Editorial: ಭಾರತದ ವಿರುದ್ಧ ಪಾಕ್‌ನ ಕುತಂತ್ರಗಳೆಲ್ಲ ನಿಷ್ಫಲವಾಗಲಿ


Team Udayavani, Dec 10, 2024, 11:11 AM IST

Editorial: ಭಾರತದ ವಿರುದ್ಧ ಪಾಕ್‌ನ ಕುತಂತ್ರಗಳೆಲ್ಲ ನಿಷ್ಫಲವಾಗಲಿ

ಭಾರತದ ವಿರುದ್ಧ ಅಪಾರ ದ್ವೇಷವನ್ನು ಒಡಲಿನಲ್ಲಿ ಇರಿಸಿಕೊಂಡು ಹಲವು ದಶಕಗಳಿಂದ ನಾನಾ ರೀತಿಯ ಛಾಯಾಸಮರದಲ್ಲಿ ತೊಡಗಿರುವ ಪಾಕಿಸ್ತಾನವು ಅದರ ಮುಂದುವರಿಕೆಯಾಗಿ ಈಗ ಹೊಸ ಕುತಂತ್ರ ಅನುಸರಿಸಲು ಆರಂಭಿಸಿರು ವುದು ಪತ್ತೆಯಾಗಿದೆ. ಭಾರತದ ಗಡಿಯೊಳಕ್ಕೆ ಮಾನಸಿಕ ಅಸ್ವಸ್ಥರು, ಮಾದಕ ದ್ರವ್ಯ ವ್ಯಸನಿಗಳಂತೆ ಸೋಗು ಹಾಕಿರುವವರನ್ನು ಕಳುಹಿಸಿ ಅವರನ್ನು ಭಾರತೀಯ ಜೈಲುಗಳಲ್ಲಿ ಇರುವ ಉಗ್ರರಿಗೆ ಸಂದೇಶವಾಹಕರನ್ನಾಗಿ ಉಪಯೋಗಿಸಿಕೊಳ್ಳುವುದು ಪಾಕ್‌ ಬೇಹುಗಾರ ಸಂಸ್ಥೆ ಐಎಸ್‌ಐಯ ಹೊಸ ಹಂಚಿಕೆ. ಅದೃಷ್ಟವಶಾತ್‌ ಇದು ಭಾರತೀಯ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಪಾಕಿಸ್ತಾನದ ಇಂತಹ ಹೀನ ತಂತ್ರಗಳನ್ನೆಲ್ಲ ಬಗ್ಗುಬಡಿದು ಅದಕ್ಕೆ ತಕ್ಕ ಮದ್ದು ಅರೆಯಬೇಕಾಗಿದೆ.

ಈ ಹಿಂದೆಯೂ ನಾನಾ ರೀತಿಯ ಕುತಂತ್ರಗಳನ್ನು ಅನುಸರಿಸಿದ್ದ ಐಎಸ್‌ ಐಯ ಈ ಹೊಸ ಹಂಚಿಕೆಯು ಬಹಳ ನಿರ್ಲಜ್ಜವಾದದ್ದು. ಪಾಕಿಸ್ತಾನದಿಂದ ಮಾದಕ ದ್ರವ್ಯ ವ್ಯಸನಿಗಳಂತೆ, ಮಾನಸಿಕ ಅಸ್ವಸ್ಥರಂತೆ ನಟಿಸುವವರನ್ನು ಭಾರತದ ಗಡಿಯೊಳಕ್ಕೆ ಕಳುಹಿಸುವುದು. ಇಲ್ಲಿ ಅವರು ಬೇಕೆಂದೇ ಭದ್ರತಾ ಪಡೆಗಳಿಗೆ ಸಿಕ್ಕಿ ಬಿದ್ದು ಜೈಲು ಸೇರುವುದು ಹಾಗೂ ಅಲ್ಲಿ ತಮ್ಮ ಕುತಂತ್ರ ತೋರುವುದು ಈ ಯೋಜನೆಯ ಒಟ್ಟ ಉದ್ದೇಶ. ಆದರೆ ನಿಜಕ್ಕೂ ಅವರು ಮಾನಸಿಕ ಅಸ್ವಸ್ಥರು ಅಥವಾ ಮಾದಕ ದ್ರವ್ಯ ವ್ಯಸನಿಗಳು ಆಗಿರುವುದಿಲ್ಲ; ಬದಲಾಗಿ ಐಎಸ್‌ಐಯ ಸಂದೇಶವಾಹಕರಾಗಿರುತ್ತಾರೆ. ಅವರು ತಾವು ಕಳುಹಿಸಲ್ಪಟ್ಟ ಜೈಲಿನಲ್ಲಿ ಇರುವ ಉಗ್ರರಿಗೆ ಸಂದೇಶ ರವಾನಿಸುವುದು ಐಎಸ್‌ಐಯ ಕಾರ್ಯವಿಧಾನ. ಈ ಕಾರ್ಯತಂತ್ರವನ್ನು ಗಮನಿಸಿದರೇನೇ ಪಾಕಿಸ್ತಾನವು ಎಷ್ಟು ನಿಕೃಷ್ಟ ಮಟ್ಟದ ಚಿಂತನೆಗಳನ್ನು ಹೊಂದಿದೆ ಎಂಬುದು ಅರಿವಾಗುತ್ತದೆ.

ಪಾಕ್‌ ಈ ಹಿಂದೆ ಕಾರ್ಗಿಲ್‌ ಸಹಿತ ನೇರ ಯುದ್ಧಗಳಲ್ಲಿ ಸೋಲು ಅನುಭವಿಸಿತ್ತು. ಹಲವು ದಶಕಗಳಿಂದ ಉಗ್ರವಾದದ ಮೂಲಕ ಛಾಯಾಸಮರವನ್ನು ಭಾರತದ ವಿರುದ್ಧ ಪಾಕಿಸ್ತಾನವು ಹೂಡಿದೆ. ಇದರ ಭಾಗವಾಗಿ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ರವಾನಿಸುವುದು, ಮಾದಕ ದ್ರವ್ಯ ರವಾನೆ, ಮಾದಕ ದ್ರವ್ಯ ಜಾಲ, ಬೇರೆ ಬೇರೆ ದಾರಿಯಲ್ಲಿ ಉಗ್ರರನ್ನು ಕಳುಹಿಸುವುದು… ಹೀಗೆ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವುದೇ ಪಾಕಿಸ್ತಾನದ ಅಸ್ತಿತ್ವದ ಮೂಲ ಎಂಬಂತೆ ತೋರುತ್ತಿದೆ. ಇದರ ಭಾಗವಾಗಿಯೇ ಈ “ಮಾನಸಿಕ ಅಸ್ವಸ್ಥ’ ಅಸ್ತ್ರವನ್ನು ಅದು ಪ್ರಯೋಗಿಸಿದೆ.

ಜಗತ್ತಿನ ಭೌಗೋಳಿಕ-ರಾಜಕೀಯ ಚಿತ್ರಣಗಳು ಅಪಾರ ವೇಗದಲ್ಲಿ ಬದಲಾಗುತ್ತಿದ್ದು, ಪಾಕಿಸ್ತಾನದ ಪ್ರತಿಯೊಂದು ಹೆಜ್ಜೆಯ ಮೇಲೆಯೂ ಭಾರತ ಹದ್ದಿನ ಕಣ್ಣು ಇರಿಸಬೇಕಾಗಿದೆ. ಭಾರತದ ಸುತ್ತಮುತ್ತ, ಮಧ್ಯಪ್ರಾಚ್ಯ, ಪಶ್ಚಿಮ ಏಷ್ಯಾ ಭಾಗ ಸಹಿತ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಅರಾಜಕತೆ, ಬಂಡಾಯ, ಅಸ್ಥಿರತೆ ತಾಂಡವವಾಡುತ್ತಿದೆ. ಇತ್ತೀಚೆಗೆ ನಡೆದ ಸಿರಿಯಾದಲ್ಲಿನ ಬಂಡಾಯ ಜ್ವಲಂತ ಉದಾಹರಣೆ. ಭಾರತದಲ್ಲಿ ಕೂಡ ಅರಾಜಕತೆಯನ್ನು ಸೃಷ್ಟಿಸುವ, ಅದು ಉಂಟಾಗುವುದನ್ನು ಕಾಯುತ್ತಿರುವ ದುರುಳರು ಒಳಗೂ ಹೊರಗೂ ಇದ್ದಾರೆ.

ಈ ಹಿನ್ನೆಲೆಯಲ್ಲಿ ಭಾರತ ಇಮ್ಮಡಿ ಎಚ್ಚರದಿಂದ ಇರಬೇಕು. ಈ ಹಿಂದಿನ ಘಟನೆಗಳಂತೆ ಅದೃಷ್ಟವಶಾತ್‌ ಪಾಕಿಸ್ತಾನದ ಈ ಹೊಸ ಕಾರ್ಯತಂತ್ರವನ್ನು ಕೂಡ ಭದ್ರತಾ ಪಡೆಗಳು ಕ್ಷಿಪ್ರವಾಗಿ ಪತ್ತೆಹಚ್ಚಿದ್ದಾರೆ.

ಪಾಕಿಸ್ತಾನದ ಕುತಂತ್ರಗಳು ಏನೇ ಇದ್ದರೂ ಭಾರತ ಅದನ್ನು ಯಶಸ್ವಿಯಾಗಿ ಎದುರಿಸಿ ನಿಷ್ಫಲಗೊಳಿಸಬೇಕು. ಈ ಕಾರ್ಯದಲ್ಲಿ ಭದ್ರತಾ ಪಡೆಗಳು, ಬೇಹುಗಾರರ ಜತೆಗೆ ನಾಗರಿಕರು ಕೂಡ ಕೈಜೋಡಿಸಿದಾಗ ದೇಶ ಸುಭದ್ರವಾಗಿರಲು ಸಾಧ್ಯ. ಪಾಕ್‌ ಕಡೆಯಿಂದ ನಡೆಯುವ ಯಾವುದೇ ಬೆಳವಣಿಗೆಯನ್ನು ಸಂಶಯ ದೃಷ್ಟಿಯಿಂದಲೇ ಗಮನಿಸುತ್ತ ಕಟ್ಟೆಚ್ಚರದಲ್ಲಿ ಇದ್ದರೆ ಆ ದೇಶದ ಕೈ ಮೇಲಾಗದಂತೆ ನೋಡಿಕೊಳ್ಳಲು ಸಾಧ್ಯ.

ಟಾಪ್ ನ್ಯೂಸ್

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

1(1

Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.