Kambala: ಡಿ.10ರಂದು ಗುಲ್ವಾಡಿ ದೊಡ್ಮನೆಯ ಸಾಂಪ್ರದಾಯಿಕ ಕಂಬಳ
ಹೊಸೂರು ಮಲಗದ್ದೆ ಕಂಬಳ
Team Udayavani, Dec 10, 2024, 6:30 AM IST
ಬಸ್ರೂರು: ಶತಮಾನಗಳ ಹಿಂದಿನಿಂದಲೂ ನಡೆದುಕೊಂಡು ಬಂದ ಗುಲ್ವಾಡಿ ದೊಡ್ಮನೆಯ ಸಾಂಪ್ರ ದಾಯಿಕ ಕಂಬಳವು ಡಿ.10ರಂದು ನಡೆಯಲಿದೆ. ಗುಲ್ವಾಡಿ ದೊಡ್ಮನೆ ದಿ| ರಾಜೀವಿ ಆನಂದ ಶೆಟ್ಟರ ಮಕ್ಕಳು, ಗುಲ್ವಾಡಿ ನಾಲ್ಕು ಮನೆ ಕುಟುಂಬಸ್ಥರು ಹಾಗೂ ಗುಲ್ವಾಡಿಯ ಗ್ರಾಮಸ್ಥರ ಸಹಕಾರದೊಂದಿಗೆ ಈ ಕಂಬಳ ನಡೆಯುತ್ತಿದೆ.
ವೃಶ್ಚಿಕ ಸಂಕ್ರಮಣ ದಿನ ಸ್ವಾಮಿ ಮನೆಯಲ್ಲಿ ಪೂಜೆ ಸಲ್ಲಿಸಿ, ಕಂಬಳಕ್ಕೆ ದಿನ ನಿಗದಿ ಮಾಡಲಾಗುತ್ತದೆ. ಅದೇ ದಿನ ಗುಲ್ವಾಡಿ ದೊಡ್ಮನೆ ಮನೆಯ ಕೋಣಗಳನ್ನು ಗದ್ದೆಗೆ ಇಳಿಸಲಾಗುತ್ತದೆ. ಬಳಿಕ ಮೂರೂವರೆ ಎಕ್ರೆ ವಿಸ್ತೀರ್ಣದ ಗದ್ದೆಯನ್ನು ಕಂಬಳಕ್ಕೆ ಸಿದ್ಧಪಡಿಸಲಾಗುತ್ತದೆ.
ಕಂಬಳದ ದಿನ ಬೆಳಗ್ಗೆ ಸ್ವಾಮಿ ಮನೆ, ನಾಗ ದೇವರಿಗೆ ನಂದಿಕೇಶ್ವರ ಸಪರಿವಾರ ದೈವಗಳಿಗೆ ಪೂಜೆ ಸಲ್ಲಿಸಿ, ಮಧ್ಯಾಹ್ನ ದೊಡ್ಮನೆ ಕೋಣಗಳನ್ನು ಗದ್ದೆಗೆ ಇಳಿಸಲಾಗುತ್ತದೆ. ಬಳಿಕ ಹಗ್ಗ, ಹಲಗೆ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 40 ಜೋಡಿ ಕೋಣಗಳು ಬರುವ ನಿರೀಕ್ಷೆ ಇದೆ. ಕೊನೆಯದಾಗಿ ದೀವಟಿಗೆ ಬೆಳಕಿನಲ್ಲಿ ಮನೆಯ ಕೋಣಗಳನ್ನು ಓಡಿಸುವುದರೊಂದಿಗೆ ಕಂಬಳ ಸಮಾಪನಗೊಳ್ಳುತ್ತದೆ.
ನೂರಾರು ವರ್ಷಗಳಿಂದಲೂ ಈ ಕಂಬಳ ನಡೆಯುತ್ತಿದ್ದರೂ, ಕಾರಣಾಂತರಗಳಿಂದ ಕೆಲವು ವರ್ಷ ಸ್ಥಗಿತಗೊಂಡಿತ್ತು. ಬಳಿಕ ದೊಡ್ಮನೆ ಕುಟುಂ ಬಸ್ಥರಿಗೆ ಕೆಲವು ಸಮಸ್ಯೆಗಳು ಕಾಣಿಸಿ ಕೊಂಡ ಕಾರಣ, ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಪ್ರಕಾರ 2009ರಲ್ಲಿ ಮತ್ತೆ ಕಂಬಳವನ್ನು ಆರಂಭಿಸಲಾಯಿತು. ಅಂದಿನಿಂದ ನಿರಂತರವಾಗಿ ನಡೆದು ಕೊಂಡು ಬರುತ್ತಿದೆ. ದೊಡ್ಮನೆ ಭಾಸ್ಕರ ಶೆಟ್ರಾ ಈಗ ಗುಲ್ವಾಡಿ ದೊಡ್ಮನೆ ಮನೆತನದ ಹಿರಿಯ ರಾಗಿದ್ದಾರೆ ಎನ್ನುತ್ತಾರೆ ಕಂಬಳದ ಉಸ್ತುವಾರಿ ವಹಿಸಿಕೊಂಡಿರುವ ಮಲ್ಯಾಡಿ ಸೀತಾರಾಮ ಶೆಟ್ಟಿ.
ಹೊಸೂರು ಮಲಗದ್ದೆ ಕಂಬಳ
ಕುಂದಾಪುರ: ಶತಮಾನಗಳ ಇತಿಹಾಸ ಇರುವ ಹೊಸೂರು ಮಲಗದ್ದೆ ಮನೆಯ ಸಾಂಪ್ರದಾಯಿಕ ಕಂಬಳವು ಡಿ.10ರಂದು ನಡೆಯಲಿದ್ದು, ಈ ಕಂಬಳದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗಿದೆ.
ಮಲಗದ್ದೆ ಮನೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಕಂಬಳ ನಡೆಯುತ್ತಿದೆ. ಸಂಜೆ 5 ಗಂಟೆಗೆ ಆರಂಭಗೊಳ್ಳುವ ಕಂಬಳವು ರಾತ್ರಿ 12 ಗಂಟೆಯ ವರೆಗೆ ನಡೆಯಲಿದೆ. ಪ್ರತಿವರ್ಷ 25-30 ಜೋಡಿ ಕೋಣಗಳು ಬರುತ್ತಿದ್ದು, ಈ ವರ್ಷ ಹೊನಲು ಬೆಳಕಿನ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಕೋಣಗಳ ನಿರೀಕ್ಷೆಯಿದೆ. ಎಲ್ಲರಿಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ ಹೊಸೂರಿನ ಶ್ರೀ ಮಹಾಗಣಪತಿ ದೇವರಿಗೆ, ಬಳಿಕ ಕಂಬಳಗದ್ದೆಗೆ, ಮುಡೂರ ಹಾçಗುಳಿ, ಶ್ರೀ ಸ್ವಾಮಿ ಪರಿವಾರ ದೈವಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಮುಹೂ ರ್ತದ ಹೋರಿಯಾಗಿ ಸುಳಿ-ಕೆರೆ ಕುಟುಂಬಸ್ಥರ ಕೋಣ ಗಳನ್ನು ಇಳಿಸುವುದರೊಂದಿಗೆ ಕಂಬಳ ಆರಂಭಗೊಳ್ಳು ತ್ತದೆ. ಕೊನೆಯದಾಗಿ ಮಲಗದ್ದೆ ಮನೆಯ ಕೋಣಗಳನ್ನು ಓಡಿಸುವುದರೊಂದಿಗೆ ಕಂಬಳ ಸಂಪನ್ನಗೊಳ್ಳು ತ್ತದೆ. ಹಗ್ಗ ಹಿರಿಯ, ಕಿರಿಯ ವಿಭಾಗ, ಹಲಗೆ ಕಿರಿಯ- ಹಿರಿಯ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಹೊಸೂರು ಕಂಬಳ ಸಮಿತಿಯ ಪ್ರವೀಣ್ ಶೆಟ್ಟಿ ಹೊಸೂರು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.