Karakala: ಕಾಡಂಚಿನಲ್ಲಿ ತ್ಯಾಜ್ಯ; ವನ್ಯಜೀವಿಗಳಿಗೆ ಅಪಾಯ

ಆಹಾರವೆಂದು ಭ್ರಮಿಸಿ ಪ್ಲಾಸ್ಟಿಕ್‌ ತ್ಯಾಜ್ಯ ಸೇವಿಸಿ ಅಪಾಯಕ್ಕೆ ಒಳಗಾಗುವ ವನ್ಯಜೀವಿಗಳು

Team Udayavani, Dec 9, 2024, 1:19 PM IST

6

ಕಾರ್ಕಳ: ಪಶ್ಚಿಮ ಘಟ್ಟದ ಸೆರಗಿನಲ್ಲಿ ಹಸುರನ್ನು ಹೊದ್ದುಕೊಂಡಿರುವ ಕಾರ್ಕಳ ಸುತ್ತಮುತ್ತಲಿನ ಅರಣ್ಯ ಪ್ರದೇಶ ಹಲವು ಜೀವ ವೈವಿಧ್ಯತೆಗಳ ಆಗರ. ಆದರೆ, ಕಾಡಂಚಿನ ಭಾಗದಲ್ಲಿ ಅಪಾರ ಪ್ರಮಾಣದ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಎಸೆಯುತ್ತಿರುವುದು ವನ್ಯಜೀವಿಗಳಿಗೆ ಅಪಾಯ ತಂದೊಡ್ಡುತ್ತಿವೆ. ಹೆಬ್ರಿ -ಕಾರ್ಕಳ, ಬಜ ಗೋಳಿ- ಎಸ್‌.ಕೆ ಬಾರ್ಡರ್‌, ಬಜಗೋಳಿ- ಹೊಸ್ಮಾರ್‌, ಉಡುಪಿ-ಕಾರ್ಕಳ ಅರಣ್ಯ ಭಾಗದಲ್ಲಿನ ರಸ್ತೆ ಸಮೀಪ ಕಾಡಂಚಿನಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾಗಿದೆ.

ನಗರದ ಸುತ್ತಮುತ್ತ ಮಾತ್ರ ಬಸ್‌ ನಿಲ್ದಾಣ, ರಸ್ತೆ ಬದಿಗಳಲ್ಲಿ ಮಾತ್ರ ಕಾಣಿಸುತ್ತಿದ್ದ ಪ್ಲಾಸ್ಟಿಕ್‌ ತ್ಯಾಜ್ಯದ ರಾಕ್ಷಸ ಇದೀಗ ಕಾಡಿಗೂ ಲಗ್ಗೆ ಇಟ್ಟಿದ್ದಾನೆ. ಇದು ಕಾಡು ಪ್ರಾಣಿಗಳಿಗೆ ಅಪಾಯ ತಂದಿಟ್ಟಿದೆ. ಕಾಡುಪ್ರಾಣಿಗಳು ರಸ್ತೆ ಬದಿ ಎಸೆಯುವ ತ್ಯಾಜ್ಯವನ್ನು ಆಹಾರವೆಂದು ಭ್ರಮಿಸಿ ತಿನ್ನುವುದು ಒಂದು ಕಡೆಯಾದರೆ, ಅದರ ಆಸೆಗೆ ರಸ್ತೆ ದಾಟುವಾಗಲೂ ಅಪಘಾತಕ್ಕೆ ಬಲಿಯಾಗುತ್ತಿವೆ.

ಇದು ಬಹುಪಾಲು ವಾಹನಗಳಲ್ಲಿ ಹೋಗುವವರ ದುಷ್ಕೃತ್ಯ ಎಂದು ಹೇಳಲಾಗುತ್ತಿದೆ. ತಂಪು ಪಾನೀಯ ಸಹಿತ ಮದ್ಯದ ಬಾಟಲಿ, ಪ್ಲಾಸ್ಟಿಕ್‌ ಬಾಟಲಿ, ಆಹಾರ ತಿಂದು ಎಸೆದ ತಟ್ಟೆಗಳು, ಪ್ಲಾಸ್ಟಿಕ್‌ ಲೋಟ, ಪ್ಲಾಸ್ಟಿಕ್‌ ಕವರ್‌, ಇನ್ನಿತರೆ ತಿಂಡಿಗಳ ಪೊಟ್ಟಣಗಳು, ಗೃಹಪಯೋಗಿ ಹಳೆ ವಸ್ತುಗಳು, ಹಳೆಯ ಬಟ್ಟೆಗಳು, ಕೊಳೆತಿರುವ ಆಹಾರ ತ್ಯಾಜ್ಯವನ್ನು ಈ ರಾಶಿಗಳಲ್ಲಿ ಕಾಣಬಹುದು.

26 ವನ್ಯಜೀವಿಗಳು ರಸ್ತೆ ಅಪಘಾತಕ್ಕೆ ಬಲಿ
ಕುದುರೆಮುಖ ವನ್ಯಜೀವಿ ವಿಭಾಗದ ಕಾರ್ಕಳ ವ್ಯಾಪ್ತಿಯಲ್ಲಿ 1 ಕಾಡುಕುರಿ, 1 ಪುನಗಿನ ಬೆಕ್ಕು, 8 ಮಂಗಗಳು, 1 ಸಿಂಗಳೀಕ, 1 ಮುಂಗುಸಿ, 5 ಕಡವೆ, 1 ಮುಜ್ಜು, 3 ಜಿಂಕೆ, 1 ಕಬ್ಬೆಕ್ಕು ರಸ್ತೆ ಅಪಘಾತದಲ್ಲಿ ಮೃತಪಟ್ಟಿವೆ. ಹೆಬ್ರಿ ವ್ಯಾಪ್ತಿಯಲ್ಲಿ 2 ಜಿಂಕೆ, 1 ಚಿರತೆ, ಶಂಕರನಾರಾಯಣ ವ್ಯಾಪ್ತಿಯಲ್ಲಿ 1 ಕಾಡುಕೋಣ, 1 ಚಿರತೆ ಮರಿ ಸಹಿತ ಒಟ್ಟು 26 ವನ್ಯಜೀವಿಗಳು ರಸ್ತೆ ಅಪಘಾತಕ್ಕೆ ಬಲಿಯಾಗಿವೆ. ತ್ಯಾಜ್ಯದಲ್ಲಿರುವ ಆಹಾರ ಮತ್ತು ಮನುಷ್ಯರು ಕೊಡುವ ಆಹಾರದಿಂದ ಆಕರ್ಷಿಕವಾಗಿ ರಸ್ತೆ ಬದಿಗೆ ಬರುವ ವನ್ಯಜೀವಿಗಳು ದುರಂತಕ್ಕೆ ಬಲಿಯಾಗುತ್ತಿವೆ.

ರಸ್ತೆ ಬದಿಗೆ ಬರುವ ಪ್ರಾಣಿಗಳು
ಪಶ್ಚಿಮ ಘಟ್ಟ ಅಳಿವಿನಂಚಿನಲ್ಲಿರುವ ಸಿಂಹ ಬಾಲದ ಸಿಂಗಳೀಕ, ವಿವಿಧ ಪ್ರಭೇಧ ಕಪ್ಪೆಗಳು, ಕಾಳಿಂಗ ಸರ್ಪ, ನೀರು ನಾಯಿ, ಕಡವೆ, ವಿವಿಧ ಸರೀಸೃಪ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ವನ್ಯಜೀವಿಗಳನ್ನು ತನ್ನೊಡಲಿನಲ್ಲಿ ಇರಿಸಿಕೊಂಡಿದೆ. ವನ್ಯಜೀವಿಗಳು ಈ ತ್ಯಾಜ್ಯ ರಾಶಿಯನ್ನು ತಡಕಾಡುತ್ತ ಪ್ಲಾಸ್ಟಿಕ್‌ ಸಹಿತ ಕೊಳೆತ ಆಹಾರ ತ್ಯಾಜ್ಯ ಸೇವಿಸುವ ಮೂಲಕ ತನ್ನ ರುಚಿಯಲ್ಲಿ ಬದಲಾವಣೆ ಕಾಣುತ್ತವೆ. ಈಗಾಗಲೆ ಆಗುಂಬೆ-ಹೆಬ್ರಿ ಪರಿಸರದಲ್ಲಿ ಸಿಂಗಳೀಕವು ಕಾಡಿನ ಆಹಾರವನ್ನು ಬಿಟ್ಟು ಮನುಷ್ಯನು ಕೊಡುವ ತಿಂಡಿಗಳಿಗೆ ದಾಸನಾಗಿ ಬಿಟ್ಟಿವೆ. ಇದರಿಂದ ಅವುಗಳ ಆರೋಗ್ಯದ ಮೇಲೆ ಗಂಭೀರ ಹಾನಿ, ಜೀವನ ಕ್ರಮ ಬದಲಾವಣೆಯಾಗಿ ಕಾಡುಬಿಟ್ಟು ರಸ್ತೆಯತ್ತಲೇ ಬರುತ್ತಿವೆ. ಇದು ಮನುಷ್ಯರಿಗೂ ಅಪಾಯಕಾರಿಯಾಗಿದೆ.

ಕಾಡಿನೊಳಗೆ ತ್ಯಾಜ್ಯ ಎಸೆಯಬೇಡಿ
ಕಾಡಿನೊಳಗೆ ಆಹಾರ ಅಥವಾ ಯಾವುದೇ ರೀತಿಯ ತ್ಯಾಜ್ಯವನ್ನು ಎಸೆಯಬೇಡಿ. ಕಾಡಿನ ವ್ಯವಸ್ಥೆ ಹದಗೆಟ್ಟು, ವನ್ಯಜೀವಿಗಳು ಇದನ್ನು ಸೇವಿಸಿದಲ್ಲಿ ಜೀವನ ಕ್ರಮ ಬದಲಾಗುತ್ತದೆ. ಪ್ರಾಣಿಗಳಿಗೆ ಆಹಾರ ಕೊಡುವುದು ಅಥವಾ ಕಾಡಿನೊಳಗೆ ತ್ಯಾಜ್ಯ ಎಸೆಯುವುದು ನಿರ್ಬಂಧವಿದೆ. ಕುದುರೆಮುಖ ವನ್ಯಜೀವಿ ವಿಭಾಗ ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯ ಹಮ್ಮಿಕೊಂಡಿದೆ.
– ಶಿವರಾಮ್‌ ಬಾಬು, ಡಿಎಫ್ಒ, ಕುದುರೆಮುಖ ವನ್ಯಜೀವಿ ವಿಭಾಗ

ಕಾನೂನು ಕ್ರಮದ ಎಚ್ಚರಿಕೆ
ಕಾಡಿನೊಳಗೆ ತ್ಯಾಜ್ಯ ಎಸೆಯುವುರನ್ನು ಸ್ಥಳೀಯರು ಅಥವಾ ಸ್ಥಳೀಯಡಳಿತ ಸಂಸ್ಥೆಗಳು ಅರಣ್ಯ ಇಲಾಖೆ ಗಮನಕ್ಕೆ ತಂದಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕಾಡಿನ ಮಹತ್ವ ಅರಿತು ಅರಣ್ಯದೊಳಗೆ ತ್ಯಾಜ್ಯ ಎಸೆಯುವ ಮನಸ್ಥಿತಿ ಬದಲಾಗಬೇಕು. ಕಾಡಂಚಿನಲ್ಲಿ ತ್ಯಾಜ್ಯವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ.
– ಶ್ರೀಧರ್‌, ಎಸಿಎಫ್, ಅರಣ್ಯ ಇಲಾಖೆ

-ಅವಿನ್‌ ಶೆಟ್ಟಿ

ಟಾಪ್ ನ್ಯೂಸ್

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

11

Manipal: ಡಂಪಿಂಗ್‌ ಯಾರ್ಡ್‌ ಆದ ಮಣ್ಣಪಳ್ಳ!

10

Udupi: ಒಂದೇ ವೃತ್ತ; ಪೊಲೀಸ್‌ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.