BBK11: ಮೋಕ್ಷಿತಾ To ಚೈತ್ರಾ.. ಬಿಗ್ ಬಾಸ್ ಮನೆಯಿಂದ ಈ ವಾರ ಆಚೆ ಬರುವುದು ಯಾರು?

Team Udayavani, Dec 8, 2024, 7:40 AM IST

2-bbk-11

ಬೆಂಗಳೂರು: ಬಿಗ್ ಬಾಸ್ ಕಿಚ್ಚನ (Kiccha Sudeep) ಪಂಚಾಯ್ತಿನಲ್ಲಿ ಸ್ಪರ್ಧಿಗಳಿಗೆ ವಾರದಲ್ಲಿ ನಡೆದ ಸರಿ – ತಪ್ಪುಗಳ ಬಗ್ಗೆ ಸುದೀಪ್ ಪಾಠ ಮಾಡಿದ್ದಾರೆ.

ತ್ರಿವಿಕ್ರಮ್, ಗೌತಮಿ ಹಾಗೂ ಮೋಕ್ಷಿತಾ ಅವರು ಆಟದಲ್ಲಿ ಎಲ್ಲಿ ಎಡವಿದ್ದಾರೆ. ಏನಾಯಿತು, ಯಾಕಾಯಿತು ಎಲ್ಲದರ ‌ಬಗ್ಗೆಯೂ ಖಡಕ್ ಆಗಿ ವಾರ್ನ್ ಮಾಡುತ್ತಲೇ ಕಿಚ್ಚ ಸುದೀಪ್ ಪ್ರಶ್ನಿಸಿದ್ದಾರೆ.

ಸ್ಪರ್ಧಿಗಳು ಗುಟ್ಟಾಗಿ ಮಾತನಾಡಿದ ಸಂಗತಿಗಳನ್ನು ವಿಡಿಯೋ‌‌ ಮೂಲಕ ಪ್ಲೇ ಮಾಡಿ ಬಹಿರಂಗವಾಗಿ ಯಾವುದು ಇಷ್ಟವಾಗಿಲ್ಲ,‌ ಯಾಕೆ ಇಷ್ಟ ಆಗಿಲ್ಲ ಎನ್ನುವುದರ ಬಗ್ಗೆ ಪ್ರಶ್ನೆ ಮಾಡಿ ಸ್ಪರ್ಧಿಗಳಿಂದಲೇ ಉತ್ತರವನ್ನು ಕೇಳಿದ್ದಾರೆ.

ಸ್ಪರ್ಧಿಗಳಿಗೆ ಎಲಿಮಿನೇಷನ್ ಢವ ಢವ:

ಇನ್ನೊಂದು ಕಡೆ ಮನೆಮಂದಿಗೆ ಈ ವಾರ ಯಾರು ಮನೆಯಿಂದ ಆಚೆ ಹೋಗುತ್ತಾರೆ ಎನ್ನುವುದರ ಬಗ್ಗೆ ಚಿಂತೆ ಶುರುವಾಗಿದೆ. ಸೇಫ್ ಆದವರು ಅಬ್ಬಾ ಎಂದು ನಿಟ್ಟುಸಿರು ಬಿಟ್ಟರೆ ಉಳಿದವರು ಕೈಕಟ್ಟಿಕೊಂಡು ತಾನು ಉಳಿಯಬೇಕೆಂದು ಮನಸ್ಸಲ್ಲೇ ಪ್ರಾರ್ಥಿಸುತ್ತಿದ್ದಾರೆ.

ಈ ವಾರ ಬೆನ್ನಿಗೆ ಚೂರಿ ಹಾಕಿ ಎಲಿಮಿನೇಷನ್ ಮಾಡುವ ಪ್ರಕ್ರಿಯೆ ಇತ್ತು.‌ ಸ್ಪರ್ಧಿಗಳು ನಾಮಿನೇಷನ್ ವಿಚಾರವಾಗಿ ವಾಗ್ವಾದ ನಡೆಸಿದ್ದಾರೆ.

ಈ ವಾರ ಉಗ್ರಂ ಮಂಜು (Ugram Manju), ಗೌತಮಿ ಜಾಧವ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ (Chaithra Kundapura), ಭವ್ಯ ಗೌಡ, ಗೋಲ್ಡ್ ಸುರೇಶ್, ಐಶ್ವರ್ಯಾ ಶಿಂಧೋಗಿ, ರಜತ್ ಕಿಶನ್‌ ನಾಮಿನೇಟ್ ಆಗಿದ್ದಾರೆ.

ಈ‌‌ ಪೈಕಿ‌ ಶನಿವಾರದ ಸಂಚಿಕೆಯಲ್ಲಿ ರಜತ್, ಗೌತಮಿ ಅವರು ಎಲಿಮಿನೇಷನ್ ತೂಗುಗತ್ತಿಯಿಂದ ಪಾರಾಗಿದ್ದಾರೆ.

ಈ ವಾರ ಎಲಿಮಿನೇಷನ್ ಇಲ್ಲ; ಆದರೆ..

ನಾಮಿನೇಷನ್ ಪ್ರಕ್ರಿಯೆ ‌ನಡೆದರೂ ಈ‌ ವಾರ ವೋಟಿಂಗ್ ಓಪನ್ ಆಗಿಲ್ಲ. ಮೂಲಗಳ ಪ್ರಕಾರ ಈ ವೀಕ್ ಯಾವುದೇ ಎಲಿಮಿನೇಷನ್ ಇರಲ್ಲವೆನ್ನಲಾಗುತ್ತಿದೆ.

ಎಲಿಮಿನೇಷನ್ ಇಲ್ಲದೆ ಇರುವುದು ಈ ಸೀಸನ್ ನಲ್ಲಿ ‌ಮೊದಲಲ್ಲ. ಈ ಹಿಂದೆ ಭವ್ಯ, ತ್ರಿವಿಕ್ರಮ್- ರಂಜಿತ್ ಅವರಿಗೂ ಎಲಿಮಿನೇಷನ್ ಚಮಕ್ ಕೊಟ್ಟು ಆ ಬಳಿಕ ಎಲಿಮಿನೇಷನ್ ಮಾಡಿರಲಿಲ್ಲ. ಬಹುಶಃ ಈ ವಾರವೂ ಅದೇ ರೀತಿಯ ಚಮಕ್ ಕೊಟ್ಟು ಸ್ಪರ್ಧಿಗಳ ಎದೆ ಬಡಿತವನ್ನು ಬಿಗ್ ಬಾಸ್ ಹೆಚ್ಚಿಸಲಿದ್ದಾರೆ ಎನ್ನಲಾಗುತ್ತಿದೆ.

ಸೀಕ್ರೆಟ್ ರೂಮ್‌ನಲ್ಲಿ ಒಬ್ಬರನ್ನು ಹಾಕಿ ಎಲಿಮಿನೇಷನ್ ಆಟಕ್ಕೆ ಟ್ವಿಸ್ಟ್ ತರಲಿದ್ದಾರೆ ಎನ್ನುವ ಮಾತು ಕೂಡ ವೀಕ್ಷಕರ‌ ವಲಯದಲ್ಲಿ ಹರಿದಾಡುತ್ತಿದೆ.

ಇದುವರೆಗೆ ಎಲಿಮಿನೇಟ್ ಆದವರು:

ಯಮುನಾ ಶ್ರೀನಿಧಿ, ಹಂಸ, ಮಾನಸಾ, ಅನುಷಾ ರೈ, ಧರ್ಮ ಕೀರ್ತಿರಾಜ್‌ ಔಟ್ ಆಗಿದ್ದು, ಜಗದೀಶ್, ರಂಜಿತ್ ಅವರು ಮೊದಲೇ ಆಚೆ ಹೋಗಿದ್ದರು.‌ ಇನ್ನು ಶೋಭಾ ಶೆಟ್ಟಿ ಅನಾರೋಗ್ಯದ ಕಾರಣದಿಂದ ಆಚೆ ಬಂದಿದ್ದಾರೆ.

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ

BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ

Writer’s audition: ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.