Women: ಹೆಣ್ಣು ಅಬಲೆಯಲ್ಲ


Team Udayavani, Dec 10, 2024, 3:18 PM IST

3-uv-fusion

ಹೆಣ್ಣು ಮಗು ಕಾಣೆಯಾಗುತ್ತಿದೆ. ಆಕೆ ಹೊಟ್ಟೆಯಲ್ಲಿರುವಾಗಲೇ ತನ್ನ ಹಕ್ಕುಗಳಿಂದ ವಂಚಿತಳಾಗುತ್ತಿದ್ದಾಳೆ. ಆದರೆ ವಿದ್ಯಾವಂತ ಪ್ರಜೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡುತ್ತಲಿದೆ. ಬೆಳ್ಳಿ ಕಾಲ್ಗೆಜ್ಜೆ ದನಿಯಿಂದ ಹಿಡಿದು ಮನೆಯನ್ನೇ ಸಂಗೀತಮಯವಾಗಿ ಮಾಡುವ, ಲಲ್ಲೆ ಮಾತುಗಳಿಂದ ಕಾವ್ಯಮಯವಾಗಿ ಮಾಡುವ ಹೆಣ್ಣು ಮಗು ಈಗ ಎಲ್ಲ ತಾಯಿ- ತಂದೆಯ ಕನಸೂ ಆಗುತ್ತಲಿದೆ. ಅದಕ್ಕೆ ಕಾರಣವೂ ಇದೆ.

ಹೆಣ್ಣು ಅಬಲೆಯೆಂದೇ ಎಲ್ಲರೂ ಎಣಿಸುತ್ತಾರೆ. ಆದರೆ ಆ ಕೋಮಲತೆಯೇ ಅವಳ ಶಕ್ತಿ. ಗಂಡು ಶಕ್ತಿವಂತನೇ ಇದ್ದರೂ ಆತನನ್ನು ತನ್ನ ಸೂಕ್ಷ್ಮ ಸ್ವಭಾವದಿಂದ, ಒಳ್ಳೆಯ ವಿಚಾರಗಳಿಂದ, ಸಮಯ ಪ್ರಜ್ಞೆಯಿಂದ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವವಳೇ ಹೆಣ್ಣು. ಆಕೆ ತನ್ನ ಪ್ರೇಮಮಯ ಸ್ವಭಾವದಿಂದ ಮನೆಯ ಜನರ ಹೃದಯವನ್ನು ಗೆಲ್ಲುತ್ತಾಳೆ. ಎಲ್ಲಿಂದಲೋ ಬಂದವಳಾದರೂ ಅವರ ಸುಖ-ದುಃಖಗಳನ್ನು ತನ್ನದೆಂದೇ ತಿಳಿದು ಪಾಲ್ಗೊಳ್ಳುತ್ತಾಳೆ.

ತಾನು ವಿವಾಹವಾಗಿ ಬಂದಿರುವುದು ಕೇವಲ ಪತಿಯೊಡನೆ ಸ್ನೇಹ-ಬಾಂಧವ್ಯ ಬೆಳೆಸಲಿಕ್ಕಾಗಿ ಅಲ್ಲ, ಆ ಮನೆಯ ಜನರೊಡನೆಯೂ ಕೂಡ. ತನ್ನ ನಡವಳಿಕೆ ಸ್ನೇಹಮಯವಾಗಿಯೇ ಇರಬೇಕು ಎಂಬ ತಿಳುವಳಿಕೆ ಅವಳಲ್ಲಿರುವುದೇ ಇದಕ್ಕೆ ಕಾರಣ. ಗಂಡಿಗೆ ತಾಯಿಯಾಗಿ, ಹೆಂಡತಿಯಾಗಿ, ಸೋದರಿಯಾಗಿ, ಮಗಳಾಗಿ ಆತನ ಪ್ರೇರಣಾ ಶಕ್ತಿಯಾಗಿ ನಿಲ್ಲುವ ಈ ಸ್ವಭಾವ ಅವಳಲ್ಲೇನು ಹುಟ್ಟಿನಿಂದಲೇ ಬಂದಿರುವುದಿಲ್ಲ. ಈ ಎಲ್ಲ ಗುಣಗಳ ಸಾಕಾರ ಮೂರ್ತಿಯಾಗಿ ಬೆಳೆಸುವ ತಾಯಿ-ತಂದೆ, ಸುತ್ತಲಿನ ಪರಿಸರದ ಪಾತ್ರವೂ ಇರುವುದಾದರು ತಾಯಿಯ ಪಾತ್ರ ಹಿರಿದು.

ಮಗುವೊಂದು ಮೆತ್ತನೆಯ ಮೇಣವಿದ್ದಂತೆ. ಅದನ್ನು ಸುಂದರವಾಗಿ ರೂಪಿಸುವ ಜಾಣ್ಮೆ ತಾಯಿಯಲ್ಲಿದ್ದಾಗ ಅದೊಂದು ಅದ್ಭುತ ಸೃಷ್ಟಿಯಾಗಿ ಮಾರ್ಪಡುವುದರಲ್ಲಿ ಸಂದೇಹವೇ ಇಲ್ಲ. ಹೆಣ್ಣಿನ ಪರಿಕಲ್ಪನೆ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿದೆ. ಒಂದು ಕಾಲದಲ್ಲಿ ಆಕೆ ಕುಟುಂಬದ ಕಣ್ಣಾಗಿದ್ದರೆ ಇಂದು ಇಡೀ ಸಮಾಜದ ಕಣ್ಣಾಗಿ ಬೆಳೆದಿದ್ದಾಳೆ. ಆಕೆಯ ಕಾರ್ಯಕ್ಷೇತ್ರ ಮನೆಯ ಬಾಗಿಲನ್ನು ದಾಟಿದೆ. ನಾಗರೀಕತೆ ಬದಲಾದಂತೆ, ಆಧುನಿಕ ವಿಚಾರಧಾರೆಯ ಗಾಳಿ ಅವಳ ಅಸ್ತಿತ್ವದ ಬೇರನ್ನೂ ಬದಲಾಗಿಸಿದೆ. ಈಗ ಆಕೆ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದಿದ್ದಾಳೆ.

ಹಾಗೆಂದು ಅವಳು ಯಾವ ಕಾಲಕ್ಕೂ ತನ್ನತನವನ್ನು ಮಾತ್ರ ಕಳೆದುಕೊಳ್ಳಬೇಕಾಗಿಲ್ಲ. ಗಂಡಿಗೆ ತಾನು ಸಮಾನಳಾಗಿರಬೇಕೆಂಬ ಛಲ ಅವಳಲ್ಲಿ ಬರುವುದಕ್ಕೆ ಕಾರಣವೇ ಇಲ್ಲ. ಗಂಡು ಹೆಣ್ಣುಗಳ ದೈಹಿಕ ಸಾಮರ್ಥ್ಯವು ಭಿನ್ನ. ನಾಗರಿಕತೆ ಸೋಗಿನಲ್ಲಿ ಆಧುನಿಕತೆ ಹೆಸರಿನಲ್ಲಿ ಈಗ ಸ್ವಾತಂತ್ರ್ಯವು ತನ್ನ ಎಲ್ಲೆ ಮೀರಿ ಸ್ವಚ್ಛಂದತೆಯತ್ತ ವಾಲುತ್ತಿರುವುದು ಕೂಡ ಈ ತಪ್ಪು ಕಲ್ಪನೆಯಿಂದಲೇ!

ಮೈ ಅಂದ ಚಂದವನ್ನು ಎತ್ತಿ ತೋರಿಸುವ ಬಟ್ಟೆಗಳು, ಡಿಸ್ಕೋ ಕ್ಲಬ್‌ಗಳಲ್ಲಿ ತಡ ರಾತ್ರಿವರೆಗೆ ಸ್ವಚ್ಚಂದ ಕುಣಿತ. ಗಂಡಿಗೆ ತಾನೇನು ಕಡಿಮೆ ಇಲ್ಲ ಎಂಬ ಭಾವವನ್ನು ತೋರುವಂತೆ ಕುಡಿತ ಸಿಗರೇಟು ಡ್ರಗ್‌ ಸೇವನೆ ಲೈಂಗಿಕ ಸ್ವಾತಂತ್ರ್ಯ ಇವು ಯಾರನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವಿಲ್ಲ. ಗಂಡಿಗೆ ಹೆಗಲೆಣೆಯಾಗಿ ತನ್ನನ್ನು ಸಮರ್ಥಿಸಿಕೊಳ್ಳಲು ಹೆಣ್ಣಿಗೆ ಅನೇಕ ಕ್ಷೇತ್ರಗಳಿವೆ.

ಯಾವುದೇ ಕೆಲಸವಿರಲಿ ತನ್ನಿಂದಾಗದ್ದು ಯಾವುದೂ ಇಲ್ಲವೆಂದು ಹೆಣ್ಣು ಸಾಬೀತುಗೊಳಿಸಿದ್ದಾಳೆ. ಮಹಿಳೆಯು ಒಬ್ಬ ಪ್ರಜ್ಞಾವಂತ ಪ್ರಜೆಯಾಗಿ ರೂಪುಗೊಳ್ಳಬೇಕಾದರೆ ತಂದೆ-ತಾಯಿಯರ ಪಾತ್ರ ಮಹತ್ತರವಾದುದು. ಆಕೆಯಲ್ಲಿ ಸದ್ಗುಣಗಳನ್ನು, ಪರಿಸ್ಥಿತಿಯನ್ನು ಎದುರಿಸಬಲ್ಲ ಎದೆಗಾರಿಕೆಯನ್ನು ತುಂಬಿದಾಗಲೇ ಇವೆಲ್ಲ ಸಾಧ್ಯ. ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ಮಗಳು ಡಾಕ್ಟರೋ, ಎಂಜಿನಿಯರೋ ಆಗಬಹುದು. ಹಣ ಗಳಿಸಬಹುದು. ಆದರೆ ಅದರ ಜತೆಗೆ ಮಾನವೀಯ ಗುಣಗಳಾದ ಮಮತೆ, ಸಹನೆ, ತ್ಯಾಗ, ಪ್ರೀತಿ, ದಯೆ ಮುಂತಾದವುಗಳಿಂದ ಕೂಡಿದ ಒಳ್ಳೆಯ ಗೃಹಿಣಿ, ಒಳ್ಳೆಯ ಹೆಂಡತಿ, ಒಳ್ಳೆಯ ಸ್ನೇಹಿತೆ, ಒಳ್ಳೆಯ ಮಾತೆ ಆಗಬೇಕಾದರೆ ತಂದೆ-ತಾಯಿಯರು ತಾವೂ ಸುಸಂಸ್ಕೃತರಾಗಿದ್ದು ಆಕೆಗೆ ಬಾಲ್ಯದಿಂದಲೇ ಸಂಸ್ಕಾರಯುತ ಶಿಕ್ಷಣ ಕೊಟ್ಟಾಗಲೇ ಸಾಧ್ಯ.

ರುಷೋ ಎಂಬ ಶಿಕ್ಷಣ ಶಾಸ್ತ್ರಜ್ಞನೇ ಹೇಳಿದಂತೆ ನಮ್ಮ ಮಕ್ಕಳಿಗೆ ನಿಷೇಧಾತ್ಮಕ ಶಿಕ್ಷಣದ ಅವಶ್ಯಕತೆಯಿಲ್ಲ. ಅವರು ಜೀವನದ ಅನುಭವಗಳಿಂದಲೇ ಪಾಠ ಕಲಿಯಬೇಕು. ಜೀವನದ ಕಷ್ಟ- ನಷ್ಟಗಳನ್ನು, ಎಡರು-ತೊಡರುಗಳನ್ನು ಎದುರಿಸುವ ಎದೆಗಾರಿಕೆ ಅವರಲ್ಲಿ ಈ ಅನುಭವಗಳಿಂದಲೇ ಬರಬೇಕು. ಮಕ್ಕಳಿಗೆ ಒಳ್ಳೆಯ ಅನುಭವಗಳನ್ನು ಒದಗಿಸಬೇಕಾದದ್ದು ಮಾತ್ರ ತಂದೆ-ತಾಯಿಯರ ಕರ್ತವ್ಯ.

 ಸೌಮ್ಯಾ ಕಾಗಲ್‌

ಬಾಗಲಕೋಟೆ

ಟಾಪ್ ನ್ಯೂಸ್

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

16-

Shelter: ಸೂರು ಹುಡುಕಲೆಂದು ಹೊರಟೆ

13-frndshp

Friendship: ಸ್ನೇಹವೇ ಸಂಪತ್ತು

12-uv-fusion

UV Fusion: ತೆಪ್ಪ ದ್ವೀಪದೂರಿಗೊಂದು ಸಂಪರ್ಕಸೇತು

11-uv-fusion

Friendship: ವಿಶ್ವದ ಸುಂದರ ಸಂಬಂಧ ಗೆಳೆತನ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.