Chess Grandmaster: ಚೆಸ್ ಜಿಎಂಗೆ ಸೋಲುಣಿಸಿದ 9 ವರ್ಷದ ಆರಿತ್ ಕಪಿಲ್
Team Udayavani, Dec 10, 2024, 12:46 AM IST
ಭುವನೇಶ್ವರ: ಹೊಸದಿಲ್ಲಿಯ 9 ವರ್ಷದ ಬಾಲಕ ಆರಿತ್ ಕಪಿಲ್ ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗೆ ಸೋಲುಣಿಸಿದ ಭಾರತದ ಅತೀ ಕಿರಿಯ ಸಾಧಕನಾಗಿ ಮೂಡಿಬಂದಿದ್ದಾರೆ. ಕೆಐಐಟಿ ಇಂಟರ್‌ನ್ಯಾಶನಲ್ ಒಪನ್ ಚೆಸ್ ಪಂದ್ಯಾವಳಿಯಲ್ಲಿ ಆರಿತ್, ಅಮೆರಿಕದ 66 ವರ್ಷದ ರಸೆಟ್ ಜಿಯಾಟಿನೋವ್ ಅವರನ್ನು ಮಣಿಸಿ ಸುದ್ದಿಯಾದರು.
9 ವರ್ಷ, 2 ತಿಂಗಳು, 18 ದಿನ ವಯಸ್ಸಿನ ಆರಿತ್ ಕಪಿಲ್ “ಕ್ಲಾಸಿಕಲ್ ಟೈಮ್ ಕಂಟ್ರೋಲ್’ನಲ್ಲಿ ಜಿಎಂ ಒಬ್ಬರಿಗೆ ಸೋಲುಣಿಸಿದ ವಿಶ್ವದ 3ನೇ ಕಿರಿಯ ಆಟಗಾರ ನಾಗಿಯೂ ಮೂಡಿಬಂದಿದ್ದಾರೆ.
ದಾಖಲೆ ಭಾರತೀಯ ಮೂಲದ ಸಿಂಗಾಪುರ್ ಆಟಗಾರ ಅಶ್ವತ್ಥ್ ಕೌಶಿಕ್ ಹೆಸರಲ್ಲಿದೆ. ಪೋಲೆಂಡ್‌ನ ಜಾಸೆಕ್ ಸ್ಟುಪ ಅವರನ್ನು ಮಣಿಸುವಾಗ ಕೌಶಿಕ್ ವಯಸ್ಸು ಕೇವಲ 8 ವರ್ಷ, 2 ತಿಂಗಳು ಆಗಿತ್ತು. ದ್ವಿತೀಯ ಸ್ಥಾನ ಸರ್ಬಿಯಾದ ಲಿಯೋನಿಡ್ ಇವಾನೊವಿಕ್ ಅವರದಾಗಿದೆ (8 ವರ್ಷ, 11 ತಿಂಗಳು). ಬಿಳಿ ಕಾಯಿಯಲ್ಲಿ ಆಡತೊಡಗಿ ಆರಿತ್ 63 ನಡೆಗಳಲ್ಲಿ ಪಂದ್ಯವನ್ನು ಗೆದ್ದರು. ಜಿಯಾಟಿನೋವ್ ಜಿಎಂ ಆದರೂ ಈಗಾಗಲೇ ತಮ್ಮ ಚೆಸ್ ಔನ್ನತ್ಯದ ದಿನಗಳನ್ನು ಮುಗಿಸಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.