Big Operation: ಮಿಜೋರಾಂನಲ್ಲಿ 775 ಕೆ.ಜಿ. ಸ್ಫೋಟಕ ಜಪ್ತಿ: ಇಬ್ಬರ ಸೆರೆ!
ಮಿಜೋ ಪೊಲೀಸ್, ಅಸ್ಸಾಂ ರೈಫಲ್ಸ್ ಕಾರ್ಯಾಚರಣೆ, 4700 ಡೆಟೋನೇಟರ್‌ಗಳು ಸಹ ಪೊಲೀಸರ ವಶಕ್ಕೆ
Team Udayavani, Dec 8, 2024, 3:09 AM IST
ಐಜ್ವಾಲ್: ಸ್ಫೋಟಕಗಳ ಸಾಗಣೆ ಮತ್ತು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿಯ ಮೇಲೆ ದಾಳಿ ನಡೆಸಿದ ಭದ್ರತಾ ಸಿಬಂದಿ ಮಿಜೋರಾಂನ ಹನಾತಿಯಾಲ್‌ನಲ್ಲಿ ಬರೋಬ್ಬರಿ 775 ಕೆ.ಜಿ. ಸ್ಫೋಟಕವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಮಿಜೋರಾಂ ಪೊಲೀಸರ ವಶಕ್ಕೆ ನೀಡಲಾಗಿದೆ.
ಮಿಜೋರಾಂ ಪೊಲೀಸರು ಹಾಗೂ ಅಸ್ಸಾಂ ರೈಫಲ್ಸ್ ಪಡೆ ಜಂಟಿಯಾಗಿ ಡಿ.5ರಂದು ಈ ಕಾರ್ಯಾಚರಣೆ ಕೈಗೊಂಡಿದ್ದು, ಈ ಬಗ್ಗೆ ಅಸ್ಸಾಂ ರೈಫಲ್ಸ್ ನ ವಕ್ತಾರ ಮಾಹಿತಿ ನೀಡಿದ್ದಾರೆ. “ಗುಪ್ತಚರ ಮಾಹಿತಿಯನ್ನು ಆಧರಿಸಿ, ಅಸ್ಸಾಂ ರೈಫಲ್ಸ್ ಮತ್ತು ಮಿಜೋರಾಂ ಪೊಲೀಸ್ ಪಡೆಗಳು ಈ ದಾಳಿಯನ್ನು ಕೈಗೊಂಡಿದ್ದು, 775 ಕೆ.ಜಿ. ಸ್ಫೋಟಕ, 4,700 ಡಿಟೊನೇಟರ್ ಮತ್ತು 2,250 ಮೀ. ಉದ್ದದ ಕಾರ್ಡ್ ಟೆಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಿಜೋರಾಂ ಪೊಲೀಸರು ಈ ಕೃತ್ಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಕಳೆದ ತಿಂಗಳಷ್ಟೇ ಈ 2 ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ 12 ಬೋರ್ ಸಿಂಗಲ್ ಬ್ಯಾರಲ್ ಬಂದೂಕುಗಳನ್ನು ವಶಪಡಿಸಿಕೊಂಡಿದ್ದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.