Karnataka: ಭ್ರಷ್ಟರ ಮೇಲೆ ಲೋಕಾಯುಕ್ತ ದಾಳಿ: 48.55 ಕೋ. ರೂ. ಆಸ್ತಿ ಪತ್ತೆ
ರಾಜ್ಯದ 10 ಮಂದಿ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ, ದಾಖಲೆಗಳು ವಶಕ್ಕೆ
Team Udayavani, Dec 10, 2024, 11:56 PM IST
ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ, ಭ್ರಷ್ಟಾಚಾರ ಆರೋಪ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿದ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 10 ಮಂದಿ ಅಧಿಕಾರಿಗಳಿಗೆ ಸೇರಿದ 50ಕ್ಕೂ ಅಧಿಕ ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.
ಒಟ್ಟು 48.55 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಸಮತೋಲನ ಆಸ್ತಿ ಪತ್ತೆಯಾಗಿದ್ದು, ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಮೂಲ ದಾಖಲೆ ನೀಡುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.
ಬೆಂಗಳೂರು ಪೂರ್ವ ವೃತ್ತದ ಬೆಸ್ಕಾಂನ ಅಧೀಕ್ಷಕ ಎಂಜಿನಿಯರ್ ಎಂ. ಲೋಕೇಶ್ (6.70 ಕೋಟಿ ರೂ. ಮೌಲ್ಯ), ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಕಂದಾಯ ನಿರೀಕ್ಷಕ ಎಸ್.ಜಿ. ಸುರೇಶ್ (1.82 ಕೋಟಿ ರೂ. ಮೌಲ್ಯ), ಬಿಬಿಎಂಪಿಯ ವಿದ್ಯಾರಣ್ಯಪುರ ಉಪ ವಿಭಾಗದ ತೆರಿಗೆ ನಿರೀಕ್ಷಕ ಕೃಷ್ಣಪ್ಪ (2.21 ಕೋಟಿ ರೂ. ಮೌಲ್ಯ), ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಜಿಲ್ಲಾ ಆರೋಗ್ಯಾಧಿಕಾರಿ ಎಂ.ಸಿ. ಸುನೀಲ್ ಕುಮಾರ್ (6.63 ಕೋಟಿ ರೂ. ಮೌಲ್ಯ), ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಕೆ. ಈಕೇಶ್ ಬಾಬು (7.92 ಕೋಟಿ ರೂ. ಮೌಲ್ಯ), ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಸಶಸ್ತ್ರ ವಿಭಾಗದ ಡಿವೈಎಸ್ಪಿ ನಂಜುಂಡಯ್ಯ (12.53 ಕೋಟಿ ರೂ. ಮೌಲ್ಯ), ಗದಗ ಜಿಲ್ಲೆಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಸ್‌ಡಿಎ ಲಕ್ಷ್ಮಣ್ ಕೊನೆರಪ್ಪ ಕರಣಿ (2.01 ಕೋಟಿ ರೂ. ಮೌಲ್ಯ), ಕಲಬುರಗಿಯ ಪಾಲಿಕೆಯ ಅಧೀಕ್ಷಕ ಎಂಜಿನಿಯರ್ ರಾಮಪ್ಪ ಪಾಂಡು ಜಾಧವ್ (3.58 ಕೋಟಿ ರೂ. ಮೌಲ್ಯ), ಕೊಪ್ಪಳ ಜಿಲ್ಲೆಯ ಅಬಕಾರಿ ಇಲಾಖೆಯ ಅಬಕಾರಿ ನಿರೀಕ್ಷಕ ರಮೇಶ್ ಬಿ. ಅಗಡಿ (1.61 ಕೋಟಿ ರೂ. ಮೌಲ್ಯ), ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಸುರೇಶ್ (3.50 ಕೋಟಿ ರೂ. ಮೌಲ್ಯ) ಅವರಿಗೆ ಸೇರಿದ ಕಚೇರಿ, ಮನೆ, ಸಂಬಂಧಿಕರ ಮನೆಗಳು ಸೇರಿ 50 ಕಡೆ ದಾಳಿ ನಡೆಸಲಾಗಿದೆ. ಈ ಸಂಬಂಧ ಆಯಾ ವ್ಯಾಪ್ತಿಯ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್
MUDA: ಮಗಳ-ಅಳಿಯಗೆ ಮುಡಾ ಸೈಟ್: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು
CLP Meeting: ನಾಳೆ ಶಾಸಕಾಂಗ ಪಕ್ಷದ ಸಭೆ: ಗರಿಗೆದರಿದ ಕುತೂಹಲ
Devotee: ಟೆಂಪಲ್ ರನ್ ಎನ್ನುವುದಾದರೆ ದೇಗುಲಗಳನ್ನು ಮುಚ್ಚಿಬಿಡಿ: ಡಿ.ಕೆ.ಶಿವಕುಮಾರ್
Threat: ಹೆಬ್ಬಾಳ್ಕರ್ ಕ್ಷಮೆ ಕೇಳದೆ ಹೋದ್ರೆ ಹತ್ಯೆ: ಸಿ.ಟಿ.ರವಿಗೆ ಬೆದರಿಕೆ ಪತ್ರ ರವಾನೆ
MUST WATCH
ಹೊಸ ಸೇರ್ಪಡೆ
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Champions Trophy: ನ್ಯೂಜಿಲ್ಯಾಂಡ್ ತಂಡ ಪ್ರಕಟ; ತಂಡಕ್ಕೆ ಮರಳಿದ ಮೂವರು ಘಟಾನುಘಟಿಗಳು
Bengaluru Crime: ಪ್ರಿಯಕರ ಆತ್ಮಹತ್ಯೆ: ಪ್ರೇಯಸಿಯೂ ನೇಣಿಗೆ ಶರಣು
Shivamogga: ಖ್ಯಾತ ಫೋಟೋ ಜರ್ನಲಿಸ್ಟ್ ಗೆ ಹೃದಯಾಘಾತ, ನಿಧನ
ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.