Moode: ಮೂಡೆ ಎಂಬ ಬಾಯಿ ಚಪ್ಪರಿಸುವ ತಿಂಡಿ


Team Udayavani, Dec 10, 2024, 5:51 PM IST

8-moode

ಅದೊಂದು ನಗರದ ಪ್ರತಿಷ್ಠಿತ ಪೇಟೆ, ಟೆಂಪಲ್‌ ಸ್ಕ್ವೇರ್‌ ಎಂದೇ ಕರೆಸಿಕೊಳ್ಳುವ ಮಂಗಳೂರಿನ ರಥಬೀದಿ. ದೇವಸ್ಥಾನ, ಪುಸ್ತಕದ ಮಳಿಗೆ, ಕರಿದ ತಿನಿಸುಗಳು, ಹೂವಿನ ಮಾರುಕಟ್ಟೆ ಇವೆಲ್ಲವೂ ಈ ರಸ್ತೆಗೆ ಶೋಭೆಯನ್ನು ನೀಡುವ ಅಂಗಡಿಗಳು. ಇಲ್ಲಿ ವ್ಯಾಪಾರಕ್ಕೆ ಇಳಿದರೆ ಸಾಕು ಅಂದಿನ ಜೀವನ ಸಾಗಿಸಲು ಬಹು ಸುಲಭ. ಒಬ್ಬರು ಕುಳಿತು ವ್ಯಾಪಾರ ಮಾಡಿದರೆ, ಇನ್ನೊಬ್ಬರು ಅವರಿಗೆ ಅಲ್ಲೇ ಕುಳಿತು ಸಹಕರಿಸುತ್ತಾರೆ. ತಿಂಡಿಗಳೆಂದಾಗ ವಿಶೇಷವಾಗಿ ಇಲ್ಲಿ ನೆನಪಾಗುವುದು ಪ್ರಸಿದ್ದಿ ಪಡೆದ ಇಲ್ಲಿಯ ಮೂಡೆ.
ತುಳುನಾಡಿನಲ್ಲಿ ಅಷ್ಟಮಿ, ಚೌತಿ, ಈದ್‌, ತೆನೆ ಹಬ್ಬ ಬಂತೆಂದರೆ ಸಾಕು ಈ ಮೂಡೆ-ಕೊಟ್ಟೆಗಳಿಗೆ ಎಲ್ಲಿಲ್ಲದ ಬೇಡಿಕೆ. ಕೆಲವರು ದುಡ್ಡು ಕೊಟ್ಟು ತರಲು ಕಾತುರರಾಗಿದ್ದರೆ, ಇನ್ನು ಕೆಲವರು ಅದನ್ನು ತಯಾರಿಸಲು ಕಾತುರರಾಗಿರುತ್ತಾರೆ.

ಇಡ್ಲಿಯ ಹಿಟ್ಟು ಮೂಡೆ ತಯಾರಿಕೆಗೂ ಬಳಸುವಂತಹದ್ದು. ಅದರ ಜತೆಗೆ ತರಕಾರಿ ಸಾಂಬಾರು, ಚಿಕನ್‌ ಗ್ರೇವಿ ಅಥವಾ ತೆಂಗಿನಕಾಯಿಯ ಹಾಲು ಹಾಗೂ ಬೆಲ್ಲ ಮಿಶ್ರಿತ ಹಾಲಿನಲ್ಲಿ ತಿನ್ನುವ ರುಚಿ ಯಾವ ಇಡ್ಲಿಯಲ್ಲೂ ಸಿಗಲು ಸಾಧ್ಯವಿಲ್ಲ. ಕಾಡು ಪ್ರದೇಶದಲ್ಲಿ ಸಿಗುವ ಕೇದಗೆ(ಚಾಪೆ ಒಲಿ) ಗಿಡದ ಎಲೆಗಳಿಂದ ಈ ಮೂಡೆಗಳು ತಯಾರಾಗುತ್ತವೆ. ಮೂಡೆಗಳ ತಯಾರಿಕೆಯಲ್ಲಿ ಹಲವಾರು ಪ್ರಕ್ರಿಯೆಗಳಿವೆ. ಮೊದಲು ಎಲೆಗಳನ್ನು ಅವುಗಳ ಮುಳ್ಳುಗಳಿಂದ ಬೇರ್ಪಡಿಸಬೇಕು, ಅನಂತರ ಬೆಂಕಿಯಲ್ಲಿ ಎಲೆಗಳನ್ನು ಬಾಡಿಸಿ, ಸುತ್ತು ತಿರುಗಿಸಿ ಮೂಡೆಯ ಆಕಾರವನ್ನು ನೀಡುತ್ತಾರೆ.

ಹೀಗೆ ತಯಾರಾದ ಮೂಡೆ ಮಾಡಲು ಬೇಕಾದ ಕೊಟ್ಟೆಗಳು ಮಾರುಕಟ್ಟೆಯಲ್ಲಿ ನಲ್ವತ್ತರಿಂದ ನೂರು ರೂಪಾಯಿಯ ವರೆಗೂ ಮಾರಾಟ ಮಾಡಲಾಗುತ್ತದೆ. ಹಬ್ಬಗಳ ಹಾಗೂ ಬೇಡಿಕೆಗೆ ಅನುಸಾರವಾಗಿ ಇವುಗಳ ಬೆಲೆಯೂ ಬದಲಾವಣೆಯಾಗುತ್ತದೆ.

ಮೃದುವಾಗಿರುವ ಮೂಡೆಗಳನ್ನು ತಿನ್ನುವ ಖುಷಿಯೇ ಬೇರೆ. ಎರಡು ಮೂರು ದಿನಗಳವರೆಗೂ ಹಬೆಯಲ್ಲಿ ಬೇಯಿಸಿ ತಿಂದರೂ ಇದರ ರುಚಿ ಬದಲಾಗುವುದಿಲ್ಲ, ರುಚಿ ದುಪ್ಪಟ್ಟಾದಂತೆ ಭಾಸವಾಗುತ್ತದೆ.

ಮಳೆಗಾಲದಲ್ಲಿ ಈ ಎಲೆಗಳನ್ನು ಆಯ್ದುಕೊಳ್ಳುವುದು ಅಸಾಧ್ಯ ಹಾಗೂ ಎಲೆಯಲ್ಲಿರುವ ತೇವಾಂಶದಿಂದಾಗಿ ಇದನ್ನು ಸರಿಯಾದ ರೀತಿಯಲ್ಲಿ ಬಾಡಿಸುವುದು ದೊಡ್ಡ ಸವಾಲು ಎಂದು ವ್ಯಾಪಾರಿಗಳು ಹೇಳುತ್ತಾರೆ.

ಹಾಗೆಯೇ ಹಬ್ಬ ಹರಿ ದಿನಗಳಲ್ಲಿ ಹಳ್ಳಿಯ ಅಜ್ಜಿಯರು ಹೆಂಗಸರು ಕೇದಗೆ(ಚಾಪೆ ಒಲಿ) ಎಲೆಗಳನ್ನು ಹುಡುಕಲು ಕಾಡಿಗೆ ಹೋಗುತ್ತಾರೆ. ಸುತ್ತಮುತ್ತಲಿನ ಮನೆಗಳ ಹೆಂಗಸರು ಸೇರಿ ಒಬ್ಬರ ಅಂಗಳದಲ್ಲಿ ಕುಳಿತು ತಮ್ಮ ಕಥೆಗಳನ್ನು ಹಂಚಿಕೊಳ್ಳುತ್ತಾ ಮೂಡೆಗಳನ್ನು ತಯಾರಿಸುತ್ತಾರೆ. ಹಳ್ಳಿಯಲ್ಲಿನ ಆ ದಿನಗಳು ಬಹಳ ಅಮೂಲ್ಯ ಹಾಗೂ ಸುಂದರವಾಗಿದ್ದವು. ಅದು ಸಮುದಾಯದ ಬಾಂಧವ್ಯವನ್ನು ಬಲಪಡಿಸಿದ ದಿನಗಳು ಮತ್ತು ಹಂಚಿದ ಅನುಭವಗಳು ಸಂಬಂಧಗಳನ್ನು ಗಟ್ಟಿ ಮಾಡಿದೆ ಎಂದರೂ ತಪ್ಪಾಗಲಾರದು.

ಆದರೆ ಇತ್ತೀಚಿನ ದಿನಗಳಲ್ಲಿ ಜನರು ಸಿದ್ಧ ಉತ್ಪನ್ನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಸಾಂಪ್ರದಾಯಿಕ ಆಚರಣೆಗಳಲ್ಲಿನ ಸಂತೋಷ ಮತ್ತು ಅಲ್ಲಿ ಬೆಸೆಯುತ್ತಿದ್ದ ಸಂಬಂಧ ಸಂಪರ್ಕಗಳನ್ನು ಈಗಿನ ಜನರು ಮರೆಯುತ್ತಿದ್ದಾರೆ.

 ಸನ ಶೇಖ್‌ ಮುಬಿನ್‌

ಸಂತ ಅಲೋಶಿಯಸ್‌ ಪರಿಗಣಿತ ವಿವಿ,

ಮಂಗಳೂರು

ಟಾಪ್ ನ್ಯೂಸ್

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

16-

Shelter: ಸೂರು ಹುಡುಕಲೆಂದು ಹೊರಟೆ

13-frndshp

Friendship: ಸ್ನೇಹವೇ ಸಂಪತ್ತು

12-uv-fusion

UV Fusion: ತೆಪ್ಪ ದ್ವೀಪದೂರಿಗೊಂದು ಸಂಪರ್ಕಸೇತು

11-uv-fusion

Friendship: ವಿಶ್ವದ ಸುಂದರ ಸಂಬಂಧ ಗೆಳೆತನ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Mangaluru: ಪಿಲಿಕುಳ ಆಯುಕ್ತರ ಅಧಿಕಾರ ಸ್ವೀಕಾರ

Mangaluru: ಪಿಲಿಕುಳ ಆಯುಕ್ತರ ಅಧಿಕಾರ ಸ್ವೀಕಾರ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.