‘ಕಡ್ಡಾಯ ಹಾಜರಾತಿ ಮರೆಯಬೇಡಿ; ವೇತನ ಕೇಳಬೇಡಿ’
ಇದು ರಾಜ್ಯದ 11ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳ ಅತಿಥಿ ಉಪನ್ಯಾಸಕರ ದುಃಸ್ಥಿತಿ
Team Udayavani, Dec 9, 2024, 6:40 AM IST
ಹುಬ್ಬಳ್ಳಿ: ತರಗತಿ ಇರಲಿ, ಬಿಡಲಿ ನಿತ್ಯವೂ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಕಡ್ಡಾಯ ಹಾಜರಾತಿ ಮರೆಯಬೇಡಿ, ಸೇವಾ ಭದ್ರತೆ ಇಲ್ಲದೆಯೇ ಕಡಿಮೆ ವೇತನಕ್ಕೆ ದುಡಿದರೂ, ವೇತನ ಮಾತ್ರ ಕೇಳಬೇಡಿ’-ಇದು ರಾಜ್ಯದ 11 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳ ಅತಿಥಿ ಉಪನ್ಯಾಸಕರ ದುಃಸ್ಥಿತಿ. ಫೆಬ್ರವರಿ-ಎಪ್ರಿಲ್‌ನಿಂದಲೇ ವೇತನ ಇಲ್ಲದೆ ಉಪನ್ಯಾಸಕರು ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ.
ರಾಜ್ಯದ ಸರಕಾರಿ ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಹತ್ತಾರು ವರ್ಷಗಳಿಂದ ಸೇವಾ ಭದ್ರತೆ ಇಲ್ಲದೆ, ಮುಂದಿನ ಭವಿಷ್ಯ ಏನೆಂದು ತಿಳಿಯದೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸರಕಾರಿ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ 15-20 ಸಾವಿರ ರೂ. ಮಾಸಿಕ ಗೌರವಧನ ನೀಡಲಾಗುತ್ತಿತ್ತು. ಉಪನ್ಯಾಸಕರ ಹೋರಾಟದ ಫಲವಾಗಿ ಸರಕಾರ ಗೌರವಧನ ಹೆಚ್ಚಳ ಮಾಡಿದೆ.
ಆದರೆ, ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಕಳೆದ 10 ತಿಂಗಳಿಂದ ಗೌರವಧನವೇ ಬಿಡುಗಡೆಯಾಗಿಲ್ಲ. ಹಲವರು ಕಳೆದ 8-10 ವರ್ಷಗಳಿಂದ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಕೆಲವರು ನಿವೃತ್ತಿ ವಯಸ್ಸಿಗೂ ಬಂದಿದ್ದಾರೆ. ಇಂತಹವರು ಬೇರೆ ಕಡೆ ಹೋಗುವಂತಿಲ್ಲ, ಇಲ್ಲಿಯೇ ಇದ್ದು ವೇತನ ಬಾರದಿರುವುದನ್ನು ಅನುಭವಿಸುವಂತಿಲ್ಲ ಎನ್ನುವಂತಾಗಿದೆ.
ಹಾಜರಾತಿ ಕಡ್ಡಾಯ
ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ತರಗತಿ ಇರಲಿ ಇಲ್ಲದಿರಲಿ ಬಯೋಮೆಟ್ರಿಕ್ ಹಾಜರಾತಿ ಹಾಗೂ ಬೆಳಗ್ಗೆ 9ರಿಂದ ಸಾಯಂಕಾಲ 5 ಗಂಟೆವರೆಗೆ ಕಾಲೇಜಿನಲ್ಲಿ ಇರುವುದನ್ನು ಕಡ್ಡಾಯ ಮಾಡಲಾಗಿದೆ. ಸರಕಾರಿ ಎಂಜಿನಿಯರಿಂಗ್ ಕಾಲೇಜು ಅತಿಥಿ ಉಪನ್ಯಾಸಕರಿಗೆ ವಾರಕ್ಕೆ 15 ತಾಸು, ಡಿಪ್ಲೊಮಾ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ 17 ತಾಸು ಬೋಧನೆ ನಿಗದಿಪಡಿಸಲಾಗಿದೆ. ಆದರೆ ನಿತ್ಯ 7 ತಾಸು ಕಾಲೇಜಿನಲ್ಲಿ ಇರಲೇಬೇಕಾಗಿದೆ.
ಸೇವಾ ಭದ್ರತೆ ಇಲ್ಲ, ವರ್ಷಕ್ಕೆ ಇಂತಿಷ್ಟು ಕೃಪಾಂಕ ನೀಡಬೇಕೆಂದರೂ ಸ್ಪಂದನೆ ದೊರೆತಿಲ್ಲ. ವೇತನ ನೀಡದಿದ್ದರೆ ನಮ್ಮ ಕುಟುಂಬ ನಿರ್ವಹಣೆ ಹೇಗೆ?
– ಜಿ.ವಿ. ಮನುಕುಮಾರ್, ಅಧ್ಯಕ್ಷ, ಕರ್ನಾಟಕ ಎಂಜಿನಿಯರಿಂಗ್ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.: ಅನರ್ಹ “ಬಿಪಿಎಲ್’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ
“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’
BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್.ಟಿ. ಸೋಮಶೇಖರ್
Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್. ಸಂತೋಷ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.