Baaghi 4: ಹರ್ಷ ʼಬಾಘಿ-4ʼ ಅಖಾಡಕ್ಕೆ ವಿಲನ್ ಆಗಿ ಎಂಟ್ರಿಯಾದ ಸಂಜು ಬಾಬಾ
Team Udayavani, Dec 9, 2024, 12:07 PM IST
ಮುಂಬಯಿ: ಟೈಗರ್ ಶ್ರಾಫ್ (Tiger Shroff) ಅಭಿನಯದ ʼಬಾಘಿ-4ʼ (Baaghi 4) ಸಿನಿಮಾದ ಫಸ್ಟ್ ಲುಕ್ ಪೋಸ್ಟ್ ಇತ್ತೀಚೆಗೆ ರಿವೀಲ್ ಆಗಿ ಸೌಂಡ್ ಮಾಡಿದೆ. ಇದೀಗ ಮತ್ತೊಂದು ಪ್ರಧಾನ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.
ಈ ಸಿನಿಮಾಕ್ಕೆ ಕನ್ನಡದ ಖ್ಯಾತ ನಿರ್ದೇಶಕ ಎ.ಹರ್ಷ (A. Harsha) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗಾಗಿ ಕನ್ನಡಿಗರಲ್ಲೂ ʼಭಾಘಿ-4ʼ ಕುತೂಹಲವನ್ನು ಹುಟ್ಟಿಸಿದೆ. ʼವಜ್ರಕಾಯʼ, ʼಭಜರಂಗಿʼ, ʼಭಜರಂಗಿ-2ʼ, ʼವೇದʼ ಅಂತಹ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್ ಸದ್ದು ಮಾಡಿರುವ ಹರ್ಷ ಬಾಲಿವುಡ್‌ಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲಿದ್ದಾರೆ.
ಇದನ್ನೂ ಓದಿ: Bollywood Movies:2025ರಲ್ಲಿ ತೆರೆಕಾಣಲಿರುವ ಬಹು ನಿರೀಕ್ಷಿತ ಬಾಲಿವುಡ್ ಸಿನಿಮಾಗಳ ಪಟ್ಟಿ
ಟೈಗರ್ ಶ್ರಾಫ್ (Tiger Shroff) ರಕ್ತಸಿಕ್ತವಾಗಿದ್ದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಇದೀಗ ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿರುವ ಮತ್ತೊಂದು ಪಾತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಉದ್ದ ಕೂದಲನ್ನು ಬಿಟ್ಟು, ಕಾಲಿನ ಮೇಲೆ ರಕ್ತದ ಮಡುವಿನಲ್ಲಿರುವ ಪ್ರಿಯತಮೆಯನ್ನು ಹಿಡಿದುಕೊಂಡಿರುವ ಗರ್ವದ ಲುಕ್ ನಲ್ಲಿ ಸಂಜಯ್ ದತ್ (Sanjay Dutt) ಕಾಣಿಸಿಕೊಂಡಿದ್ದಾರೆ.
“ಪ್ರತಿಯೊಬ್ಬ ಪ್ರಿಯಕರ ಒಬ್ಬ ವಿಲನ್” ಎಂದು ಕ್ಯಾಪ್ಷನ್ ನೀಡಲಾಗಿದೆ. ಈ ಪೋಸ್ಟರ್ ನೋಡಿ ಸಂಜು ಬಾಬಾ ಫ್ಯಾನ್ಸ್ ಫಿದಾ ಆಗಿದ್ದಾರೆ.
Every Aashiq is a Villain” 🔥 Presenting @duttsanjay in Baaghi 4 💥 #SajidNadiadwala’s #Baaghi4
Directed by @NimmaAHarsha @rajatsaroraa @NGEMovies @WardaNadiadwala @TSeries @PenMovies pic.twitter.com/IHtEFrNV2a— Tiger Shroff (@iTIGERSHROFF) December 9, 2024
ಸಾಜಿದ್ ನಾಡಿಯಾದ್ವಾಲಾ ʼಭಾಘಿ-4ʼ ಗೆ ಬಂಡವಾಳ ಹಾಕಲಿದ್ದಾರೆ. 2025ರ ಸೆ.5ಕ್ಕೆ ಸಿನಿಮಾ ರಿಲೀಸ್ ಆಗಲಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Mangaluru: ಪಾಲಿಕೆ ಕಚೇರಿ ಪಕ್ಕದಲ್ಲೇ ಫುಟ್‌ಪಾತ್ ಅವ್ಯವಸ್ಥೆ
Nanthoor: ಮನೆಯಿಂದ ಮಣ್ಣು ತಂದು ರಸ್ತೆಗುಂಡಿ ಮುಚ್ಚುವ ಹಿರಿಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.