Ullala: ಬೀರಿ: ಹೈಡ್ರೋಕ್ಲೋರಿಕ್‌ ಆ್ಯಸಿಡ್‌ ಸೋರಿಕೆ; ರಾತ್ರಿವರೆಗೂ ಆತಂಕ

ಆ್ಯಸಿಡ್‌ ವರ್ಗಾವಣೆ ವಿಳಂಬ

Team Udayavani, Dec 9, 2024, 5:36 PM IST

Ullala: Leak in acid tanker

ಉಳ್ಳಾಲ: ಕಾರವಾರದ ಸಂಸ್ಥೆಯಿಂದ ಕೇರಳದ ಕೊಚ್ಚಿಗೆ ಟ್ಯಾಂಕರ್‌ನಲ್ಲಿ ಸಾಗಿಸುತ್ತಿದ್ದ ಹೈಡ್ರೋಕ್ಲೋರಿಕ್‌ ಆ್ಯಸಿಡ್‌ ರಾ. ಹೆ. 66ರ ಸೋಮೇಶ್ವರ ಸಂಕೊಳಿಗೆ ಬಳಿ ಸೋರಿಕೆಯಾಗಿದೆ. ಟ್ಯಾಂಕರ್‌ನಲ್ಲಿದ್ದ ಅರ್ಧದಷ್ಟು ಆ್ಯಸಿಡ್‌ ಅನ್ನು ಖಾಲಿ ಮಾಡಲಾಗಿದ್ದು, ರಾತ್ರಿ ಗಂಟೆ 11 ಗಂಟೆವರೆಗೂ ಪರಿಸರದಲ್ಲಿ ಆತಂಕ ನೆಲೆಸಿತ್ತು.

ಟ್ಯಾಂಕರ್‌ನ ಹಿಂದಿನಿಂದ ಸಾಗುತ್ತಿದ್ದ ಇತರ ವಾಹನ ಚಾಲಕರು ನೀಡಿದ ಮಾಹಿತಿಯಂತೆ ಟ್ಯಾಂಕರನ್ನು ಉಚ್ಚಿಲ – ಕೆ.ಸಿ.ರೋಡ್‌ ನಡುವಿನ ಎಂಆರ್‌ಪಿಎಲ್‌ ಪೆಟ್ರೋಲ್‌ ಪಂಪ್‌ ಬಳಿ ನಿಲ್ಲಿಸಿ ಅರ್ಧದಷ್ಟು ಆ್ಯಸಿಡ್‌ ಅನ್ನು ಎಂಸಿಎಫ್‌ನಿಂದ ತಂದಿದ್ದ ಬ್ಯಾರೆಲ್‌ಗ‌ಳಿಗೆ ವರ್ಗಾಯಿಸಲಾಯಿತು. ಉಳಿದ ಆ್ಯಸಿಡನ್ನು ಕಾರವಾರದಿಂದ ಆಗಮಿಸಿದ್ದ ಟ್ಯಾಂಕರ್‌ಗೆ ವರ್ಗಾಯಿಸಬೇಕಾಗಿತ್ತು. ಆದರೆ ಸೋಮವಾರ ತಡರಾತ್ರಿ ವರೆಗೂ ವರ್ಗಾವಣೆ ಆಗಿಲ್ಲ. ಟ್ಯಾಂಕರ್‌ ಬಂದಿದ್ದರೂ ತಂತ್ರಜ್ಞಾನಿಗಳು ಬಾರದೆ ವರ್ಗಾವಣೆ ಸಾಧ್ಯವಾಗಿಲ್ಲ. ಬೆಳಗ್ಗೆ ಘಟನೆ ನಡೆದಿದ್ದರೂ ರಾತ್ರಿ 11 ಗಂಟೆ ವರೆಗೂ ತಂತ್ರಜ್ಞಾನಿಗಳು ಬಾರದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾರವಾರದಿಂದ ಬೆಳಗ್ಗಿನ ಜಾವ ಹೊರಟಿದ್ದ ಟ್ಯಾಂಕರ್‌ ಸುಮಾರು 11 ಗಂಟೆ ಸುಮಾರಿಗೆ ಬೀರಿಯಿಂದ ಸಂಕೊಳಿಗೆ ಕಡೆ ಸಾಗುತ್ತಿದ್ದಾಗ ಆ್ಯಸಿಡ್‌ ಸೋರಿಕೆ ಕಂಡುಬಂದಿದೆ.

ಸೋರಿಕೆಯಾಗುತ್ತಿದ್ದ ಜಾಗಕ್ಕೆ ಎಂಸೀಲ್‌ ಹಾಕಿದರೂ ಸೋರಿಕೆ ನಿಲ್ಲಲಿಲ್ಲ. ಬಳಿಕ ಪೊಲೀಸರು ಮತ್ತು ಜಿಲ್ಲಾಡ ಳಿತಕ್ಕೆ ಮಾಹಿತಿ ನೀಡಲಾಯಿತು. ಜಿಲ್ಲಾಡಳಿತದ ಸೂಚನೆಯಂತೆ ಉಳ್ಳಾಲ ತಾಲೂಕಿನ ಕಂದಾಯ ಇಲಾಖೆ ಸ್ಥಳಕ್ಕೆ ಆಗಮಿಸಿದ್ದು, ತಹಶೀಲ್ದಾರ್‌ ಪುಟ್ಟರಾಜು ಮಾರ್ಗದರ್ಶನದಂತೆ ಟ್ಯಾಂಕರನ್ನು ಹೆದ್ದಾರಿ ಬದಿಯಲ್ಲಿ ಸುರಕ್ಷಿತ ಸ್ಥಳವಾದ ಎಂಆರ್‌ಪಿಎಲ್‌ ಪಂಪ್‌ ಬಳಿ ನಿಲ್ಲಿಸಲಾಯಿತು. ಸ್ಥಳಕ್ಕೆ ಅಗ್ನಿಶಾಮಕ ಸಿಬಂದಿ ಹಾಗೂ ಉಳ್ಳಾಲ ಪೊಲೀಸರು ಆಗಮಿಸಿ ಯಾವುದೇ ಅವಘಡ ಆಗದಂತೆ ಟ್ಯಾಂಕರ್‌ ಇರುವ ಸ್ಥಳದಲ್ಲಿ ಮಾತ್ರವೇ ವಾಹನ ಸಂಚಾರವನ್ನು ನಿಷೇಧಿಸಿದರು.

ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಒಳಪ್ರದೇಶದಲ್ಲಿ ಮಧ್ಯಾಹ್ನದ ಬಳಿಕ ಆ್ಯಸಿಡ್‌ ವರ್ಗಾವಣೆ ಕಾರ್ಯಾಚರಣೆ ಆರಂಭಿಸಲಾಯಿತು. ಕೆಲವು ಮೀ. ವ್ಯಾಪ್ತಿಯಲ್ಲಷ್ಟೇ ಸುರಕ್ಷಾ ಕ್ರಮ ಕೈಗೊಳ್ಳಲಾಗಿತ್ತು. ವಾಹನ ಮತ್ತು ಜನಸಂಚಾರವನ್ನು ರಾತ್ರಿಯವರೆಗೂ ನಿರ್ಬಂಧಿಸಿರಲಿಲ್ಲ.

ಹೈಡ್ರೋಕ್ಲೋರಿಕ್‌ ಆ್ಯಸಿಡ್‌ ವಿಷಕಾರಿಯಾದರೂ ಸ್ಫೋಟಿಸುವ ಗುಣ ಹೊಂದಿಲ್ಲ ಹೆಚ್ಚು ಸೋರಿಕೆ ಯಾದರೆ ಸುತ್ತಲಿನ ಜೀವಿಗಳಲ್ಲಿ ಉಸಿರಾಟದ ಸಮಸ್ಯೆಗಳು ಕಾಣಬಹುದು. ಅಲ್ಲದೆ ರಬ್ಬರ್‌ ಹೊರತುಪಡಿಸಿ ಬೇರೆ ಎಲ್ಲ ರೀತಿಯ ಸೊತ್ತುಗಳನ್ನು ಹಾನಿಗೊಳಿಸಬಲ್ಲದು. ಮಣ್ಣಿಗೆ ಬಿದ್ದರೂ ಹಲವು ಸಮಯ ಆ ಭಾಗದಲ್ಲಿ ಗಿಡಗಳು ಬೆಳೆಯುವುದಿಲ್ಲ. ಇಂತಹ ಲಕ್ಷಣಗಳನ್ನು ಹೊಂದುವ ಹೈಡ್ರೋಕ್ಲೋರಿಕ್‌ ಅನಿಲವನ್ನು ಕಲರ್‌ ಡೈ ಸಹಿತ ವಿವಿಧ ಕಾಸೆ¾ಟಿಕ್‌ ಫಾರ್ಮುಲಾಗಳಿಗೆ ಬಳಸಲಾಗುತ್ತಿದೆ.

ಟಾಪ್ ನ್ಯೂಸ್

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Madhugiri

Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ

HDK-DKS

Power Prayers: ಡಿಸಿಎಂ ಟೆಂಪಲ್‌ ರನ್‌ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

9

Mangaluru: ಪಾಲಿಕೆ ಕಚೇರಿ ಪಕ್ಕದಲ್ಲೇ ಫುಟ್‌ಪಾತ್‌ ಅವ್ಯವಸ್ಥೆ

8

Nanthoor: ಮನೆಯಿಂದ ಮಣ್ಣು ತಂದು ರಸ್ತೆಗುಂಡಿ ಮುಚ್ಚುವ ಹಿರಿಯ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

1-wqewqeqwe

Cardiac arrest: ಗುಜರಾತ್‌ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಸಾ*ವು

naksal (2)

Chhattisgarh: ನಕ್ಸಲರು ಇಟ್ಟಿದ್ದ ಐಇಡಿ ಸ್ಫೋ*ಟ, ವ್ಯಕ್ತಿ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.