Belagavi: ಬಾಣಂತಿ, ಹಸುಗೂಸು ಸಾವು ಪ್ರಕರಣ ಮುಚ್ಚಿಡುವ ಪ್ರಶ್ನೆಯೇ ಇಲ್ಲ: ಹೆಬ್ಬಾಳ್ಕರ್
Team Udayavani, Dec 9, 2024, 12:56 PM IST
ಬೆಳಗಾವಿ: ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ (ಬಿಮ್ಸ್) ಸಂಭವಿಸಿರುವ ಬಾಣಂತಿಯರು ಹಸುಗೂಸುಗಳ ಸಾವಿನ ಪ್ರಕರಣವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರಯ.
ಬೆಳಗಾವಿಯಲ್ಲಿ ಸೋಮವಾರ (ಡಿ.09) ಮಾತನಾಡಿದ ಅವರು, ಪ್ರಕರಣ ಕುರಿತು ಈಗಾಗಲೇ ನಾನು ಅಧಿಕಾರಿಗಳ ಜೊತೆ ಮಾತನಾಡಿರುವೆ. ಎಲ್ಲವನ್ನೂ ಕೂಡ ಚರ್ಚೆ ಮಾಡಿದ್ದೇನೆ. ಯಾವ ಕಾರಣಕ್ಕೆ ಸಾವಿನ ಪ್ರಕರಣಗಳು ಸಂಭವಿಸಿವೆ, ಸಾವು ತಡೆಯಲು ಯಾವ ಕ್ರಮ ಕೈಗೊಳ್ಳಬೇಕು. ಏನೆಲ್ಲಾ ಮಾಡಬೇಕು ಅದನ್ನು ಮಾಡುತ್ತಿದ್ದೇವೆ ಎಂದರು.
ನಮ್ಮ ಜಿಲ್ಲೆಯಲ್ಲಿ 54 ಲಕ್ಷ ಜನಸಂಖ್ಯೆಯಿದೆ. ಹೀಗಾಗಿ ಅಂಕಿ ಅಂಶ ಹೆಚ್ಚಾಗಿ ಕಾಣುತ್ತಿದೆ. ಕಾರವಾರ ಸೇರಿದಂತೆ ಅನೇಕ ಕಡೆಗಳಿಂದ ಆಸ್ಪತ್ರೆಗೆ ಬೆಳಗಾವಿಗೆ ಬರುತ್ತಾರೆ. ಬಾಣಂತಿಯರು, ಹಸಿಗೂಸುಗಳ ಸಾವಿಗೆ ಬಹಳಷ್ಟು ಕಾರಣಗಳಿವೆ. ಬಳ್ಳಾರಿ ಪ್ರಕರಣಗಳಿಗೂ, ಬ್ರಿಮ್ಸ್ ಗೂ ಸಂಬಂಧ ಇಲ್ಲ. ಕಬ್ಬಿನಾಂಶ ಕೊರತೆ, ಪ್ರೀ ಮೆಚ್ಯುರ್ ಬೇಬಿ ಹೀಗೆ ಅನೇಕ ಕಾರಣಗಳಿವೆ. ಒಂದು ಲಕ್ಷ ಮಕ್ಕಳು ಹುಟ್ಟಿದರೆ 28 ಮಕ್ಕಳು ಅದರಲ್ಲಿ ತೀರಿಕೊಳ್ಳುತ್ತಿದ್ದಾರೆ. ಇಡೀ ದೇಶಕ್ಕೆ 6ನೇ ಅತ್ಯುತ್ತಮ ಆಸ್ಪತ್ರೆ ಎಂದು ಬಿಮ್ಸ್ ಪಾತ್ರವಾಗಿದೆ. ಬಾಣಂತಿಯರು, ಹಸಿಗೂಸುಗಳ ಸಾವಿಗೆ ಇಂಥದ್ದೇ ಕಾರಣ ಎಂದು ಈ ಹಂತದಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.