ಪತ್ನಿ, ಮೂವರು ಮಕ್ಕಳಿರುವ ವ್ಯಕ್ತಿ ಜತೆಗೆ 19ರ ಹರೆಯದ ನರ್ಸಿಂಗ್ ವಿದ್ಯಾರ್ಥಿನಿ ಪರಾರಿ
Team Udayavani, Dec 10, 2024, 10:00 PM IST
ಮುಳ್ಳೇರಿಯ: ಪತ್ನಿ ಹಾಗೂ ಮೂವರು ಮಕ್ಕಳಿರುವ ವ್ಯಕ್ತಿ ಜೊತೆ 19ರ ಹರೆಯದ ಯುವತಿ ಪರಾರಿಯಾದ ಘಟನೆ ನಡೆದಿದೆ.
ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಟೆಕಲ್ಲು ನಿವಾಸಿ ಯುವಕ ಹಾಗೂ ಆದೂರು ನಿವಾಸಿಯೂ, ನರ್ಸಿಂಗ್ ಟ್ರೈನಿಯಾದ ಯುವತಿ ಎರಡು ದಿನಗಳ ಹಿಂದೆ ಪರಾರಿಯಾಗಿದ್ದು, ಈ ಬಗ್ಗೆ ಆದೂರು ಪೊಲೀಸರಿಗೆ ದೂರು ನೀಡಲಾಗಿತ್ತು.
ಇದರಂತೆ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಇವರಿಬ್ಬರು ಯುವಕನ ಸಂಬಂಧಿಕರ ಮನೆಯಲ್ಲಿರುವುದು ತಿಳಿದು ಬಂತು.
ಇದರಂತೆ ಅಲ್ಲಿಗೆ ತೆರಳಿದ ಪೊಲೀಸರು ಜೋಡಿಯನ್ನು ಪತ್ತೆ ಹಚ್ಚಿ ಪೊಲೀಸ್ ಠಾಣೆಗೆ ಕರೆತಂದರು. ಯುವತಿ ಪ್ರಿಯತಮನೊಂದಿಗೆ ತೆರಳುವುದಾಗಿ ಹೇಳಿದ್ದು, ಇದರಿಂದ ಯುವತಿಯ ಹೆತ್ತವರನ್ನು ಠಾಣೆಗೆ ಕರೆಸಿದರು. ಹೆತ್ತವರಲ್ಲಿಯೂ ಯುವಕನೊಂದಿಗೆ ತೆರಳುವುದಾಗಿ ಪುನರಾವರ್ತಿಸಿದಳು.
ಯುವಕನನ್ನು ವಿಚಾರಿಸಿದಾಗ ತನ್ನ ಪತ್ನಿಯ ಒಪ್ಪಿಗೆಯೊಂದಿಗೆ ತಾನು ಯುವತಿಯನ್ನು ವಿವಾಹವಾಗುವುದಾಗಿ ತಿಳಿಸಿದ್ದನು. ತಮ್ಮ ಸಂಪ್ರದಾಯ ಪ್ರಕಾರ ಯುವಕನಿಗೆ ಎರಡು ಅಥವಾ ಮೂರು ವಿವಾಹವಾಗುವುದರಲ್ಲಿ ಅಡ್ಡಿಯಿಲ್ಲ ಎಂದು ಯುವತಿ ಹೇಳಿದಳು. ಹೆತ್ತವರಲ್ಲಿ ಕೇಳಿದಾಗ ಆಕೆ ಪ್ರಿಯತಮನೊಂದಿಗೆ ತೆರಳುವುದರಲ್ಲಿ ನಮ್ಮ ವಿರೋಧವಿಲ್ಲವೆಂದು ಹೇಳಿದ್ದು, ಇದರಿಂದ ಪ್ರಕರಣ ಸುಖಾಂತ್ಯಗೊಂಡಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.