ISL 2024-25: ಬೆಂಗಳೂರಿಗೆ 4-2ರಿಂದ ಜಯ; ಸುನೀಲ್ ಚೆಟ್ರಿ 3 ಗೋಲು
Team Udayavani, Dec 7, 2024, 10:08 PM IST
ಬೆಂಗಳೂರು: ಇಲ್ಲಿನ ಕಂಠೀರವ ಮೈದಾನದಲ್ಲಿ ನಡೆದ ಐಎಸ್‌ಎಲ್ ಪಂದ್ಯದಲ್ಲಿ ಬೆಂಗಳೂರು ಎಫ್ಸಿ 4-2 ಗೋಲುಗಳಿಂದ ಕೇರಳ ಬ್ಲಾಸ್ಟರ್ಸ್ ತಂಡವನ್ನು ಮಣಿಸಿದೆ.
ಒಟ್ಟು 3 ಗೋಲು ಬಾರಿಸಿದ ಸುನೀಲ್ ಚೆಟ್ರಿ ಪಂದ್ಯದ ಹೀರೋ ಆಗಿ ಮೆರೆದರು. ಪಂದ್ಯಪೂರ್ತಿ ಅದ್ಭುತ ನಿಯಂತ್ರಣ ಸಾಧಿಸಿದ ಬೆಂಗಳೂರು, ರೋಚಕ ಹಣಾಹಣಿಯೊಂದಕ್ಕೆ ಸಾಕ್ಷಿಯಾಯಿತು. ಪಂದ್ಯದ 8ನೇ ನಿಮಿಷದಲ್ಲಿ ದಂತಕಥೆ ಚೆಟ್ರಿ ಗೋಲು ಹೊಡೆದರು. 38ನೇ ನಿಮಿಷದಲ್ಲಿ ರ್ಯಾನ್ ವಿಲಿಯಮ್ಸ್ ಇನ್ನೊಂದು ಗೋಲು ಬಾರಿಸಿದರು.
ತಂಡ 2-0ಯಿಂದ ಮುನ್ನಡೆ ಸಾಧಿಸಿದ್ದಾಗ, ಕೇರಳ ಪರ ಜೀಸಸ್ ಜಿಮೆನೆಜ್ 56ನೇ ನಿಮಿಷದಲ್ಲಿ ಗೋಲು ಸಿಡಿಸಿದರು. 67ನೇ ನಿಮಿಷದಲ್ಲಿ ಫ್ರೆಡ್ಡಿ ಲಾಲಾವ್ಮ್ ಮಾವ್ಮಾ ಗೋಲು ಸಿಡಿಸಿ ಅಂಕವನ್ನು 2-2ರಿಂದ ಸಮಗೊಳಿಸಿದರು. ಈ ವೇಳೆ ಬೆಂಗಳೂರು ಪರ ಚೆಟ್ರಿ 73ನೇ ನಿಮಿಷದಲ್ಲಿ ಇನ್ನೊಂದು ಗೋಲು ಸಿಡಿಸಿದರು.
ಹೆಚ್ಚುವರಿ ಅವಧಿಯಲ್ಲಿ 98ನೇ ನಿಮಿಷದಲ್ಲಿ ಅಬ್ಬರಿಸಿದ ಚೆಟ್ರಿ ಇನ್ನೊಂದು ಗೋಲು ಬಾರಿಸುವುದರೊಂದಿಗೆ ಬೆಂಗಳೂರು 4-2ರಿಂದ ಜೈಸಿತು. ಇದರೊಂದಿಗೆ ಆಡಿದ 11 ಪಂದ್ಯಗಳಲ್ಲಿ 7 ಗೆಲುವು ಸಾಧಿಸಿರುವ ಬೆಂಗಳೂರು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.