Kasargod: ದಾಖಲು ಪತ್ರಗಳಿಲ್ಲದೆ ಮನೆಯಲ್ಲಿ ಬಚ್ಚಿಟ್ಟಿದ್ದ 6.35 ಲಕ್ಷ ರೂ. ವಶಕ್ಕೆ
Team Udayavani, Dec 7, 2024, 7:58 PM IST
ಕಾಸರಗೋಡು: ಸರಿಯಾದ ದಾಖಲೆ ಪತ್ರಗಳಿಲ್ಲದೆ ಮನೆಯಲ್ಲಿ ಬಚ್ಚಿಟ್ಟಿದ್ದ 6.35 ಲಕ್ಷ ರೂ. ಹಾಗೂ ನೋಟು ಎಣಿಸುವ ಯಂತ್ರವನ್ನು ಕಾಸರಗೋಡು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಳಂಗರೆ ನುಸ್ರತ್ ನಗರದ ಮನೆಯೊಂದರಿಂದ ಪೊಲೀಸರು ಹಣ ವಶಪಡಿಸಿಕೊಂಡಿದ್ದಾರೆ. ಆ ಮನೆಯಲ್ಲಿ ಹಣವನ್ನು ಬಚ್ಚಿಡಲಾಗಿದೆ ಎಂಬ ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಮನೆಗೆ ದಾಳಿ ನಡೆಸಿದ್ದರು. ಈ ಹಣವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.