Belagavi session ಡಿ.19ಕ್ಕೆ ಅಧಿವೇಶನ ಮೊಟಕು: ಇಂದು ನಿರ್ಧಾರ
Team Udayavani, Dec 9, 2024, 6:45 AM IST
ಬೆಳಗಾವಿ: ಇಲ್ಲಿ ಡಿ. 9ರಿಂದ ಡಿ.20ರ ವರೆಗೆ ನಿಗದಿಯಾಗಿರುವ ವಿಧಾನಮಂಡಲ ಅ ಧಿವೇಶನವು ಈ ಬಾರಿಯೂ ಸಹ ಮಾದರಿಯಾಗುವ ರೀತಿಯಲ್ಲಿ ನಡೆಯಲು ಎಲ್ಲರ ಸಹಕಾರ ಕೋರುತ್ತೇನೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ರವಿವಾರ ಮಧ್ಯಾಹ್ನ ಅ ಧಿವೇಶನಕ್ಕೆ ನಡೆಯುತ್ತಿರುವ ಅಂತಿಮ ಹಂತದ ತಯಾರಿಯನ್ನು ಪರಿಶೀಲಿಸಿ ಅವರು ಮಾತನಾಡಿದರು. ಸೋಮವಾರ ಬೆಳಗ್ಗೆ 11ರಿಂದ ಅ ಧಿವೇಶನ ಆರಂಭವಾಗಲಿದೆ. ಇದಕ್ಕೂ ಮೊದಲು ಐತಿಹಾಸಿಕ ಅನುಭವ ಮಂಟಪ ಸ್ಮರಣೆಯ ಬೃಹತ್ ತೈಲ ವರ್ಣದ ಚಿತ್ರದ ಅನಾವರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಲಾಪ ಮೊಟಕಿಲ್ಲ
ನಿಗದಿಯಂತೆ ಡಿ. 9ರಿಂದ 20 ರ ವರೆಗೆ ಕಲಾಪಗಳು ನಡೆಯಲಿವೆ. ಡಿ.19ಕ್ಕೆ ಅ ಧಿವೇಶನ ಮೊಟಕುಗೊಳ್ಳುವುದಿಲ್ಲ. ಮಂಡ್ಯದಲ್ಲಿ ಅಖೀಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನ ಇರುವ ಹಿನ್ನೆಲೆಯಲ್ಲಿ ಡಿ.19ಕ್ಕೆ ಕಲಾಪ ಸಂಪನ್ನಗೊಳಿಸುವ ಚರ್ಚೆ ಸರಕಾರದ ಮಟ್ಟದಲ್ಲಿ ನಡೆದಿರಬಹುದು. ಆದರೆ, ಅದಕ್ಕೂ ಇದಕ್ಕೂ ಯಾವುದೇ ಸಮಸ್ಯೆ ಆಗುವುದಿಲ್ಲ. ಕನಿಷ್ಠ 10 ದಿನವಾದರೂ ಕಲಾಪ ನಡೆಸಬೇಕಿದೆ ಎಂದು ಸ್ಪಷ್ಟಪಡಿಸಿದರು.
ಡಿ. 9ರಿಂದ ಡಿ. 20ರ ವರೆಗೆ ಕಲಾಪ ನಡೆಸಲು ಈಗಾಗಲೇ ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದರಿಂದ ಕಲಾಪ ವಿಸ್ತರಣೆ ಅಥವಾ ಮೊಟಕು ಇತ್ಯಾದಿ ತೀರ್ಮಾನಗಳು ಸಲಹಾ ಸಮಿತಿ ಸಭೆಯಲ್ಲೇ ನಿರ್ಣಯ ಆಗಬೇಕಿದೆ. ಹೀಗಾಗಿ ಸೋಮವಾರ ದಿನ ಮೊದಲಾರ್ಧ ಕಲಾಪ ಮುಗಿಯುತ್ತಿದ್ದಂತೆ ಸಲಹಾ ಸಮಿತಿ ಸಭೆ ಕರೆಯಲಾಗಿದ್ದು ಈ ಸಂದರ್ಭದಲ್ಲಿ ಕಲಾಪವನ್ನು ಡಿ.19ಕ್ಕೆ ಮೊಟಕುಗೊಳಿಸುವ ನಿರ್ಣಯಕ್ಕೂ ಬರಬಹುದು ಎನ್ನಲಾಗಿದೆ.
ನೂತನ ಶಾಸಕರ ಪ್ರಮಾಣ ವಚನ
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳಿಗೆ ಮೊದಲ ದಿನವಾದ ಸೋಮವಾರ ಪ್ರಮಾಣ ವಚನ ಬೋಧಿ ಸಲಾಗುತ್ತದೆ. ಚನ್ನಪಟ್ಟಣದಿಂದ ಸಿ.ಪಿ.ಯೋಗೇಶ್ವರ್, ಶಿಗ್ಗಾವಿಯಿಂದ ಯಾಸಿರ್ ಪಠಾಣ್, ಸಂಡೂರಿನಿಂದ ಗೆದ್ದಿರುವ ಅನ್ನಪೂರ್ಣ ಪ್ರತಿಜ್ಞಾ ವಿ ಧಿ ಸ್ವೀಕರಿಸಲಿದ್ದಾರೆ.
8 ಮಸೂದೆ ಮಂಡನೆ
ಬೆಳಗಾವಿ: ವಿಫಲ ಕೊಳವೆಬಾವಿಗಳನ್ನು ಸೂಕ್ತ ರೀತಿಯಿಂದ ಮುಚ್ಚದ ಸ್ವತ್ತಿನ ಮಾಲಕರ ವಿರುದ್ಧ ಕ್ರಮ ಜರುಗಿಸುವುದು, ಖನಿಜ ಹಕ್ಕು ಮತ್ತು ಖನಿಜ ಇರುವ ಭೂಮಿಯ ಮೇಲೆ ತೆರಿಗೆ ವಿಧಿಸುವುದಕ್ಕೆ ಅನುಕೂಲ ಆಗುವ ಮಸೂದೆಗಳು ಸೇರಿ 8 ಮಸೂದೆಗಳು ಪ್ರಸ್ತುತ ಅಧಿವೇಶನದಲ್ಲಿ ಮಂಡನೆಯಾಗಲಿವೆ.
ಇತ್ತೀಚಿನ ದಿನಗಳಲ್ಲಿ ಕೊಳವೆಬಾವಿ ಬೀಳುವ, ಸಾವಿಗೀಡಾದ ಪ್ರಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ಸಂಭವಿಸಿದ್ದು, ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ವ್ಯವಸ್ಥಾಪನಾ ನಿಯಂತ್ರಣ) (ತಿದ್ದುಪಡಿ)ಮಸೂದೆ ಹಾಗೂ ಕರ್ನಾಟಕ ನೀರಾವರಿ ಕಾಯ್ದೆ 1965ಕ್ಕೆ ತಿದ್ದುಪಡಿ ತರಲು ಸರಕಾರ ಯೋಚಿಸಿದೆ. ರಾಜ್ಯದ ಪ್ರವಾಸಿತಾಣಗಳಲ್ಲಿ ರೋಪ್ ವೇ ನಿರ್ಮಾಣ ಮಾಡಲು ಅನುಕೂಲ ಆಗುವಂತೆ ಕರ್ನಾಟಕ ಪ್ರವಾಸೋದ್ಯಮ ರೋಪ್ ವೇಗಳ ಮಸೂದೆ ಮಂಡನೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.