Bailoor Sri Mahishamardini Temple: ಹೊರೆಕಾಣಿಕೆ ಮೆರವಣಿಗೆಗೆ ವೈಭವದ ಚಾಲನೆ
ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ
Team Udayavani, Dec 10, 2024, 12:26 AM IST
ಉಡುಪಿ: ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ. 14ರಂದು ನಡೆಯಲಿರುವ ಶತ ಚಂಡಿಕಾಯಾಗ ಹಾಗೂ ಬ್ರಹ್ಮಮಂಡಲ ಸೇವೆ ಪ್ರಯುಕ್ತ ಸೋಮವಾರ ಹಸುರು ಹೊರೆಕಾಣಿಕೆ ಮೆರವಣಿಗೆಗೆ ಜೋಡುಕಟ್ಟೆಯಲ್ಲಿ ಶ್ರೀ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಚಾಲನೆ ನೀಡಲಾಯಿತು.
ಹೊರೆಕಾಣಿಕೆ ತುಂಬಲ್ಪಟ್ಟ ಸುಮಾರು 60ಕ್ಕೂ ಮಿಕ್ಕಿ ವಾಹನಗಳು, ತಾಲೀಮು ಪ್ರದರ್ಶನ, ಶ್ರೀ ಮಹಿಷಮರ್ದಿನಿ ದೇವಿ, ಮಹಿಷಾಸುರ, ಚಂಡ- ಮುಂಡರು, ಆಂಜನೇಯ, ನವಿಲು ಮುಂತಾದ ವೇಷಗಳ ಸ್ತಬ್ಧ ಚಿತ್ರಗಳು, ಯಕ್ಷಗಾನ, ಚೆಂಡೆ, ವಾದ್ಯ, ಡೊಳ್ಳು, ಕೊಂಬುವಾದ್ಯ, ಹುಲಿವೇಷ, ಕುಣಿತ ಭಜನೆ, ಭಜನೆ, ಕೀಲುಕುದುರೆ, ತಟ್ಟಿರಾಯ ಇತ್ಯಾದಿಗಳೊಂದಿಗೆ ವಿಶೇಷ ಆಕರ್ಷಣೆಯಾಗಿ ಕಂಬಳದ ಕೋಣ, ಮಹಿಳೆಯರಿಂದ ಪೂರ್ಣಕುಂಭ ಕಲಶ, ಬ್ಯಾಂಡ್ ಸಹಿತ ವೈವಿಧ್ಯಮಯ ವೇಷಭೂಷಣಗಳೊಂದಿಗೆ ಸಾಗಿ ಬಂದ ಮೆರವಣಿಗೆಯು ಲಯನ್ಸ್ ವೃತ್ತ, ಮಿಷನ್ ಆಸ್ಪತ್ರೆ ಮಾರ್ಗವಾಗಿ ದೇವಸ್ಥಾನ ತಲುಪಿತು. ಮೆರವಣಿಗೆ ಸಾಗಿ ಬರುವ ಮಾರ್ಗವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.
ಹೊರೆಕಾಣಿಕೆ ಸಮಿತಿ ಸಂಚಾಲಕ ನವೀನ್ ಭಂಡಾರಿ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನದ ತಂತ್ರಿಗಳಾದ ಕೆ.ಎಸ್. ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿ, ಕೆ.ಎ. ಶ್ರೀರಮಣ ತಂತ್ರಿ ಕೊರಂಗ್ರಪಾಡಿ, ಪ್ರಧಾನ ಅರ್ಚಕ ಕೆ. ವಾಸುದೇವ ಭಟ್, ಶತ ಚಂಡಿಕಾಯಾಗ ಹಾಗೂ ಬ್ರಹ್ಮಮಂಡಲ ಸೇವಾ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾರ್ಯ ದರ್ಶಿ ಶ್ರೀಕೃಷ್ಣ ರಾವ್ ಕೊಡಂಚ, ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ ಮುದ್ದಣ್ಣ ಶೆಟ್ಟಿ, ಆರ್ಥಿಕ ಸಮಿತಿ ಸಂಚಾಲಕ ರಮೇಶ್ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ನಾರಾಯಣದಾಸ್ ಉಡುಪ, ಕೋಶಾಧಿಕಾರಿ ಸುದರ್ಶನ್ ಶೇರಿಗಾರ್, ಮೊಕ್ತೇಸರರಾದ ರಾಜ ಶೇಖರ ಭಟ್, ಸುಭಾಸ್ ಭಂಡಾರಿ, ಸುರೇಶ್ ಶೆಟ್ಟಿ ಬೈಲೂರು, ಮೋಹನ ಆಚಾರ್ಯ, ಅರುಣ್ ಶೆಟ್ಟಿಗಾರ್, ಜಿ. ಪ್ರೇಮನಾಥ್, ಪ್ರವೀಣ್ ಕುಮಾರ್, ದುರ್ಗಾ ಪ್ರಸಾದ್ ಸಿ.ಎಚ್., ಭಾರತಿ ಜಯರಾಮ್ ಆಚಾರ್ಯ, ಹರೀಶ್ ಸುವರ್ಣ, ಶಾಂತಾ ಶೇರಿಗಾರ್, ಗೌರವ ಸಲಹೆಗಾರರಾದ ಕಿರಣ್ ಕುಮಾರ್, ರತ್ನಾಕರ ಎನ್. ಶೆಟ್ಟಿ, ಪಿ. ಸುಬ್ರಹ್ಮಣ್ಯ ತಂತ್ರಿ, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.