Udupi: ಮೊಬೈಲ್ ಹ್ಯಾಕ್ ಮಾಡಿ ಒಟಿಪಿ ಪಡೆದು ವಂಚನೆ
Team Udayavani, Dec 9, 2024, 12:44 AM IST
ಉಡುಪಿ: ಮೊಬೈಲ್ ಹ್ಯಾಕ್ ಮಾಡಿ ಒಟಿಪಿ ಪಡೆದು ವ್ಯಾಪಾರಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಮಾಡಿದ ಘಟನೆ ನಡೆದಿದೆ.
ಮೂಡನಿಡಂಬೂರು ಪರಿವಾರ್ ಸ್ವೀಟ್ಸ್ ಅಂಗಡಿಯ ಬಳಿ ಮಂಗಳೂರು ಮೂಲದ ವ್ಯಾಪಾರಿ ಮಜರ್ ಅಹಮ್ಮದ್ ಅವರು ಕಾಟನ್ ಪೀಪಲ್ ಎಂಬ ಬಟ್ಟೆ ಅಂಗಡಿ ನಡೆಸುತ್ತಿದ್ದರು.
ಅಂಗಡಿಗೆ ವ್ಯಾಪಾರಕ್ಕೆಂದು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಬಟ್ಟೆ ವ್ಯಾಪಾರಿಯ ಮೊಬೈಲ್ ಅನ್ನು ಯಾವುದೋ ಸಾಫ್ಟ್ವೇರ್ನಿಂದ ಹ್ಯಾಕ್ ಮಾಡಿ ತನ್ನ ಮೊಬೈಲ್ ನಂಬರಿಗೆ ಒಟಿಪಿಗಳು ಬರುವಂತೆ ಮಾಡಿಕೊಂಡಿದ್ದ.
ಬಳಿಕ ಹಂತ-ಹಂತವಾಗಿ ವ್ಯಾಪಾರಿಯ ಖಾತೆಯಿಂದ ಒಟ್ಟು 2,49,500 ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾಗಿ ದೂರು ನೀಡಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.