Syria;ರಾಸಾಯನಿಕ ಶಸ್ತ್ರಾಸ್ತ್ರ ಸ್ಥಳಗಳ ಮೇಲೆ ಇಸ್ರೇಲ್ ದಾಳಿ?
ಬಂಡುಕೋರರಿಗೆ ಇವುಗಳು ಸಿಗುವುದನ್ನು ತಡೆಯಲು ಕ್ರಮ.. ಬಹುದೂರ ಸಾಗಬಲ್ಲ ರಾಕೆಟ್ ಕೇಂದ್ರಗಳು ಧ್ವಂಸ ಸಾಧ್ಯತೆ
Team Udayavani, Dec 10, 2024, 6:58 AM IST
ಜೆರುಸಲೇಂ: ಸಿರಿಯಾದಲ್ಲಿನ ಆಡಳಿತ ಕೊನೆಗೊಂಡು ದೇಶ ಬಂಡುಕೋರರ ವಶವಾಗುತ್ತಿದ್ದಂತೆ, ಸಿರಿಯಾ ಮೇಲೆ ಇಸ್ರೇಲ್ ರಾಕೆಟ್ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ. ಸಿರಿಯಾದಲ್ಲಿ ಸಂಗ್ರಹಿಸಲಾಗಿದೆ ಎನ್ನಲಾದ ರಾಸಾಯನಿಕ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳು ಬಂಡುಕೋರರಿಗೆ ಸಿಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಸಿರಿಯಾದ ಉತ್ತರಾಧಿಕಾರಿ ಅಸಾದ್ ಸೋಲನ್ನು ಇಸ್ರೇಲ್ ಸ್ವಾಗತಿಸಿದ್ದರೂ ಇಸ್ರೇಲ್ ಜನರ ಹಿತದೃಷ್ಟಿಯಿಂದ ಈ ದಾಳಿ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬನ್ನುಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ. ಮೆಜ್ಜಾ ಮಿಲಿಟರಿ ಏರ್‌ಪೋರ್ಟ್ ಬಳಿ ವಾಯು ದಾಳಿ ನಡೆದಿರುವುದನ್ನು ಡಮಾಸ್ಕಸ್‌ನ ಮಾಧ್ಯಮವೊಂದು ಖಚಿತಪಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಸಿರಿಯಾ ಮೇಲೆ ಹಲವು ಬಾರಿ ಇಸ್ರೇಲ್ ವಾಯುದಾಳಿ ನಡೆಸಿತ್ತು.
ಸಿರಿಯಾದಲ್ಲಿ ಶೀಘ್ರ ಸ್ಥಿರತೆ ಬರಲಿ: ಭಾರತ
ಸಿರಿಯಾದಲ್ಲಿ ಬಶರ್ ಅಸಾದ್ ಅವರ ಆಡಳಿತ ಕುಸಿಯುತ್ತಿದ್ದಂತೆ ಭಾರತ ಮತ್ತು ಸಿರಿಯಾ ನಡುವಿನ ಸಂಬಂಧ ಹಾಳಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸಿರಿಯಾದಲ್ಲಿ ಶೀಘ್ರ ರಾಜಕೀಯ ಸ್ಥಿರತೆ ಬರಲಿ ಎಂದು ಭಾರತ ಆಶಿಸಿದೆ. ನೆಹರೂ ಪ್ರಧಾನಿಯಾಗಿದ್ದ ಕಾಲದಲ್ಲೇ ಸಿರಿಯಾ ಹಾಗೂ ಭಾರತದ ನಡುವೆ ರಾಜತಾಂತ್ರಿಕ ಸಂಬಂಧ ಆರಂಭವಾಗಿತ್ತು. ಕಾಶ್ಮೀರದ ವಿಷಯದಲ್ಲಿ ಬಹುತೇಕ ಮುಸ್ಲಿಂ ರಾಷ್ಟ್ರಗಳು ಪಾಕಿಸ್ಥಾನಕ್ಕೆ ಬೆಂಬಲ ನೀಡಿದ್ದರೆ, ಸಿರಿಯಾ ಮಾತ್ರ ಭಾರತದ ಪರವಾಗಿತ್ತು. 370ನೇ ವಿಧಿ ರದ್ದಾದ ಸಮಯದಲ್ಲೂ ಸಹ ಅದು ಭಾರತ ಆಂತರಿಕ ವಿಷಯ ಎಂದು ಸಿರಿಯಾ ಹೇಳಿತ್ತು. ಇದೀಗ ಅಸಾದ್ ಸರಕಾರ ಬಿದ್ದಿರುವ ಕಾರಣ, ಬಂಡುಕೋರರು ಐಸಿಸ್ ಅಥವಾ ಪಾಕಿಸ್ಥಾನಕ್ಕೆ ಬೆಂಬಲ ಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅಸಾದ್‌ರ ಕಾರು ಬಂಡುಕೋರರ ಪಾಲು!
ಸಿರಿಯಾವನ್ನು ವಶಪಡಿಸಿಕೊಂಡಿರುವ ಬಂಡುಕೋರರು ಬಶರ್ ಅಸಾದ್ ಅವರ ಅರಮನೆಯಲ್ಲಿರುವ ಗ್ಯಾರೇಜನ್ನು ಪ್ರವೇಶಿಸಿದ್ದಾರೆ. ಅಲ್ಲಿ ಮರ್ಸಿಡೆಸ್, ಫೋಶಾì, ಆಡಿ ಮತ್ತು ಫೆರಾರಿ ಸೇರಿದಂತೆ ಹಲವು ಐಶಾರಾಮಿ ಕಾರುಗಳ ಸಂಗ್ರಹವಿದ್ದು, ಅವೆಲ್ಲವೂ ಬಂಡುಕೋರರ ಪಾಲಾಗಿದೆ. ಅಧ್ಯಕ್ಷ ಅಸಾದ್ ತನ್ನ ಅಧಿಕಾರವಧಿಯಲ್ಲಿ ಇವುಗಳನ್ನು ಸಂಗ್ರಹಿಸಿದ್ದರು. ಬಂಡುಕೋರರು ಮಾಡಿರುವ ವೀಡಿಯೋ ಈಗ ವೈರಲ್ ಆಗಿದ್ದು, ಬಂಡುಕೋರರು ಇವುಗಳನ್ನು ಡ್ರೈವ್ ಮಾಡುತ್ತಿರುವುದು ರೆಕಾರ್ಡ್ ಆಗಿದೆ.
ಸಿರಿಯಾ ರಾಷ್ಟ್ರಧ್ವಜ ಬದಲು?
ಡಮಾಸ್ಕಸ್: ಸಿರಿಯಾದಲ್ಲಿ ಬಶರ್ ಅಸಾದ್ ಆಡಳಿತ ಕೊನೆಗೊಳ್ಳುತ್ತಿದ್ದಂತೆಯೇ ರಾಜಧಾನಿ ಡಮಾಸ್ಕಸ್‌ನಲ್ಲಿ ಬಂಡುಕೋರ ಗುಂಪು ಹಯಾತ್ ತಹ್ರೀರ್ ಅಲ್-ಶಾಮ್‌ನ ಬಾವುಟಗಳು ರಾರಾಜಿಸುತ್ತಿವೆ. ಈ ಬಂಡುಕೋರರ ಬಾವುಟವೇ ಸಿರಿಯಾದ ಭವಿಷ್ಯದ ಬಾವುಟವಾಗಬಹುದು ಎಂಬ ಚರ್ಚೆಗಳು ಆರಂಭವಾಗಿದೆ. ಈ ಬಾವುಟವನ್ನು 1980ರಿಂದ ರಾಷ್ಟ್ರಧ್ವಜವಾಗಿ ಬಳಸಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.