Arun Shahapur: ಅಲ್ಪಸಂಖ್ಯಾಕ ಶಿಕ್ಷಣ ಸಂಸ್ಥೆಗಳ ನಿಯಮ ಸಡಿಲಿಕೆ ಸರಿಯಲ್ಲ
Team Udayavani, Dec 10, 2024, 12:30 AM IST
ಉಡುಪಿ: ರಾಜ್ಯದಲ್ಲಿ ಅಲ್ಪಸಂಖ್ಯಾಕ ಶಿಕ್ಷಣ ಸಂಸ್ಥೆಗಳಿಗೆ ನಿಯಮ ಸಡಿಲಿ ಸುವ ಮೂಲಕ ರಾಜ್ಯ ಸರಕಾರ ಬಹುಸಂಖ್ಯಾಕ ಹಾಗೂ ಅಲ್ಪಸಂಖ್ಯಾಕ ಪದದ ಮರು ವಾಖ್ಯಾನಕ್ಕೆ ಮುಂದಾಗಿದೆ. ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಲು ಹೊರಟಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಪುರ ಹೇಳಿದರು.
ಸೋಮವಾರ ಪಕ್ಷದ ಕಚೇರಿಯಲ್ಲಿ ಮಾತನಾಡಿದಅವರು, ಬಿಜೆಪಿ ಸರಕಾರ ಇದ್ದಾಗ ಕಾಯ್ದೆಗೆ ತಿದ್ದುಪಡಿ ತಂದು, ಶೇ.75ರಷ್ಟು ವಿದ್ಯಾರ್ಥಿಗಳು ಅಲ್ಪಸಂ ಖ್ಯಾಕ ಸಮುದಾಯದವರು ಇದ್ದಾಗ ಮಾತ್ರ ಅಲ್ಪಸಂಖ್ಯಾಕ ಸಂಸ್ಥೆಯ ಅರ್ಹತೆ ಪಡೆಯ ಬಹುದಿತ್ತು. ಕಾಂಗ್ರೆಸ್ ಅಧಿಕಾರದಲ್ಲಿ ತನ್ವೀರ್ ಸೇಠ್ ಶಿಕ್ಷಣ ಮಂತ್ರಿಯಾಗಿದ್ದಾಗ ಅದನ್ನು ಶೇ.50ಕ್ಕೆ ಇಳಿಸಿದ್ದರು. ಈಗ ಆ ಸಮುದಾಯದ ಯಾವೊಬ್ಬ ವಿದ್ಯಾರ್ಥಿ ದಾಖಲಾಗದಿದ್ದರೂ ಅಲ್ಪಸಂಖ್ಯಾಕ ಮಾನ್ಯತೆ ಪಡೆಯಬಹುದು ಎಂದು ಸರಕಾರ ನಿರ್ಧರಿಸಿರುವುದು ದಲಿತ ಹಾಗೂ ಹಿಂದುಳಿದ ವರ್ಗದ ಮೇಲೆ ನೇರ ಪರಿಣಾಮ ಬೀರಲಿದೆ. ಈ ಸಡಿಲಿಕೆ ಸರಿಯಲ್ಲ ಎಂದರು.
ವಿವಿಗಳಲ್ಲಿ ಗುಣಮಟ್ಟ ಕುಸಿಯು ತ್ತಿದ್ದು, ಶೇ.90ರಷ್ಟು ಅತಿಥಿ ಉಪನ್ಯಾಸಕ ರಿಂದಲೇ ವಿ.ವಿ. ನಡೆಸಬೇಕಿದೆ. ಗುಣಮಟ್ಟ ಸುಧಾರಣೆ ಹಾಗೂ ಮೂಲಸೌಕರ್ಯ ಒದಗಿಸಲು ಸರಕಾರ ಕ್ರಮ ಕೈಗೊಳ್ಳಬೇಕೇ ಹೊರತು ಈ ರೀತಿ ತುಷ್ಟೀಕರಣ ಸರಿಯಲ್ಲ ಎಂದರು.
ಅಧಿಕಾರ ಮೊಟಕು ಸರಿಯಲ್ಲ
ಮುಖ್ಯಮಂತ್ರಿಯವರನ್ನು ಗದಗ ಗ್ರಾಮೀಣ ವಿ.ವಿ.ಯ ಕುಲಾಧಿಪತಿ ಯಾಗಿ ಮಾಡಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಿದ್ದು ಸರಿಯಲ್ಲ ಎಂದ ಅವರು, ಈ ಪ್ರವೃತ್ತಿ ಮಂದೆ ಎಲ್ಲ ವಿವಿ ಗಳಿಗೂ ವಿಸ್ತರಣೆಯಾಗುವ ಅಪಾಯವಿದೆ ಎಂದರು.
ಜಿಲ್ಲಾಧ್ಯಕ್ಷ ಕಿಶೋರ್‌ಕುಮಾರ್ ಕುಂದಾಪುರ, ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.