World Chess Championship 12ನೇ ಪಂದ್ಯದಲ್ಲಿ ಲಿರೆನ್‌ ಜಯ

14ರಲ್ಲಿ 2 ಪಂದ್ಯ ಬಾಕಿ, ಇಬ್ಬರಿಗೂ ತಲಾ 6 ಅಂಕ

Team Udayavani, Dec 9, 2024, 8:28 PM IST

World Chess Championship 12ನೇ ಪಂದ್ಯದಲ್ಲಿ ಲಿರೆನ್‌ ಜಯ

ಸಿಂಗಾಪುರ: ಭಾರತದ ಜಿಎಂ ಡಿ. ಗುಕೇಶ್‌ ಮತ್ತು ಚೀನದ ಜಿಎಂ, ಹಾಲಿ ವಿಶ್ವ ಚಾಂಪಿಯನ್‌ ಡಿಂಗ್‌ ಲಿರೆನ್‌ ನಡುವಿನ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಸ್ಪರ್ಧೆ ತೀವ್ರ ಕುತೂಹಲ ಘಟ್ಟದತ್ತ ಸಾಗುತ್ತಿದೆ.

ಸೋಮವಾರ ನಡೆದ 12ನೇ ಪಂದ್ಯದಲ್ಲಿ ಲಿರೆನ್‌ ಗೆದ್ದಿದ್ದು, ಇಬ್ಬರೂ ತಲಾ 6 ಅಂಕ ಗಳಿಸಿದ್ದಾರೆ. ಇಲ್ಲಿಗೆ 14 ಪಂದ್ಯಗಳ ಈ ಸರಣಿಯಲ್ಲಿ ಇನ್ನು 2 ಪಂದ್ಯ ಮಾತ್ರ ಬಾಕಿ ಉಳಿದಿದ್ದು, ಯಾರು ಚಾಂಪಿಯನ್‌ ಆಗಬಹುದು ಎಂಬ ಕುತೂಹಲ ಮೇರೆ ಮೀರಿದೆ.

ಸೋಮವಾರದ ಪಂದ್ಯದಲ್ಲಿ ಕಪ್ಪು ಕಾಯಿಯೊಂದಿಗೆ ಆಡಿದ ಡಿ. ಗುಕೇಶ್‌, ಬಿಳಿ ಕಾಯಿಯೊಂದಿಗೆ ಆಡಿದ ಡಿಂಗ್‌ ಲಿರೆನ್‌ ವಿರುದ್ಧ ತಮ್ಮ 39ನೇ ನಡೆಯಲ್ಲಿ ಸೋಲೊಪ್ಪಿಕೊಂಡರು. ಈ ಹಂತದಲ್ಲಿ ಪಂದ್ಯ ಗುಕೇಶ್‌ ಕೈಯಿಂದ ಬಹುತೇಕ ಜಾರಿತ್ತು. ಆಟ ಮುಂದುವರಿಸಿದ್ದರೂ ಗುಕೇಶ್‌ ಚೆಕ್‌ವೆುಟ್‌ಗೆ ಒಳಗಾಗುವ ಸಾಧ್ಯತೆಯಿದ್ದುದರಿಂದ ರಿಸೈನ್‌ ಮೂಲಕ ಗುಕೇಶ್‌ ತಮ್ಮ ಸೋಲನ್ನು ಘೋಷಿಸಿದರು. ರವಿವಾರ ನಡೆದ 11ನೇ ಸುತ್ತಿನ ಪಂದ್ಯದಲ್ಲಿ ಗುಕೇಶ್‌ ಜಯ ಸಾಧಿಸಿದ್ದರು.

ಟೈಬ್ರೇಕರ್‌ ಸಾಧ್ಯತೆ?
14 ಪಂದ್ಯಗಳ ಈ ಚೆಸ್‌ ಸರಣಿಯಲ್ಲಿ ಮೊದಲು 7.5 ಅಂಕ ತಲುಪುವವರು ವಿಜೇತರಾಗುತ್ತಾರೆ. ಆದರೆ ಇಲ್ಲಿ ಗುಕೇಶ್‌-ಲಿರೆನ್‌ ಇಬ್ಬರೂ ಸಮಬಲದ ಹೋರಾಟದಲ್ಲೇ ಮುಂದುವರಿಯುತ್ತಿದ್ದಾರೆ. ಇನ್ನುಳಿದ 2 ಪಂದ್ಯಗಳ ಬಳಿಕವೂ ಅಂಕ ಸಮಲಬಲದಲ್ಲೇ ಉಳಿದರೆ, ಆಗ ಟೈಬ್ರೇಕರ್‌ ಪಂದ್ಯ ನಡೆಸಿ ವಿಜೇತರನ್ನು ಘೋಷಿಸಲಾಗುತ್ತದೆ.

ಟಾಪ್ ನ್ಯೂಸ್

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

1-hak

ಕೊಡವ ಕೌಟುಂಬಿಕ ಹಾಕಿಗೆ ಸರಕಾರದಿಂದ 1 ಕೋ. ರೂ.

1-shami

ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಆಕಾಶ್‌ ಬದಲು ಶಮಿಗೆ ಸ್ಥಾನ?

1-saaai

Malaysia Super 1000; ಸಾತ್ವಿಕ್‌-ಚಿರಾಗ್‌ ಕ್ವಾರ್ಟರ್‌ಫೈನಲಿಗೆ

tennis

Australian Open ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಡ್ರಾ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.