Bailhongal ಪೊಲೀಸರ ಭರ್ಜರಿ ಬೇಟೆ; ನಾಲ್ವರು ಆರೋಪಿಗಳ ಬಂಧನ
10 ಲಕ್ಷ ರೂ.ಮೌಲ್ಯದ 14 ಬೈಕ್‍ಗಳು ವಶಕ್ಕೆ
Team Udayavani, Dec 8, 2024, 8:48 PM IST
ಬೈಲಹೊಂಗಲ: ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ವರ ಆರೋಪಿಗಳನ್ನು ಪೊಲೀಸರು ಬಂಧಿಸಿ, 10 ಲಕ್ಷ ರೂ.ಮೌಲ್ಯದ 14 ಬೈಕ್‍ಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ಘಟನೆ ರವಿವಾರ ನಡೆದಿದೆ.
ಆರೋಪಿಗಳನ್ನು ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಅಭಿಷೇಕ ಬಾಬು ಹೊಸಟ್ಟಿ, ಸಚಿನ ಈರಪ್ಪ ಬಡಿಗೇರ, ಅಭಿಷೇಕ ಸುರೇಶ ಪಾರಿಶ್ವಾಡ, ಸಂದೀಪ ಈರಪ್ಪ ಬಡಿಗೇರ ಎಂದು ಗುರುತಿಸಲಾಗಿದೆ.
ಡಿ.6 ರಂದು ಪಿ.ಎಸ್.ಮುರನಾಳ ಹಾಗೂ ಸಿಬ್ಬಂದಿಗಳು ಪಟ್ಟಣದ ಬೆಳಗಾವಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ದಾಖಲಾತಿಗಳನ್ನು ಪರಿಶೀಲಿಸುತ್ತಿರುವಾಗ ನಾಲ್ಕು ಜನ ಯುವಕರು ಎರಡು ಬೈಕ್‍ಗಳ ಮೇಲೆ ಬಂದಾಗ ಸದರಿಯವರನ್ನು ತಡೆದು ವಿಚಾರಿಸಿದಾಗ, ಆರೋಪಿಗಳು ಬೈಕ್ ದಾಖಲಾತಿಗಳನ್ನು ಹಾಜರುಪಡಿಸದಿದ್ದಾಗ ಅವರನ್ನು
ಕೂಲಂಕಷವಾಗಿ ವಿಚಾರ ಪಡಿಸಿದಾಗ ಈ ಕಳ್ಳತನ ಮಾಡಿದ ಪ್ರಕರಣ ಬೆಳೆಕಿಗೆ ಬಂದಿದೆ.
ಬೆಳಗಾವಿಯ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶೃತಿ ಎಸ್.ಎ., ರಾಮಗೊಂಡ ಬಸರಗಿ, ಡಿವಾಯ್‍ಎಸ್ಪಿ ರವಿ ನಾಯಕ, ಪಿಐ ಪಂಚಾಕ್ಷರಿ ಸಾಲಿಮಠ ಇವರ ಮಾರ್ಗದರ್ಶದಲ್ಲಿ ಪಿಎಸ್‍ಐ ಪಿ.ಎಸ್.ಮುರನಾಳ, ಸಿಬ್ಬಂದಿಗಳಾದ ಎಸ್.ಯು.ಮೆನಸಿನಕಾಯಿ, ವಿ.ಎಮ್.ದೊಡ್ಡಹೊನ್ನಪ್ಪವರ, ಎಮ್.ಬಿ.ಕಂಬಾರ, ಸಿ.ಎಸ್.ಬುದ್ನಿ, ಎಮ್.ಎಸ್.ದೇಶನೂರ, ಕೆ.ಎಫ್.ವಕ್ಕುಂದ, ಜೆ.ಆರ್.ಮಳಗಲಿ ಇವರನ್ನು ಒಳಗೊಂಡ ತನಿಖಾ ತಂಡವು ಪ್ರಕಣವನ್ನು ಭೇದಿಸಿ ನಾಲ್ಕು ಆರೋಪಿತರನ್ನು ಬಂಧಿಸಿ, ವಿವಿಧ ಕಡೆಗಳಲ್ಲಿ ಕಳವು ಮಾಡಿದ 14 ಬೈಕ್‍ಗಳನ್ನು ಪತ್ತೆ ಮಾಡಿರುವ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.