ಶಾಲ್ಮಲಾ ನಮ್ಮ ಶಾಲ್ಮಲಾ!

Team Udayavani, Dec 8, 2024, 7:40 PM IST

256

“ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೆ ಹರಿಯುವಳು… ಸದಾ ಗುಪ್ತಗಾಮಿನಿ ನನ್ನ ಶಾಲ್ಮಲಾ’ ಎಂದು ಸಾಹಿತಿ ಚಂದ್ರಶೇಖರ ಪಾಟೀಲರ ಕಾವ್ಯದಲ್ಲಿ ಶಾಲ್ಮಲಾ ನದಿ ವರ್ಣಿತಳಾಗಿದ್ದಾಳೆ. ಧಾರವಾಡ ಜಿಲ್ಲೆಯಲ್ಲಿ ಉಗಮವಾಗುವ ಏಕೈಕ ನದಿ ಶಾಲ್ಮಲಾ. ಇದು ಗುಪ್ತವಾಗಿ ಹರಿಯುತ್ತದೆ. ಉಗಮ ಸ್ಥಾನದಲ್ಲಿ ಬಿಟ್ಟರೆ, ಈ ನದಿ ಮತ್ತೆ ಕಾಣಸಿಗುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಒಂದು ಕಾಲದಲ್ಲಿ ಧಾರವಾಡದಲ್ಲಿ ಇಂಥದೊಂದು ನದಿಯಿದೆ, ಅದರ ಉಗಮ ಸ್ಥಾನ ಇಲ್ಲಿಯೇ ಎಂಬ ವಿಷಯವೇ ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹಲವು ಸಂಘಟನೆಗಳು ಶಾಲ್ಮಲೆಯ ಪುನರುಜ್ಜೀವನಕ್ಕೆ ಮುಂದಾಗಿವೆ. ಜೊತೆಗೆ ಪ್ರತಿ ವರ್ಷ ಸಂಸ್ಕೃತಿ ಟ್ರಸ್ಟ್‌ ಆಯೋಜಿಸುವ “ಶಾಲ್ಮಲೋತ್ಸವ’ ಕಾರ್ಯಕ್ರಮದಿಂದ ಈ ನದಿಯ ಬಗೆಗಿನ ಖ್ಯಾತಿ, ಜಾಗೃತಿ ವಿಸ್ತಾರವಾಗುತ್ತಿದೆ.

ಏನಿದು ಶಾಲ್ಮಲೋತ್ಸವ?

ಕಾಶಿ, ಹರಿದ್ವಾರಗಳಲ್ಲಿ ಸಂಜೆಯ ವೇಳೆ ಪ್ರತಿದಿನ ಗಂಗಾರತಿ ನಡೆಯುತ್ತದೆ. ಅದೇ ರೀತಿ ಶಾಲ್ಮಲಾ ನದಿಗೂ ಧಾರವಾಡದಲ್ಲಿ ಆರತಿ ಬೆಳಗಲಾಗುತ್ತದೆ. ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂತರ ಮಾರ್ಗದರ್ಶನ, ಉಪನ್ಯಾಸ ನಡೆಯುತ್ತವೆ. ಸೂರ್ಯಾಸ್ತದ ಹೊತ್ತಿಗೆ ಆರಂಭವಾಗು ವುದೇ ಶಾಲ್ಮಲಾ ಆರತಿ. ಈ ಎಲ್ಲ ಕಾರ್ಯ ಕ್ರಮಗಳ ಸಂಕಲಿತವೇ ಶಾಲ್ಮಲೋತ್ಸವ. ಧಾರವಾಡದ ಸಂಸ್ಕೃತಿ ಟ್ರಸ್ಟ್‌ 2022ರಲ್ಲಿ ಮೊದಲ ಬಾರಿಗೆ ಶಾಲ್ಮಲೋತ್ಸವವನ್ನು ಹಮ್ಮಿಕೊಂಡಿತ್ತು.

ಪರಿಕಲ್ಪನೆಯ ಹುಟ್ಟು

2012ರಲ್ಲಿ ಧಾರವಾಡದಲ್ಲಿ ಆರಂಭವಾದ ಸಂಸ್ಕೃತಿ ಟ್ರಸ್ಟ್‌, ಮಹಿಳೆಯರ ಸಬಲೀಕರಣ, ಸಾಮಾಜಿಕ ಕ್ಷೇತ್ರದಲ್ಲಿ ಶ್ರಮಿಸುತ್ತಿದೆ. ಮೂರು ವರ್ಷಗಳ ಹಿಂದೆ ಟ್ರಸ್ಟ್‌ನ ಸದಸ್ಯರೆಲ್ಲ ಶಾಲ್ಮಲಾ ನದಿಯ ಬಳಿ ಸ್ನೇಹ ಸಮ್ಮಿಲನವೆಂದು ಸೇರಿದ್ದೆವು. ಶಾಲ್ಮಲೆಯ ಉಗಮ ಸ್ಥಾನದ ಸ್ಥಿತಿ ಕಂಡು ಬಹು ಬೇಸರಗೊಂಡೆವು. ಕಾರಣ, ನದಿ ಕಲುಷಿತವಾಗಿತ್ತು. ಎಲ್ಲೆಂದರಲ್ಲಿ ಕಸ, ಗಿಡಕಂಟೆಗಳು ಬೆಳೆದಿದ್ದವು. ಇದನ್ನು ನೋಡಲಾಗದೆ, ಸ್ವತ್ಛತಾ ಕಾರ್ಯಕ್ಕೆ ಸಂಕಲ್ಪಿ ಸಿದೆವು. 60 ಜನರ ಪರಿಶ್ರಮ ದಿಂದ ಶಾಲ್ಮಲಾ ನದಿ ಉಗಮ ಸ್ಥಾನ ಹಸನಾಗಿ, ಕಂಗೊಳಿಸ ತೊಡಗಿತು. ಗಂಗಾರತಿ ಮಾದರಿಯಲ್ಲಿ ಶಾಲ್ಮಲೆಗೆ ಆರತಿ ಬೆಳಗ ಬೇಕೆಂದು ಟ್ರಸ್ಟ್‌ ನಿಶ್ಚಯಿ ಸಿತು. ಅಂದಿನಿಂದ ಶಾಲ್ಮಲೋತ್ಸವ ಪ್ರತಿ ವರ್ಷ ನಡೆಯುತ್ತಿದೆ ಎಂಬುದು ಟ್ರಸ್ಟ್‌ನ ಸದಸ್ಯರೊಬ್ಬರ ಮಾತು.

ಹೀಗೆ ನಡೆಯುತ್ತದೆ ಶಾಲ್ಮಲೋತ್ಸವ

ಶಾಲ್ಮಲೋತ್ಸವ ದಿನದಂದು ಮಹಿಳಾ ಮಂಡಳಿ, ಭಜನಾ ಮಂಡಳಿಗಳಿಂದ ಭಜನೆ, ಹಾಡು, ನೃತ್ಯ ರೂಪಕ, ಗಂಗಾವತರಣ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತವೆ. ಪ್ರತಿ ವರ್ಷ ಒಬ್ಬ ಸಂತರನ್ನು ಆಹ್ವಾನಿಸಿ, ಅವರಿಂದ ಆಶೀರ್ವಚನ ಪಡೆಯಲಾಗುತ್ತದೆ. ಜೊತೆಗೆ ಭಾರತೀಯ ಪರಂಪರೆ, ಸಂಸ್ಕೃತಿ, ಸಂಸ್ಕಾರ, ಮುಂತಾದ ವಿಷಯಗಳ ಕುರಿತು ಉಪನ್ಯಾಸ ನಡೆಯುತ್ತದೆ.

ಇದರ ನಂತರ ನಡೆಯುವುದೇ ಶಾಲ್ಮಲೆಗೆ ಆರತಿ. ನಾರಿಯರು ಗಂಗಾದೇವಿಯ ಮೂರ್ತಿಯನ್ನು ನದಿಯ ಉಗಮ ಸ್ಥಾನಕ್ಕೆ ತರುತ್ತಾರೆ. ಅಲ್ಲೇ ಪಕ್ಕದಲ್ಲಿ ಶಿವನ ದೇವಸ್ಥಾನವಿದೆ. ದೇವರಿಗೆ ಪೂಜೆ ಮಾಡಿ, ನದಿಗೆ ಬಾಗಿನ ಅರ್ಪಿಸಲಾಗುತ್ತದೆ. ನಾಲ್ಕು ನಾರಿಯರು, ಮಧ್ಯದಲ್ಲಿ ಗಂಗಾದೇವಿ ವೇಷಧಾರಿಯೊಬ್ಬರು ನಿಂತಿರುತ್ತಾರೆ. ಶಂಖನಾದದೊಂದಿಗೆ ಶಾಲ್ಮಲೆಗೆ ಆರತಿ ಆರಂಭ. ಧೂಪಾರತಿಯಿಂದ ಆರಂಭವಾಗಿ ಒಂದಾದ ನಂತರ ಒಂದು ಐದು ಬಗೆಯ ಆರತಿಗಳನ್ನು ಬೆಳಗಲಾಗುತ್ತದೆ. ಏಕಕಾಲಕ್ಕೆ ಒಂದೇ ರೀತಿಯಲ್ಲಿ ನಾಲ್ಕೂ ಜನ ಆರತಿ ಬೆಳಗುತ್ತಾರೆ. ಗಂಟೆ, ಜಾಗಟೆಯ ಪ್ರತಿಧ್ವನಿಗಳು, ಭಕ್ತಿ ಸಂಗೀತದಿಂದ ಶಾಲ್ಮಲೆಯ ಆರತಿ ಕಂಗೊಳಿಸಿದರೆ, ಅದನ್ನು ಕಣ್ತುಂಬಿಕೊಳ್ಳಲು ಸೇರುವ ಸಾವಿರಾರು ಜನರು “ಗಂಗಾ ಮಾತಾ ಕೀ ಜೈ’, “ಜೈ ಶ್ರೀರಾಮ್‌’, “ಹರ್‌ ಹರ್‌ ಮಹಾದೇವ್‌’  ಎಂದು ಉದ್ಘೋಷ ಕೂಗುತ್ತಾರೆ. ಈ ಸಂಪೂರ್ಣ ನೋಟ ಕಣ್ಮನಕ್ಕೆ ಎಷ್ಟೊಂದು ಮುದ… ಭಕ್ತಿಭಾವ ಮೇಳೈಸಿದ ಆನಂದ!

ಸುಮಾರು ಮೂವತ್ತು ನಿಮಿಷಗಳ ಕಾಲ ನಡೆಯುವ ಆರತಿ, ನೋಡಿದ ಎಂಥವರನ್ನಾದರೂ ಮಂತ್ರಮುಗ್ಧ ಗೊಳಿಸುತ್ತದೆ. ಕಳೆದೆರಡು ವರ್ಷಗಳಿಂದ ಸಹಸ್ರ ಸಂಖ್ಯೆಯಲ್ಲಿ ಹುಬ್ಬಳ್ಳಿ-ಧಾರವಾಡ ಜನತೆ ಆಗಮಿಸಿ, ಶಾಲ್ಮಲೋತ್ಸವಕ್ಕೆ ಹೆಚ್ಚಿನ ಮೆರಗು ನೀಡುತ್ತಿದ್ದಾರೆ.

ಶಾಲ್ಮಲೆಯ ಸೊಬಗು! :

ಶಾಲ್ಮಲಾ ಅತ್ಯಂತ ಪ್ರಾಚೀನ ನದಿ . ಅಗಸ್ತ್ಯ ಋಷಿ, ತನ್ನ ಪತ್ನಿ ಲೋಪಾಮುದ್ರೆಯೊಂದಿಗೆ ಇಲ್ಲಿ ಧ್ಯಾನ ಮಾಡಿ, ಶಿವಲಿಂಗ ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಕಲಘಟಗಿ ರಸ್ತೆಯಲ್ಲಿರುವ ಸೋಮೇಶ್ವರ ಬಳಿ ಶಾಲ್ಮಲಾ ನದಿ ಉಗಮವಾಗುತ್ತದೆ. ಇದರ ವಿಹಂಗಮ ನೋಟ ಕಾಣುವುದೆಲ್ಲ ಉತ್ತರ ಕನ್ನಡದ ಶಿರಸಿಯಲ್ಲಿ. ಶಾಲ್ಮಲಾ ಧಾರವಾಡದಲ್ಲಿ ಉಗಮವಾಗಿ ಮುಂದೆ ಬೇಡ್ತಿ ಉಪನದಿಯೊಂದಿಗೆ ಸಂಗಮವಾಗುತ್ತದೆ. ಕಲಘಟಗಿ ಮಾರ್ಗವಾಗಿ ಉತ್ತರ ಕನ್ನಡದಲ್ಲಿ ಒಟ್ಟು 161 ಕಿ.ಮೀ. ಹರಿದು, ಅರಬ್ಬೀ ಸಮುದ್ರ ಸೇರಿಕೊಳ್ಳು ತ್ತದೆ. ಶಾಲ್ಮಲಾ ನದಿ ಹರಿವಿನಲ್ಲಿ ಸೋಂದಾ, ಸಹಸ್ರಲಿಂಗ, ಮಾಗೋಡು ಜಲಪಾತ, ಶಿವಗಂಗಾ ಜಲಪಾತ, ಜೇನುಕಲ್ಲು ಗುಡ್ಡ ಮುಂತಾದ ಪ್ರವಾಸಿ ತಾಣಗಳನ್ನು ಕಾಣಬಹುದು. ನದಿಯ ಸ್ಮರಣೆಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ತನ್ನದೊಂದು ವಿದ್ಯಾರ್ಥಿ ನಿಲಯಕ್ಕೆ “ಶಾಲ್ಮಲಾ’ ಎಂದು ಹೆಸರಿಟ್ಟಿದೆ.

-ರಜನಿ ಕುಲಕರ್ಣಿ, ಧಾರವಾಡ

ಟಾಪ್ ನ್ಯೂಸ್

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

2-ramanagara

Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Teertharoopa Tandeyavarige: ತೀರ್ಥರೂಪರ ಜೊತೆ ರಚನಾ

Teertharoopa Tandeyavarige: ತೀರ್ಥರೂಪರ ಜೊತೆ ರಚನಾ

2-ramanagara

Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.