Counseling: ಆಪ್ತ ಸಮಾಲೋಚನೆ – ಎಚ್‌ಐವಿ ಸೋಂಕಿತರ ಆಶಾಕಿರಣ


Team Udayavani, Dec 10, 2024, 6:03 PM IST

9-uv-fusion

ಒಬ್ಬ ವ್ಯಕ್ತಿ ಜೀವನದಲ್ಲಿ ಹತಾಶನಾದಾಗ, ಇನ್ನೊಬ್ಬರಿಂದ ತಿರಸ್ಕೃತನಾದಾಗ, ಮಾರಣಾಂತಿಕ ಕಾಯಿಲೆಗೆ ತುತ್ತಾದಾಗ ಖನ್ನತೆಗೆ ಒಳಗಾಗುತ್ತಾನೆ. ಆಗ ತಾನು ಒಬ್ಬಂಟಿ ಎಂಬ ಭಾವನೆ ಬಿದ್ದು ಆತ್ಮಹತ್ಯೆಯತ್ತ ಆತನ ಮನಸ್ಸು ವಾಲುತ್ತದೆ. ಇಂಥ ಸಂದರ್ಭಗಳಲ್ಲಿ ಆತನ ಅಳಲನ್ನು ಕೇಳುವಂತಹ ಒಬ್ಬ ವ್ಯಕ್ತಿಯ ಅಗತ್ಯವಿರುತ್ತದೆ. ಅವನ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಆ ಸಮಸ್ಯೆಯಿಂದ ಆತನನ್ನು ಹೊರ ತರುವಲ್ಲಿ ಇನ್ನೊಬ್ಬರ ನೆರವು ಬೇಕಿರುತ್ತದೆ.

ಎಚ್‌ಐವಿ ಸೋಂಕಿತ ವ್ಯಕ್ತಿ ಕೂಡ ಸಾಮಾನ್ಯವಾಗಿ ಇಂಥದೇ ಸಂದರ್ಭಗಳನ್ನು ಎದುರಿಸುತ್ತಾನೆ. ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ ಎನ್ನುವಂತೆ ಎಚ್‌ಐವಿ ಸೋಂಕಿತ ವ್ಯಕ್ತಿ ತನ್ನ ಕುಟುಂಬದ, ಸಮಾಜದ ದೃಷ್ಠಿಯಲ್ಲಿ ಕಳಂಕಿತನಾಗುತ್ತಾನೆ. ಎಲ್ಲರ ಅವಗಣನೆಗೆ ಒಳಗಾಗುತ್ತಾನೆ. ಅವರಲ್ಲಿ ಮನೆ ಮಾಡಿದ ಭಯವನ್ನು ಹೋಗಲಾಡಿಸಿ, ಅವರಲ್ಲಿ ಜೀವನೋತ್ಸಾಹವನ್ನು ತುಂಬುವ ಆವಶ್ಯಕತೆ ಇರುತ್ತದೆ. ಇವರನ್ನು ಸಮಾಜ ಮುಖೀಗಳನ್ನಾಗಿ ಮಾಡುವಲ್ಲಿ “ಆಪ್ತಸಮಾಲೋಚನೆ’ಯು ನದಿಯಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿ ಸಿಕ್ಕಂತಯೇ ಸರಿ.

ಆಪ್ತಸಮಾಲೋಚನೆಯನ್ನು ಗೌಪ್ಯವಾದ ಮಾತುಕತೆ ಅಥವಾ ಸಂವಾದ ಎನ್ನಬಹುದು. ಇಲ್ಲಿ ಸೋಂಕಿತರು ತನ್ನ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಅವಕಾಶವಿರುತ್ತದೆ. ಆತನ ವೈಯಕ್ತಿಕ ವಿಷಯಗಳನ್ನು ಗೌಪ್ಯವಾಗಿಡುವ ಭರವಸೆಯನ್ನು ಇಲ್ಲಿ ಕೊಡಲಾಗುತ್ತದೆ. ಮಾನಸಿಕ ಬೆಂಬಲವನ್ನು ನೀಡುವುದರ ಜತೆಗೆ ಆತ ತನ್ನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಲಹೆ, ಸೂಚನೆ ನೀಡಲಾಗುತ್ತದೆ.

ಎಚ್‌ಐವಿ ಅಥವಾ ಏಡ್ಸ್‌ ಇದು ವ್ಯಕ್ತಿಯ ನಡವಳಿಕೆಗೆ ಸಂಬಂಧಪಟ್ಟ ಕಾಯಿಲೆಯಾಗಿದೆ. ಮನೋನಿಗ್ರಹ, ಸಂಯಮದ ಕೊರತೆಯಿಂದ ಕೆಲವರು ಸೋಂಕನ್ನು ಪಡೆದುಕೊಂಡರೆ, ಇನ್ನು ಕೆಲವರು ಅರಿವಿನ ಕೊರತೆಯಿಂದ ಪರೀಕ್ಷೆಗೆ ಒಳಪಡದ ರಕ್ತವನ್ನು ತೆಗೆದುಕೊಳ್ಳವುದರಿಂದ, ಸಂಸ್ಕರಿಸದ ಸೂಜಿಗಳಿಂದ ಇಲ್ಲವೆ ಸೋಂಕಿತ ಸಂಗಾತಿಗಳಿಂದ ಸೋಂಕಿಗೆ ಓಳಗಾಗುತ್ತಾರೆ. ಈ ವೈರಸ್‌ ದೇಹವನ್ನು ಪ್ರವೇಶಿಸಿದ ಅನಂತರ ಹಲವಾರು ದಿನಗಳವರೆಗೂ ವ್ಯಕ್ತಿಗೆ ಸೋಂಕಿಗೊಳಗಾಗಿರುವ ಅರಿವೇ ಇರುವುದಿಲ್ಲ.

ಚಿಕ್ಕ ಪುಟ್ಟ ತೊಂದರೆಗಳಿಗೆ ಚಿಕಿತ್ಸೆ ಪಡೆಯಲು ಆತ ಆಸ್ಪತ್ರೆಗೆ ಹೋದಾಗ ವೈದ್ಯರು ಹಲವಾರು ಪರೀಕ್ಷೆಗಳ ಜತೆಗೆ ಎಚ್‌ಐವಿ ಪರೀಕ್ಷೆಯನ್ನೂ ಸೂಚಿಸಿದಾಗ ಅಕಸ್ಮಾತ್ತಾಗಿ ಆತ ತನ್ನ ಎಚ್‌ಐವಿ ಸೋಂಕಿಗೆ ಒಳಗಾಗಿರುವುದನ್ನು ಅರಿಯುವ ಪ್ರಸಂಗಗಳು ಬರಬಹುದು. ಯಾರಾದರು ಸರಿ ಇದರಿಂದ ಆಘಾತಕ್ಕೊಳಗಾಗುವುದಂತು ಖಂಡಿತ. ಆ ಕ್ಷಣದಿಂದ ಆತನ ಮನಸ್ಥಿತಿಯಲ್ಲಾಗುವ ಬದಲಾವಣೆಗಳು ಆತನನ್ನು ಖನ್ನತೆಗೆ ದೂಡಬಹುದು. ಈ ಸಂದರ್ಭದಲ್ಲಿ ಆ ವ್ಯಕ್ತಿಗೆ ಅತ್ಯಂತ ಅವಶ್ಯವಿರುವುದು ಆಪ್ತಸಮಾಲೋಚನೆ.

ಆಪ್ತಸಮಾಲೋಚನೆಯ ಹಂತಗಳು

ಒಬ್ಬ ಸೋಂಕಿತ ವ್ಯಕ್ತಿ ಆಪ್ತಸಮಾಲೋಚಕನ ಹತ್ತಿರ ಬಂದಾಗ ಆತನಲ್ಲಿ ಹಲವಾರು ಗೊಂದಲಗಳಿರುತ್ತವೆ. ಮೊದಲ ಹಂತದಲ್ಲಿ ಸಮಾಲೋಚಕರು ಆ ವ್ಯಕ್ತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವುದರಿಂದ ಸಮಾಲೋಚಕನ ಮೇಲೆ ಆತನಿಗೆ ವಿಶ್ವಾಸ, ಭರವಸೆ, ಆತ್ಮೀಯತೆಯ ಭಾವನೆ ಮೂಡುತ್ತದೆ. ಸೋಂಕಿತನಿಗೆ ತನ್ನಲ್ಲಿ ಮಡುಗಟ್ಟಿದ ದುಃಖ, ಒತ್ತಡಗಳನ್ನು ಹೊರಹಾಕಲು ಸೂಕ್ತ ವಾತಾವರಣ ಇಲ್ಲಿ ನಿರ್ಮಾಣವಾಗುತ್ತದೆ.

ಎರಡನೆಯ ಹಂತದಲ್ಲಿ ಸಮಾಲೋಚಕರು ಸೋಂಕಿತ ಹೊಂದಿರಬಹುದಾದ ಸಮಸ್ಯೆಯ ವಿಮರ್ಷೆಯನ್ನು ಮಾಡುತ್ತಾರೆ. ಎಚ್‌ಐವಿ ಸೋಂಕಿತನಲ್ಲಿರುವ ಭಯ, ಮಾನಸಿಕ ಒತ್ತಡ, ಸಾಮಾಜಿಕ ಕಳಂಕ, ಕಾಯಿಲೆ ಉಲ್ಬಣಗೊಳ್ಳುವ ಆತಂಕ, ಭವಿಷ್ಯದ ಕುರಿತಾಗಿ ಅಸ್ಥಿರತೆ ಹೀಗೆ ಇತರ ತಪ್ಪು ತಿಳುವಳಿಕೆಯಿಂದ ಅವರನ್ನು ಹೊರ ತರುತ್ತಾರೆ. ಸೋಂಕಿತ ಕೂಡ ತನ್ನ ಮನೋಬಲ, ಸೂಕ್ತ ಚಿಕಿತ್ಸೆ, ಸುರಕ್ಷಾ ಕ್ರಮಗಳಿಂದ ಸಾಮಾನ್ಯರಂತೆ ಬದುಕಲು ಸಾಧ್ಯವಿದೆ ಎಂಬ ಆತ್ಮ ವಿಶ್ವಾಸವನ್ನು ಮೂಡಿಸುತ್ತಾರೆ.

ಸೋಂಕಿತ ಯಾವ ಮೂಲದಿಂದ ಎಚ್‌ಐವಿ ಸೋಂಕನ್ನು ಪಡೆದಿರಬಹುದೆಂದು ಸಮಾಲೋಚನೆಯ ಮೂಲಕ ತಿಳಿದುಕೊಂಡು, ಅಪಾಯಕರ ಚಟುವಟಿಕೆಗಳಿಂದ ದೂರವಿರುವಲ್ಲಿ ಹಾಗೂ ಸಂಗಾತಿಗೆ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳನ್ನು ತಿಳಿಸುತ್ತಾರೆ. ಇಲ್ಲಿ ಎಚ್‌ಐವಿ ಕುರಿತಂತೆ ಮಾಹಿತಿಯನ್ನು ನೀಡುವುದಷ್ಟೇ ಅಲ್ಲದೆ ಕ್ಲೈಂಟ್‌ನ ಭಾವನೆಗಳಿಗೆ ಸ್ಪಂದಿಸಿ ಮಾನಸಿಕ ಬೆಂಬಲವನ್ನು ನೀಡಲಾಗುತ್ತದೆ. ಒಂದು ಹಂತದಿಂದ ಮತ್ತೂಂದು ಹಂತಕ್ಕೆ ವ್ಯವಸ್ಥಿತ ರೀತಿಯಲ್ಲಿ ಕ್ಲೈಂಟ್‌ ಪ್ರಗತಿ ಹೊಂದಲು ಸಲಹೆಯನ್ನು ನೀಡಲಾಗುತ್ತದೆ. ಸೂಕ್ತ ಚಿಕಿತ್ಸೆ ಪಡೆಯುವ ಕುರಿತಂತೆ ಮಾರ್ಗದರ್ಶನ, ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳಿಂದ ಸಿಗುವ ಸೌಲಭ್ಯಗಳ ಮಾಹಿತಿಯನ್ನು ನೀಡಲಾಗುತ್ತದೆ. ಒಟ್ಟಾರೆಯಾಗಿ ಅವರಲ್ಲಿರುವ ನಕಾರಾತ್ಮಕ ಭಾವನೆಯನ್ನು ಅಲಿಸಿ ಸಕಾರಾತ್ಮಕ ಭಾವನೆಯನ್ನು ಮೂಡಿಸುವ ಪ್ರಯತ್ನ ನಡೆಸಲಾಗುತ್ತದೆ.

ಎಚ್‌ಐವಿ ಹರಡದಂತೆ ಕ್ರಮ ಕೈಗೊಳ್ಳಲು ಹಾಗೂ ಸೋಂಕಿತರಿಗೆ ಮಾನಸಿಕ ಬೆಂಬಲವನ್ನು ನೀಡುವ ಉದ್ದೇಶದಿಂದ ಆಪ್ತಸಮಾಲೋಚನಾ ಕೇಂದ್ರಗಳು ದೇಶಾದ್ಯಂತ ಇಂದು ಕೆಲಸ ಮಾಡುತ್ತಿವೆ. ಇಂದು ದೇಶಾದ್ಯಂತ ಸುಮಾರು 15,000 ಎಚ್‌ಐವಿ ಆಪ್ತಸಮಾಲೋಚನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಸಾವಿನೆಡೆಗೆ ಮುಖ ಮಾಡುವ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು, ರೋಗ ಹರಡುವಿಕೆಯೂ ನಿಯಂತ್ರಣಕ್ಕೆ ಬಂದಿದೆ. ಬಾಳಿ ಬದುಕಬೇಕಾದ ಜೀವಗಳು ಸಾವಿನತ್ತ ಸಾಗದಂತೆ ಅಭಯ ಹಸ್ತವನ್ನು ಚಾಚುವಲ್ಲಿ ಆಪ್ತ ಸಮಾಲೋಚನೆ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಿದೆ. ಎಲ್ಲ ಆಪ್ತಸಮಾಲೋಚಕರಿಗೊಂದು ಸಲಾಂ.

 ಗೌರಿ ಚಂದ್ರಕೇಸರಿ

ಶಿವಮೊಗ್ಗ

ಟಾಪ್ ನ್ಯೂಸ್

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

Henley Passport Index: Singapore tops: How strong is India’s passport?

Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

16-

Shelter: ಸೂರು ಹುಡುಕಲೆಂದು ಹೊರಟೆ

13-frndshp

Friendship: ಸ್ನೇಹವೇ ಸಂಪತ್ತು

12-uv-fusion

UV Fusion: ತೆಪ್ಪ ದ್ವೀಪದೂರಿಗೊಂದು ಸಂಪರ್ಕಸೇತು

11-uv-fusion

Friendship: ವಿಶ್ವದ ಸುಂದರ ಸಂಬಂಧ ಗೆಳೆತನ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.