Daily Horoscope: ಹುರುಳಿಲ್ಲದ ವಿವಾದಗಳಿಂದ ದೂರವಿರಿ, ಮನೆಯಲ್ಲಿ ವಿವಾಹ ನಿಶ್ಚಯ
Team Udayavani, Dec 8, 2024, 7:24 AM IST
ಮೇಷ: ಇಂದು ಉದ್ಯೋಗದ ತಾಪತ್ರಯ ಗಳ ಚಿಂತೆ ಬೇಡ. ವ್ಯವಹಾರದಲ್ಲಿ ವಿಶೇಷ ಯಶಸ್ಸು. ಸರಕಾರಿ ಉದ್ಯೋಗಸ್ಥರಿಗೆ ವಿರಾಮದ ಹರ್ಷಾನುಭವ. ಮಹಿಳಾ ಉದ್ಯಮಿಗಳಿಗೆ ನೆಮ್ಮದಿ.ಆಸ್ಪತ್ರೆಗೆ ಭೇಟಿ, ರೋಗಿಗಳಿಗೆ ಸಾಂತ್ವನ.
ವೃಷಭ: ನಿಕಟ ಭವಿಷ್ಯದ ಕಾರ್ಯಗಳ ಕುರಿತು ಚಿಂತನೆ. ಖಾದಿಯ ಸಿದ್ಧ ಉಡುಪು ಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ. ಪ್ರಮುಖ ವ್ಯಕ್ತಿಯಿಂದ ಅಮೂಲ್ಯ ಸಲಹೆ. ಸಮಾಜದ ಹಿರಿಯ ಸಾಧಕರಿಗೆ ಸಮ್ಮಾನ. ಸಂಸಾರದಲ್ಲಿ ಸಾಮರಸ್ಯ ವೃದ್ಧಿ.
ಮಿಥುನ: ಅಪೇಕ್ಷೆಪಟ್ಟವರಿಗೆ ಮಾತ್ರ ಸಲಹೆ ನೀಡಿ. ಉದ್ಯೋಗಸ್ಥರ ಹಳೆಯ ಸಮಸ್ಯೆ ನಿವಾರಣೆ. ಹುರುಳಿಲ್ಲದ ವಿವಾದಗಳಿಂದ ದೂರವಿರಿ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ. ಉತ್ತರದ ಕಡೆಗೆ ಸಣ್ಣ ಪ್ರಯಾಣ ಸಂಭವ.
ಕರ್ಕಾಟಕ: ನಾಳೆಯ ಕೆಲಸಗಳ ಕುರಿತು ಹೆಚ್ಚು ಚಿಂತೆ ಬೇಡ. ಕಿರಿಯ ಉದ್ಯಮಿಗಳ ಸ್ನೇಹಕೂಟ ಆಯೋಜನೆ. ಮಹಿಳೆಯರ ಸೊÌàದ್ಯೋಗ ಯೋಜನೆ ಉತ್ಪನ್ನಗಳಿಗೆ ಕೀರ್ತಿ. ಗೆಳೆಯರ ನಡುವೆ ಸಾಹಿತ್ಯ, ಕಲೆಗಳ ಕುರಿತು ಚರ್ಚೆ.
ಸಿಂಹ: ಉದ್ಯಮಕ್ಕೆ ಹೊಸರೂಪ ನೀಡುವ ಕ್ರಮ ಮುಂದುವರಿಕೆ. ಪರಿಣತರ ಸಲಹೆಯಂತೆ ಹೊಸ ಕ್ರಮಗಳು. ಶಿಕ್ಷಿತ ಕುಶಲಕರ್ಮಿಗಳಿಗೆ ಉದ್ಯೋಗ ಪ್ರಾಪ್ತಿ. ಕುಟುಂಬದಲ್ಲಿ ಎಲ್ಲರಿಗೂ ನೆಮ್ಮದಿಯ ಅನುಭವ. ಬಂಧುಗಳ ಮನೆಯಲ್ಲಿ ವಿವಾಹ ನಿಶ್ಚಯ.
ಕನ್ಯಾ: ಸರಕಾರಿ ಉದ್ಯೋಗಸ್ಥರಿಗೆ ವಿರಾಮದ ಆನಂದ. ಸಹೋದ್ಯೋಗಿ ಮಿತ್ರರ ಸಂತೋಷ ಕೂಟ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.ಅಸಹಾಯಕರಿಗೆ ಸಹಾಯ ಮಾಡುವ ಅವಕಾಶ.
ತುಲಾ: ಕೆಲವು ಕ್ಷೇತ್ರಗಳವರಿಗೆ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಮಾಮೂಲು ಪೈಪೋಟಿಯ ಅನುಭವ. ಉದ್ಯೋಗ ಅರಸುವವರಿಗೆ ಆಶಾದಾಯಕ ವಾತಾವರಣ. ಲೇವಾದೇವಿ ವ್ಯವಹಾರ ದಲ್ಲಿ ನಷ್ಟ. ವಿದೇಶದಲ್ಲಿರುವ ಮಿತ್ರನ ಭೇಟಿ.
ವೃಶ್ಚಿಕ: ಸದ್ಯೋಭವಿಷ್ಯದಲ್ಲಿ ಯಾವುದೇ ತೊಂದರೆ ಆಗದು. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಸರಕಾರಿ ಅಧಿಕಾರಿಗಳಿಗೆ ನಿಶ್ಚಿಂತೆ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಸಾಂಸಾರಿಕ ನೆಮ್ಮದಿ ಕೆಡಿಸುವವರಿಗೆ ಸೋಲು.
ಧನು: ಉದ್ಯಮಕ್ಕೆ ಹೊಸರೂಪ ನೀಡುವ ಯತ್ನ ಆರಂಭ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ. ಮಕ್ಕಳ ಅಧ್ಯಯನಾಸಕ್ತಿ ಬೆಳವಣಿಗೆಗೆ ಪೋ›ತ್ಸಾಹ. ಅಶಕ್ತರ ನೆರವಿನ ಯೋಜನೆಗಳಲ್ಲಿ ಭಾಗಿ. ಪ್ರಾಕೃತಿಕ ವಿಕೋಪಗಳ ಸಂತ್ರಸ್ತರಿಗೆ ನೆರವು.
ಮಕರ: ಬಂಧು, ಮಿತ್ರರ ಜತೆಯಲ್ಲಿ ವಿರಾಮದ ಆನಂದಾನುಭವ. ಉದ್ಯಮಿ ಗಳಿಗೆ ಹಠಾತ್ ನಷ್ಟವಾಗುವ ಭೀತಿ.ಯಂತ್ರೋಪಕರಣ ಉದ್ಯಮಿಗಳಿಗೆ ದೊಡ್ಡ ಮೊತ್ತದ ಲಾಭ. ಪ್ರಾಚೀನ ವಿದ್ಯೆಯಲ್ಲಿ ಸಾಧಕರ ಭೇಟಿ.
ಕುಂಭ: ವಿರಾಮದಂದು ಮಂದಗತಿಯಲ್ಲಿ ಸಾಗುವ ಕೆಲಸ, ಕಾರ್ಯಗಳು. ಉದ್ಯೋಗಸ್ಥ ರಿಗೆ ಹಿತಕರವಾದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆ. ಲಲಿತ ಕಲೆಗಳಲ್ಲಿ ಆಸಕ್ತರಿಗೆ ಹರ್ಷ.ಟೈಲರಿಂಗ್, ವೈಂಡಿಂಗ್ ಬಲ್ಲವರಿಗೆ ಅಧಿಕ ಆದಾಯ.ಕೃಷಿಕರಿಗೆ ಹವಾಮಾನ ವೈಪರೀತ್ಯದ ತೊಂದರೆ.
ಮೀನ: ಹಿರಿಯರ ಮನೆಯಲ್ಲಿ ಗುರುಹಿರಿಯರ ಭೇಟಿ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಭೇಟಿ, ನೊಂದವರಿಗೆ ಸಾಂತ್ವನ. ತಂದೆ-ತಾಯಿ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಹರಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.