‘ಇಂಡಿಯಾ’ ಒಕ್ಕೂಟ ನಾಯಕತ್ವ: ಮಮತಾಗೆ ಹೆಚ್ಚಿದ ಬೆಂಬಲ
ಪ್ರತಿಷ್ಠೆ ಬಿಡಿ, ಮಮತಾಗೆ ನಾಯಕತ್ವ ಒಪ್ಪಿ: ಆರ್ಜೆಡಿ
Team Udayavani, Dec 10, 2024, 9:23 PM IST
ನವದೆಹಲಿ: ಇಂಡಿಯಾ ಮೈತ್ರಿಕೂಟದೊಳಕ್ಕೆ ಉದ್ಭವಿಸಿರುವ ನಾಯಕತ್ವದ ಬಿಕ್ಕಟ್ಟು ಇನ್ನಷ್ಟು ತೀವ್ರವಾಗಿದೆ. ಮೈತ್ರಿಕೂಟಕ್ಕೆ ಪಶ್ಚಿಮ ಬಂಗಾಳ ಸಿಎಂ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ನಾಯಕತ್ವ ವಹಿಸಬೇಕೆಂಬ ಕೂಗಿಗೆ ಈಗ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಕೂಡ ದನಿಗೂಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಪ್ರತಿಷ್ಠೆ ತ್ಯಜಿಸಿ, ಮಮತಾರನ್ನು ಬೆಂಬಲಿಸಬೇಕು. ನಾವು ಅವರನ್ನು ಬೆಂಬಲಿಸುತ್ತೇವೆ. ಕಾಂಗ್ರೆಸ್ ಆಕ್ಷೇಪ ನಮಗೆ ಮುಖ್ಯವಲ್ಲ’ ಎಂದು ಹೇಳಿದ್ದಾರೆ. ಲಾಲು ಹೇಳಿಕೆಗೆ ಆಕ್ಷೇಪಿಸಿದ ಕಾಂಗ್ರೆಸ್ ಪಶ್ಚಿಮ ಬಂಗಾಳ ಹೊರತುಪಡಿಸಿ ಟಿಎಂಸಿ ಅಸ್ತಿತ್ವವೆಲ್ಲಿದೆ ಎಂದು ಪ್ರಶ್ನಿಸಿದೆ.
ನಾಯಕತ್ವ ಪ್ರಶ್ನಾರ್ಹ:
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ನಾಯಕ ಸಂಜಯ್ ರಾವತ್ ಮಾತನಾಡಿ ಕಾಂಗ್ರೆಸ್ಗಿಂತ ಹೊರತಾಗಿರುವ ಪಕ್ಷದ ನಾಯಕರು ಮೈತ್ರಿಕೂಟಕ್ಕೆ ನಾಯಕರಾಗುವುದಿದ್ದರೆ ಅದಕ್ಕೆ ನಮ್ಮ ಬೆಂಬಲ ಇದೆ. ಆ ಬಗ್ಗೆ ಚರ್ಚೆಗೆ ಸಿದ್ಧ. ಈಗಿನ ನಾಯಕತ್ವ ಪ್ರಶ್ನಾರ್ಹವಾಗಿದೆ’ ಎಂದಿದ್ದಾರೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಎಂವಿಎ ಸೋಲಿನ ಬಳಿಕ ಇಂಡಿಯಾ ಮೈತ್ರಿಕೂಟಕ್ಕೆ ನಾಯಕಿಯಾಗುವ ಬಯಕೆಯನ್ನು ಮಮತಾ ವ್ಯಕ್ತಪಡಿಸಿದ್ದರು. ಆ ಬಳಿಕ ಮೈತ್ರಿಯೊಳಗೆ ಅವರಿಗೆ ಬೆಂಬಲ ಹೆಚ್ಚಾಗಿದೆ. ಮೊದಲು ಸಮಾಜವಾದಿ ಪಕ್ಷ, ಅನಂತರ ಶಿವಸೇನೆ (ಉದ್ಧವ್ ಬಣ), ಎನ್ಸಿಪಿ (ಶರದ್ ಪವಾರ್ ಬಣ) ಮಮತಾಗೆ ಬೆಂಬಲ ತೋರಿದ್ದವು. ಅಚ್ಚರಿಯೆಂದರೆ ಲೋಕಸಭಾ ಚುನಾವಣೆವರೆಗೆ ಬಿಜೆಪಿ ಗೆಳೆಯನಾಗಿಯೇ ಇದ್ದ ಜಗನ್ ಮೋಹನ್ ರೆಡ್ಡಿ ನಾಯಕತ್ವದ ವೈಎಸ್ಆರ್ಸಿಪಿ ಕೂಡ ಇಂಡಿಯಾ ಕೂಟ ಸೇರಿಕೊಂಡು, ಮಮತಾ ನಾಯಕತ್ವವನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: Patna: ಕಣ್ಣು ತಂಪಾಗಿಸಲು ನಿತೀಶ್ ಮಹಿಳಾ ಸಂವಾದ ಯಾತ್ರೆ… ಲಾಲು ವಿವಾದ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್ಎಸ್ಎಸ್ ಕಾರಣ: ಶರದ್ ಪವಾರ್
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್ಪೋರ್ಟ್ ಎಷ್ಟು ಸದೃಢ?
MUST WATCH
ಹೊಸ ಸೇರ್ಪಡೆ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.