ಸವಾಲುಗಳ ಸರದಿ ಸರಿಗಟ್ಟಿದ ಗಟ್ಟಿ ವ್ಯಕ್ತಿತ್ವ: ನಿದ್ದೆಗೆಡಿಸಿದ್ದ ಡಾ|ರಾಜ್ ಅಪಹರಣ
Team Udayavani, Dec 11, 2024, 7:40 AM IST
ಕನ್ನಡ ಚಿತ್ರರಂಗದ ಮೇರುನಟ ಡಾ| ರಾಜಕುಮಾರ್‌ರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ ದುರ್ಘ ಟನೆಯೂ ಎಸ್.ಎಂ. ಕೃಷ್ಣ ಅವಧಿಯಲ್ಲೇ ನಡೆದಿತ್ತು. ಗಾಜನೂರಿನ ಮನೆಯಿಂದ ರಾಜಕುಮಾರ್ ಅವರೊಂದಿಗೆ ಗೋವಿಂದರಾಜು, ಸಹಾಯಕ ನಿರ್ದೇಶಕ ನಾಗಪ್ಪ ಮರಡಗಿಯನ್ನೂ ವೀರಪ್ಪನ್ ಹೊತ್ತೂಯ್ದಿದ್ದ. ತಮಿಳು ನಾಡಿನ ಅಂದಿನ ಸಿಎಂ ಕರುಣಾನಿಧಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದಾಗ ಆಸಕ್ತಿ ತೋರಿರಲಿಲ್ಲ. ಮರು ದಿನವೇ ಮದ್ರಾಸ್‌ಗೆ ತೆರಳಿದ ಕೃಷ್ಣ ಅವರು ಕರುಣಾನಿಧಿ ಅವರನ್ನು ಭೇಟಿ ಮಾಡಿದ್ದರು. ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದ ಕರುಣಾನಿಧಿ, ಪತ್ರಕರ್ತ ನಕ್ಕೀರನ್ ಗೋಪಾಲನ್‌ರನ್ನು ವೀರಪ್ಪನ್ ಇರುವ ಜಾಗಕ್ಕೆ ಕಳುಹಿಸುವ ಸಲಹೆ ನೀಡಿದರು.
ಗೋಪಾಲನ್, ರಾಜ್ ಆರೋಗ್ಯ ಚೆನ್ನಾಗಿರುವ ಮಾಹಿತಿ ತಂದೊಪ್ಪಿಸಿದ್ದರು. ವೀರಪ್ಪನ್ ಕಳುಹಿಸಿದ್ದ ಕ್ಯಾಸೆಟ್‌ನಲ್ಲಿ ಬೇಡಿಕೆಗಳ ಪಟ್ಟಿಯೇ ಇತ್ತು. ಅರಣ್ಯಾಧಿಕಾರಿ ಶ್ರೀನಿವಾಸನ್ ಹತ್ಯೆಯಲ್ಲಿ ಬೆಂಗಳೂರಿನ ಜೈಲಿನಲ್ಲಿದ್ದ ಸಹಚರರ ಬಿಡುಗಡೆ, 50 ಕೋಟಿ ರೂ. ಹಣ ಸೇರಿದಂತೆ ಹಲವು ಬೇಡಿಕೆ ಇಟ್ಟಿದ್ದ. ಅಷ್ಟರಲ್ಲಿ ವೀರಪ್ಪನ್ ಸೆರೆಯಿಂದ ನಾಗಪ್ಪ ಮಾರಡಗಿ ತಪ್ಪಿಸಿಕೊಂಡು ಬಂದು, ಒಂದಿಷ್ಟು ಮಾಹಿತಿ ಕೊಟ್ಟಿದ್ದರು. ಈ ನಡುವೆ ತಮಿಳುನಾಡಿನ ಹಲವು ಪ್ರಭಾವಿಗಳ ಸಲಹೆ ಕೇಳಿದರೂ ನಿರೀಕ್ಷಿತ ಸಹಕಾರ ಸಿಕ್ಕಿರಲಿಲ್ಲ. ಕೊಳತ್ತೂರು, ಮಣಿ, ನೆಡುಮಾರನ್ ಹೀಗೆ ಅನೇಕರ ಸಹಕಾರ ಕೋರಲಾಗಿತ್ತು. ಡಾ| ಶುಭಾ ಮೂಲಕ ಕಾರ್ಯಾಚರಣೆ ನಡೆಸಿ, ರಾಜ್‌ಬಿಡುಗಡೆಗೆ ವೀರಪ್ಪನ್‌ನನ್ನು ಒಪ್ಪಿಸಿದ್ದರು. ಆದರೆ ಆ 108 ದಿನಗಳು ನಿದ್ದೆಯಿಲ್ಲದೆ ದುಸ್ವಪ್ನವಾಗಿ ಕಾಡಿತ್ತು.
ಮಾಜಿ ಸಚಿವ ನಾಗಪ್ಪ ದುರಂತ
ರಾಜಕುಮಾರ್ ಅವರ ಅಪಹರಣವಾಗಿ ಎರಡು ವರ್ಷದ ಅನಂತರ ಚಾಮರಾಜ ನಗರ ಜಿಲ್ಲೆಯ ಹನೂರು, ಕೊಳ್ಳೆಗಾಲ ಭಾಗದಲ್ಲಿ ಪ್ರಭಾವಿ ರಾಜಕಾರಣಿಯಾಗಿದ್ದ ಮಾಜಿ ಸಚಿವ ಎಚ್.ನಾಗಪ್ಪ ಅವರನ್ನೂ ವೀರಪ್ಪನ್ ಸಹಚರರು ಅಪಹರಿಸಿದ್ದರು. ಪತ್ನಿ ಪರಿಮಳಾರನ್ನು ಬೆದರಿಸಿ, ನಾಗಪ್ಪ ಅವರ ಮನೆಯ ದೂರವಾಣಿ, ವಿದ್ಯುತ್ ಸಂಪರ್ಕದ ತಂತಿಗಳನ್ನು ಕತ್ತರಿಸಿ, ಭದ್ರತೆ ಸಿಬ್ಬಂದಿಯನ್ನು ಹೊಡೆದು ಹೊತ್ತೂಯ್ದಿದ್ದರು. ಒತ್ತೆಯಾಳಾಗಿ ಇಟ್ಟುಕೊಂಡು ಬೇಡಿಕೆಗಳನ್ನು ಇಟ್ಟಿದ್ದರು. ಸರಕಾರ ಈ ವಿಚಾರದಲ್ಲಿ ಪ್ರತಿಕ್ರಿಯಿಸುವ ಮುನ್ನವೇ ನಾಗಪ್ಪರ ಕೊಲೆಯೂ ನಡೆದು ಹೋಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
MUST WATCH
ಹೊಸ ಸೇರ್ಪಡೆ
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.