಾಡಿ ಸದಸ್ಯರು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಚುನಾವಣಾ ಸಂದರ್ಭದಲ್ಲಿ ಇವಿಎಂ ಅನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ ಇದು ನಿಜವಾದ ಗೆಲುವಲ್ಲ ಹಾಗಾಗಿ ನಾವು ಪ್ರಮಾಣ ವಚನ ಬಹಿಷ್ಕರಿಸುವುದಾಗಿ ಹೇಳಿಕೊಂಡಿದ್ದಾರೆ.
#WATCH | Mumbai: Shiv Sena UBT leader Aaditya Thackeray says, “We boycotted the oath-taking ceremony today as democracy is being murdered by the use of EVMs…This (the results of the Maharashtra Assembly elections) is not the mandate of the public it is the mandate of EVM and… pic.twitter.com/3dPx3gvvFM
— ANI (@ANI) December 7, 2024
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.